ಶುಂಠಿ ಮೊಸರು

ಬೇಕಾಗುವ ಸಾಮಗ್ರಿಗಳು
- ಎರಡು ದೊಡ್ಡ ಹಸಿ ಶುಂಠಿ
- ಒಂದು ಬಟ್ಟಲು ಮೊಸರು
- ಅರ್ಧಚಮಚ ಸಕ್ಕರೆ
- ತೆಂಗಿನ ತುರಿ ಒಂದು ಸೌಟು್
- ಒಗ್ಗರಣೆಗೆ ಎಣ್ಣೆ,ಇಂಗು,ಅರ್ಧ ಚಮಚ ಸಾಸಿವೆ ಮತ್ತು ಜೀರಿಗೆ,ಕರಿಬೇವು
- ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
- ಶುಂಠಿ ಹೆರೆದು ಕಣಕವಾಗುವಂತೆ ತೆಂಗು ಸೇರಿಸಿ ಅರೆಯಿರಿ
- ಕಣಕ ಬೆರೆಸಿ ಮೊಸರು ಕಡೆದು ಉಪ್ಪು ಸೇರಿಸಿ
- ಸಾಸಿವೆ,ಜೀರಿಗೆ,ಕರಿಬೇವು,ಇಂಗು ಒಗ್ಗರಣೆ ಹಾಕಿ ಮೊಸರಿಗೆ ಸುರುವಿ