ಗಸಗಸೆ ಪಾನಕ

ಬೇಕಾಗುವ ಸಾಮಗ್ರಿಗಳು
- ಗಸಗಸೆ ಒಂದು ಚಿಕ್ಕ ಲೋಟ
- ತೆಂಗಿನಕಾಯಿ ತುರಿ ಒಂದು ಚಮಚ
- ಸಿಹಿಗೆ ಬೆಲ್ಲ
- ವಾಸನೆಗೆ ಚಿಟಿಕೆ ಏಲಕ್ಕಿ ಪುಡಿ
ಮಾಡುವ ವಿಧಾನ
- ಗಸಗಸೆ ಸೀದು ಹೋಗದ ಹಾಗೆ ಹುರಿಯಿರಿ
- ಅದನ್ನು ತೊಳೆದು ತೆಂಗಿನ ಕಾಯಿತುರಿ ಹಾಕಿ ನಯವಾಗಿ ಕಡೆಯಿರಿ
- ನಾಲ್ಕು ಲೋಟ ನೀರು ಬೆರೆಸಿ ಬೆಲ್ಲ,ಏಲಕಿ ಬೆರೆಸಿ ಕದಡಿರಿ
** ಗಸಗಸೆಯನ್ನು ನೆನೆಸಿ ರುಬ್ಬಿಯೂ ಬೇರೆ ವಿಧಾನದಲ್ಲಿ ಮಾಡಬಹುದು.ಇದು ದೇಹಕ್ಕೆ ಬಹಳ ತಂಪು