ಅನಾನಸ್(ಪೈನಾಪಲ್) ರಾಯತ

ಬೇಕಾಗುವ ಸಾಮಗ್ರಿಗಳು
- ಪೈನಾಪಲ್ ಒಂದು ಲೋಟ
- ಗಟ್ಟಿಮೊಸರು ಎರಡು ಲೋಟ
- ಅರ್ಧ ಲೋಟ ಹಾಲು
- ಅರ್ಧ ಚಮಚ ಕರಿಮೆಣಸು
- ಸಕ್ಕರೆ
- ಉಪ್ಪು ಒಂದೊಂದು ಚಮಚ
- ಜಾಕಾಯಿ ಪುಡಿ ಕಾಲು ಚಮಚ
- ಒಗ್ಗರಣೆಗೆ ಜೀರಿಗೆ, ತುಪ್ಪ,ಚಿಟಿಕೆ ಇಂಗು
ಮಾಡುವ ವಿಧಾನ
- ಹಾಲು ಮೊಸರು ಕಡೆದು,ಉಪ್ಪು ಸಕ್ಕರೆ ಬೆರೆಸಿ
- ಪೈನಾಪಲ್ ಚೆನ್ನಾಗಿ ಕಿವುಚಿ ಅಥವಾ ಸಣ್ಣಗೆ ಹೆಚ್ಚಿ ಮೊಸರಿಗೆ ಸೇರಿಸಿ
- ಒಗ್ಗರಣೆ ಹಾಕಿ, ಅದರ ಮೇಲೆ ಜಾಕಾಯಿ ಪುಡಿ ಉದುರಿಸಿ ತಿನ್ನಲು ಕೊಡಿ