ಮೈಸೂರು ಪಾಕ್

ಬೇಕಾಗುವ ಸಾಮಗ್ರಿಗಳು
- ಎರಡು ಬಟ್ಟಲು ಕಡಲೇಹಿಟ್ಟು
- ಕಾಲು ಕಿಲೋ ತುಪ್ಪ
- ನೀರು(ಕಾಲು ಲೋಟ)
- ಸಕ್ಕರೆ ಕಾಲು ಕಿಲೋ
ಮಾಡುವ ವಿಧಾನ
- ಮೊದಲು ಕಡಲೆ ಹಿಟ್ಟನು ಸ್ವಲ್ಪತುಪ್ಪದಲ್ಲಿ ಘಮಘಮ ವಾಸನೆ ಬರುವವರೆಗೂ ಹುರಿಯಿರಿ
- ಸಕ್ಕರೆಗೆ ನೀರು ಹಾಕಿ ಗಟ್ಟಿ ಎಳೆಪಾಕ ಬರುವಂತೆ ಕುದಿಸಿ
- ಪಾಕ ಚೆನ್ನಾಗಿ ಎಳೆ ಬಂದಮೇಲೆ ಒಲೆಯಮೇಲಿದ್ದಾಗಲೇ ಅದಕ್ಕೆ ಹಿಟ್ಟನ್ನು ಸುರಿಯಿರಿ
- ಉಳಿದತುಪ್ಪವನ್ನು ಒಂದೇಸಮನೆ ಹಾಕುತ್ತಾ ತಿರುವುತ್ತಿರಿ
- ಮಿಶ್ರಣ ಪಾತ್ರೆಯ ತಳ ಬಿಡುವ ಹೊತ್ತಿಹೆ ತುಪ್ಪ ಸವರಿದ ತಟ್ಟೆಗೆ ಸುರಿಯಿರಿ
- ಐದು ನಿಮಿಷದ ಬಳಿಕ ಚಾಕುವಿನಿಂದ ಬೇಗಾದ ಆಕಾರಕ್ಕೆ ಕತ್ತರಿಸಿ
- ನಂತರ ಒಂದು ಕಾಗದದ ಮೇಲೆ ಬೋರಲು ಹಾಕಿ ಮೈಸೂರ್ ಪಾಕ ತಾನಾಗೇ ಬಿಡಿಬಿಡಿಯಾಗಿ ಇದ್ದು ತಿನ್ನಲು ಚೆನ್ನ