ತೆಂಗಿನ ಕಾಯಿ ಹಾಲಿನ ಭಾತ್

ಬೇಕಾಗುವ ಸಾಮಗ್ರಿಗಳು
- ಅಕ್ಕಿ1ಪಾವು
- ತೆಂಗಿನಕಾಯಿ 1(ಅಥವಾ 1ಟಿನ್ coconut cream)
- ಮೆಣಸಿನಪುಡಿ 2ಚಮಚ
- ಗೋಡಂಬಿ 100ಗ್ರಾಂ
- ಒಣದ್ರಾಕ್ಷಿ 100ಗ್ರಾಂ
- ಉಪ್ಪು 1-2 ಚಮಚ
- ತುಪ್ಪ 2ಚಮಚ
- ಒಗ್ಗರಣೆಗೆ-ಎಣ್ಣೆ 40ಗ್ರಾಂ,ಅರಿಶಿನ 1ಚಿಟಿಕೆ,ಇಂಗು 1ಚಿಟಿಕೆ, ಸಾಸಿವೆ 1ಚಮಚ,ಕರಿಬೇವು 2ಎಳಸು
- ಕೊತ್ತಂಬರಿ ಸೊಪ್ಪು 1ಕಂತೆ
ಮಾಡುವ ವಿಧಾನ
- ಅಕ್ಕಿಯನ್ನು ತೊಳೆದು ಉದುರುದುರಾಗಿ (ತುಪ್ಪ ಬೆರೆಸಿ) ಅನ್ನ ಮಾಡಿಕೊಳ್ಳಿ, ತಣ್ಣಗಾಗಲು ಬಿಡಿ
- ತೆಂಗಿನ ಕಾಯನ್ನು ತುರಿದು ರುಬ್ಬಿ ಹಾಲನ್ನು ತೆಗೆದುಕೊಳ್ಳಿ
- ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ಒಗ್ಗರಣೆ ಮಾಡಿಕೊಳ್ಳಿ
- ನಂತರ ಅದಕ್ಕೆ ಗೋಡಂಬಿ ದ್ರಾಕ್ಷಿ ಹಾಲು ಹಾಕಿ ಎರಡು ನಿಮಿಷ ಕುದಿಸಿ
- ಅನ್ನವನ್ನು ಬಾಣಲೆಗೆ ಹಾಕಿ,ಮೆಣಸಿನಪುಡಿ ಬೆರೆಸಿ, ಮೊಗಚುವ ಕೈಯಿಂದ ಐದು ನಿಮಿಷ ಬಾಡಿಸಿ ಒಲೆ ಆರಿಸಿ ಮುಚ್ಚಿಡಿ
- ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸಿಂಪಡಿಸಿ ಉಣಬಡಿಸಿ