ಬಂನ್ಸ್(ಮಂಗಳೂರು ಶೈಲಿ)

ಬೇಕಾಗುವ ಸಾಮಗ್ರಿಗಳು
- ಅರ್ಧ ಕಿಲೋ ಮೈದಾಹಿಟ್ಟು
- ಒಂದು ಲೋಟ ಸಕ್ಕರೆ
- ನಾಲ್ಕಾರು ಬಾಳೇಹಣ್ಣು
- ಏಲಕ್ಕಿ ಪುಡಿ ಅರ್ಧ ಚಮಚ
- ಎಣ್ಣೆ ಕರಿಯಲು
ಮಾಡುವ ವಿಧಾನ
- ಮೈದಾಹಿಟ್ಟಿಗೆ,ಏಲಕ್ಕಿ ಪುಡಿ, ಕಿವಿಚಿದ ಬಾಳೇಹಣ್ಣನ್ನು ಬೆರೆಸಿ ಚಪಾತಿ ಹಿಟ್ಟಿನಂತೆ ಕಲಸಿ(ನೀರು ಬೇಡ)
- ಕಲಸುವಾಗ ಒಂದೆರೆಡು ಚಮಚ ಕಾದ ಎಣ್ಣೆ ಬೆರೆಸಿಕೊಂಡರೆ ಬಂನ್ಸ್ ಗರಿ ಗರಿಯಾಗಿರುತ್ತದೆ.
- ಎಣ್ಣೆ ಕಾದ ನಂತರ ಪೂರಿಗಿಂತ ಪುಟ್ಟದಾಗಿ ಲಟ್ಟಿಸಿ ಕರೆಯಿರಿ.
- ಉಬ್ಬಿ, ಬೆಂದ ಬಂನ್ಸ್ ಹದಿನೈದು ದಿನಗಳವರೆಗೂ ಫ್ರಿಡ್ಜ್ ಇಲ್ಲದೇ ಇಡಬಹುದು