ಹುರಳಿ ಸಾರು

ಬೇಕಾಗುವ ಸಾಮಗ್ರಿಗಳು
- ಅರ್ಧ ಕಿಲೋ ಹುರಳಿ
- ಅರ್ಧ ತೆಂಗಿನ ಕಾಯಿ ತುರಿ
- ಒಂದು ಚಮಚ ಜೀರಿಗೆ
- ನಿಂಬೆ ಗಾತ್ರ ಹುಣಸೇ ಹಣ್ಣು
- ಐದಾರು ಒಣ ಮೆಣಸಿನ ಕಾಯಿ
- ಒಂದು ಸಣ್ಣ ಸೌಟಿನಷ್ಟು ಕೊತ್ತಂಬರಿ ಬೀಜ
- ತುಪ್ಪ ಅಥವಾ ಎಣ್ಣೆ ಒಂದು ಚಮಚ, ಸಾಸಿವೆ
ಮಾಡುವ ವಿಧಾನ
- ಹುರಳಿಯನ್ನು ಪಾತ್ರೆಯೊಂದರಲ್ಲಿ ಅಥವಾ ಕುಕ್ಕರ್ನಲ್ಲಿ ಬೇಯಿಸಿಕೊಳ್ಳಿ.
- ಕಾಯಿತುರಿ,ಕೊತ್ತಂಬರಿ ಬೀಜ,ಜೀರಿಗೆ ಜೊತೆಗೆ ಬೆಂದ ಕಾಳನ್ನೂ ಸ್ವಲ್ಪ ಬೆರೆಸಿ ರುಬ್ಬಿಕೊಳ್ಳಿ
- ಬೆಂದ ಕಾಳಿಗೆ ಮಿಶ್ರಣವನ್ನು ಬೆರೆಸಿ ಉಪ್ಪು ಸೇರಿಸಿ ಗೊಟಾಯಿಸಿ.
- ಹುಣಸೇ ರಸವನ್ನು ಬೆರೆಸಿ, ಒಗ್ಗರಣೆ ಹಾಕಿ ಒಲೆ ಆರಿಸಿ.