ಮಸಾಲೆ ಮಾವಿನ ಭಾತ್

ಬೇಕಾಗುವ ಸಾಮಗ್ರಿಗಳು
- ರುಬ್ಬಲಿಕ್ಕೆ-ಸಾಸಿವೆ 1 ಚಮಚ,ಜೀರಿಗೆ 1 ಚಮಚ,ಕಾಯಿತುರಿ ಅರ್ಧ ಲೋಟ,ಒನ ಮೆಣಸಿನಕಾಯಿ 8-10,ಉಪ್ಪು ರುಚಿಗೆ,ಅರಿಸಿನ ಅರ್ಧ ಚಮಚ,ಮಾವಿನತುರಿ ಮುಕ್ಕಾಲು ಲೋಟ,ಇಂಗು 1 ಚಿಟಿಕೆ
- ಇತರೆ:ಎಣ್ಣೆ ಅರ್ಧ ಸೌಟು,ಜೀರಿಗೆ, ಮೆಂತ್ಯಕಾಳು, ಅರಿಸಿನ ಪ್ರತಿಯೊಂದೂ ಅರ್ಧ ಚಮಚ,ಕಡ್ಲೇ ಬೇಳೆ ಉದ್ದು ಎರಡು ಚಮಚ, ಕರಿಬೇವು ಸ್ವಲ್ಪ ಒಣಮೆಣಸಿನ ಕಾಯಿ ಎರಡು, ಕೊತ್ತಂಬರಿ ಅರ್ಧಕಂತೆ,ಅನ್ನ ಒಂದು ಲೋಟ ಅಕ್ಕಿಯದು
ಮಾಡುವ ವಿಧಾನ
- ರುಬ್ಬಲು ಹೇಳಿರುವ ಪದಾರ್ಥಗಳನ್ನು ಸೇರಿಸಿ ತರಿತರಿಯಾಗಿ ಪುಡಿಮಾಡಿ ಅಥವಾ ಗಟ್ಟಿಯಾಗಿ ರುಬ್ಬಿಕೊಳ್ಳಿ
- ಬಾಣಲೆಯಲ್ಲಿ ಎಣ್ಣೆಗೆ, ಜೀರಿಗೆ,ಮೆಂತ್ಯಕಾಳು,ಕಡ್ಲೇ ಬೇಳೆ ಉದ್ದು ಹಾಕಿ ಬಾಡಿಸಿ
- ಕೆಂಪಗಾದ ಮೇಲೆ ಅರಿಸಿನ,ಕರಿಬೇವು,ಒಣಮೆಣಸಿನ ಕಾಯಿ ಚೂರು, ನಂತರ ರುಬ್ಬಿದ ಮಿಶ್ರಣ ಹಾಕಿ ಬಾಡಿಸಿ,ಇಳಿಸಿ
- ಅದನ್ನು ಅನ್ನಕ್ಕೆ ಕೊತ್ತಂಬರಿ ಚೂರುಮಾಡಿ ಸೇರಿಸಿ ಕಲಸಿ