ಧಿಡೀರ್ ರೈಸ್ ಭಾತ್

ಬೇಕಾಗುವ ಸಾಮಗ್ರಿಗಳು
- ಅಕ್ಕಿ1ಪಾವು
- ತುಪ್ಪ 50 ಗ್ರಾಂ
- ಕಡಲೆ ಬೀಜ 2ಚಮಚ
- ಕರಿಮೆಣಸು 10
- ಚಕ್ಕೆ 1ಚಿಕ್ಕ ತುಂಡು
- ಈರುಳ್ಳಿ2
- ಸಾಸಿವೆ 1ಚಮಚ
- ಉದ್ದಿನಬೇಳೆ 1ಚಮಚ
- ಕಡಲೇ ಬೇಳೆ1ಚಮಚ
- ಉಪ್ಪು1ಚಮಚ
ಮಾಡುವ ವಿಧಾನ
- ಅಕ್ಕಿಯನ್ನು ತೊಳೆದು ಉದುರುದುರಾಗಿ (ತುಪ್ಪ ಬೆರೆಸಿ) ಅನ್ನ ಮಾಡಿಕೊಳ್ಳಿ, ತಣ್ಣಗಾಗಲು ಬಿಡಿ
- ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಕಾದನಂತರ ಸಾಸಿವೆ,ಉದ್ದಿನಬೇಳೆ,ಕಡಲೇ ಬೇಳೆ,ಕಡಲೆ ಬೀಜ ಹಾಕಿ ಒಗ್ಗರಣೆ ಮಾಡಿಕೊಳ್ಳಿ
- ಈರುಳ್ಳಿಯನ್ನು ಹೆಚ್ಚಿ ಒಗ್ಗರಣೆಗೆ ಹಾಕಿ ಕೆಂಪಗೆ ಹುರಿಯಿರಿ
- ಒಂದು ಲೋಟ ನೀರು ಹಾಕಿ ಕುದಿಯುವಾಗ ಚಕ್ಕೆ ಪುಡಿಮಾಡಿ,ಉಪ್ಪು ಹಾಕಿ
- ಮೊದಲೇ ತಯಾರಿಸಿದ ಅನ್ನವನ್ನು ಬಾಣಲೆಗೆ ಹಾಕಿ ಕೆದಕಿ.ಒಲೆ ಆರಿಸಿ
- ಐದುನಿಮಿಷ ಭದ್ರವಾಗಿ ಮುಚ್ಚಿಡಿ, ಕತ್ತರಿಸಿದ ಕೊತ್ತಂಬರಿ ಬೆರೆಸಿ ಬಡಿಸಿ