ಹೂರಣದ ಹೋಳಿಗೆ

ಬೇಕಾಗುವ ಸಾಮಗ್ರಿಗಳು
- ಅರ್ಧಕಿಲೋ ಮೈದಾಹಿಟ್ಟು
- ಅರ್ಧಕಿಲೋ ಕಡಲೇ ಬೇಳೆ
- ಅರ್ಧಕಿಲೋ ಬೆಲ್ಲ
- ಹತ್ತು ಯಾಲಕ್ಕಿ
- ಕಾಲು ಕಿಲೋ ಎಣ್ಣೆ/ತುಪ್ಪ
ಮಾಡುವ ವಿಧಾನ
- ಜರಡಿ ಹಿಡಿದ ಮೈದಾಹಿಟ್ಟಾನ್ನು ಪೂರಿ ಹಿಟ್ಟಿನ ಹದಕ್ಕೆ ಕಲಸಿ,ಚೆನ್ನಾಗಿ ನಾದಿ ಎಣ್ಣೆಯಲ್ಲಿ ಅದ್ದಿಡಿ(ಎರಡರಿಂದ ನಾಲ್ಕು ತಾಸು)
- ಕಡಲೆ ಬೇಳೆ ಎರಡುಘಂಟೆ ನೆನೆಸಿ,ನಂತರ ನೀರಿನಲ್ಲಿ ಕುದಿಸಿ ನೀರನ್ನು ಬಸಿದುಕೊಳ್ಳಿ
- ಬೆಲ್ಲದ ಪುಡಿ ಬೆರೆಸಿ ಬಾಣಲೆಯಲ್ಲಿ ಬಾಡಿಸಿ,ಬೆಲ್ಲ ಕರಗಿದ ನಂತರ ಆರಿಸಿ,ರುಬ್ಬಿಟ್ಟುಕೊಂಡರೆ ಹೂರಣ ಸಿದ್ಧ
- ಮುಂಚೆ ಕಲಸಿದ್ದ ಮೈದಾ ಹಿಟ್ಟನ್ನು ನಿಂಬೆ ಗಾತ್ರದಲ್ಲಿ ತೆಗೆದು ಬಟ್ಟಲಿನಂತೆ ಹಳ್ಳಮಾಡಿ ಹೂರಣ ತುಂಬಿ ಅದೇ ಹಿಟ್ಟಿನಿಂದ ಮುಚ್ಚಿ ಲಟ್ಟಿಸಿ
- ಕಾದ ಕಾವಲಿಯ ಮೇಲೆ ತುಪ್ಪ ಬಳಸಿ ಸುಡುವುದು.
ಬಿಸಿಬಿಸಿ ಇದ್ದಾಗಲೇ ಹಾಲು ತುಪ್ಪದೊಡನೆ ತಿನ್ನಲು ಕೊಡಿ