ವೆಜಿಟೆಬಲ್ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು
- ಅಕ್ಕಿ2ಪಾವು
- ಈರುಳ್ಳಿ4
- ಆಲೂಗಡ್ಡೆ 3
- ಹಸಿ ಬಟಾಣಿ 1 ಬಟ್ಟಲು
- ಕ್ಯಾರೆಟ್ 100ಗ್ರಾಂ
- ಹುರಳಿ ಕಾಯಿ100 ಗ್ರಾಂ
- ಹೂಕೋಸು 100ಗ್ರಾಂ
- ಟೊಮೋಟೊ 3
- ಒಣ ದ್ರಾಕ್ಷಿ ಹತ್ತು
- ಗೋಡಂಬಿ ಹತ್ತು
- ಜೀರಿಗೆ 1ಚಮಚ
- ಲವಂಗ 2
- ಏಲಕ್ಕಿ 4
- ತುಪ್ಪ 100 ಗ್ರಾಂ
- ಉಪ್ಪು 2ಚಮಚ
- ಮೆಣಸು ಕಾಳು ಅರ್ಧ ಚಮಚ
- ಮಸಾಲೆಗೆ:ಬೆಳ್ಳುಳ್ಳಿ4ಎಳಸು,ಈರುಳ್ಳಿ1,ಶುಂಟಿ 2ಗೋಲಿ ಗಾತ್ರ,ಜೀರಿಗೆ 2 ಚಮಚ,ಒಣ ಮೆಣಸಿನ ಕಾಯಿ 4,ಕೊತ್ತಂಬರಿ ಸೊಪ್ಪು ಅರ್ಧ ಕಂತೆ
ಮಾಡುವ ವಿಧಾನ
- ಮೊದಲುಮಸಾಲೆ ಸಾಮಗ್ರಿಗಳನ್ನು ರುಬ್ಬಿಕೊಳ್ಳಿ
- ಈರುಳ್ಳೀಯನ್ನು ಸಣ್ಣದಾಗಿ,ತೆಳ್ಳಗೆ ಸೀಳಿಡಿ, ಆಲೂಗಡ್ಡೇಯನ್ನು ಹೋಳು ಮಾಡಿಡಿ
- ತುಪ್ಪವನ್ನು ದಪ್ಪ ತಳದ ಪಾತ್ರೆಗೆ ಹಾಕಿ,ತುಪ್ಪ ಕಾದ ಮೇಲೆ ಲವಂಗ,ಏಲಕ್ಕಿ,ಮೆಣಸು ಕಾಳು ಸೇರಿಸಿ ಒಗ್ಗರಣೆ ಹಾಕಿ
- ನಂತರ ಹೆಚ್ಚಿದ ಈರುಳ್ಳಿಯನ್ನು ಹಾಕಿ ಕೆಂಪಗೆ ಹುರಿಯಿರಿ
- ಐದು ನಿಮಿಷದ ನಂತರ ಹೆಚ್ಚಿದ ಟೊಮೋಟೊ,ತೊಳೆದ ಅಕ್ಕಿ,ಎರಡು ಲೋಟ ನೀರು,ರುಬ್ಬಿದ ಮಸಾಲೆ,ತರಕಾರಿಗಳನ್ನು ಹಾಕಿ ಬೇಯಿಸಿ
- ಅನ್ನ ಬೆಂದ ತಕ್ಷಣ ಗೋಡಂಬಿ ದ್ರಾಕ್ಷಿ ಸ್ವಲ್ಪ ತುಪ್ಪದಲ್ಲಿ ಹುರಿದು ಅಲಂಕರಿಸಿ ಬಿಸಿಯಲ್ಲೇ ಬಡಿಸಿ