ಚಿಸ್ ಪಲಾವ್

ಬೇಕಾಗುವ ಸಾಮಗ್ರಿಗಳು
- ಅಕ್ಕಿ 1 ಲೋಟ
- ತುಪ್ಪ 100ಗ್ರಾಂ
- ತುರಿದ ಚೀಸ್ 100ಗ್ರಾಂ
- ಹಸಿ ಬಟಾಣಿ
- ಮಸಾಲೆಗೆ:ಲವಂಗ 4,ಮೆಣಸು ಕಾಳು8,ಚಕ್ಕೆ ಪುಡಿ 1ಚಮಚ,ಜೀರಿಗೆ 1ಚಮಚ,ಕೊತ್ತಂಬರಿ ಸೊಪ್ಪು 1 ಕಂತೆ,ತೆಂಗಿನ ತುರಿ 1ಬಟ್ಟಲು,ಉಪ್ಪು2ಚಮಚ
ಮಾಡುವ ವಿಧಾನ
- ಮೊದಲು ಮಸಾಲೆ ಸಾಮಗ್ರಿಗಳನ್ನು ರುಬ್ಬಿಕೊಳ್ಳಿ
- ಅಕ್ಕಿಯನ್ನು ತೊಳೆದು ಉದುರುದುರಾಗಿ (ತುಪ್ಪ ಬೆರೆಸಿ) ಅನ್ನ ಮಾಡಿಕೊಳ್ಳಿ, ತಣ್ಣಗಾಗಲು ಬಿಡಿ
- ಒಗ್ಗರಣೆಗೆ ತುಪ್ಪ ಹಾಕಿ ಲವಂಗ,ಮೆಣಸಿನ ಕಾಳು,ಚಕ್ಕೆ ಪುಡಿ,ಜೀರಿಗೆ ಹಾಕಿ.
- ತಕ್ಷಣ ಅನ್ನ ಹಾಕಿ ಕಲಸಿ,ತಟ್ಟೆಯಲ್ಲಿ ಆರಲು ಹರಡಿ.
- ಬೆಂದ ಬಟಾಣಿ,ಚೀಸ್ ತುರಿ,ತೆಂಗಿನತುರಿಯನ್ನು ಅನ್ನ ಆರಿದ ಮೇಲೆ ಸೇರಿಸಿ,ಬಡಿಸಿ.