ಬೂಂದಿ ರಾಯತ

ಬೇಕಾಗುವ ಸಾಮಗ್ರಿಗಳು
- ಗಟ್ಟಿಮೊಸರು ಎರಡು ಲೋಟ
- ಅರ್ಧ ಲೋಟ ಹಾಲು
- ಬೂಂದಿ ಒಂದು ಲೋಟ
- ಉಪ್ಪು ರುಚಿಗೆ
- ಒಗ್ಗರಣೆಗೆ ಸಾಸಿವೆ, ಜೀರಿಗೆ, ತುಪ್ಪ,ಚಿಟಿಕೆ ಇಂಗು, ಎರಡು ಒಣ ಮೆಣಸಿನಕಾಯಿ,ನಾಲ್ಕಾರು ಕರಿಬೇವು ಎಲೆ
- ಕೊತ್ತಂಬರಿ ಸೊಪ್ಪು ಅರ್ಧ ಕಟ್ಟು
ಮಾಡುವ ವಿಧಾನ
- ಮೊಸರು ಕಡೆದು ಹಾಲು ಬೆರೆಸಿ ಚೆನ್ನಾಗಿ ಕಡೆಯಿರಿ, ಉಪ್ಪು ಹಾಕಿ
- ಬೂಂದಿಯನ್ನು ನೀರಿನಲ್ಲಿ ಐದು ನಿಮಿಷ ನೆನೆಸಿ ಹಿಂಡಿ(ಮೃದುವಾಗಿ) ನೀರು ತೆಗೆದು,ಮೊಸರು ಬೆರೆಸಿ
- ಒಗ್ಗರಣೆ ಹಾಕಿ ಮಿಶ್ರಣಕ್ಕೆ ಬೆರೆಸಿ
- ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿ ಅದಕ್ಕೆ ಸೇರಿಸಿ
- ಮೆಣಸಿನ ಪುಡಿ ಅಥವಾ ಸಾರಿನ ಪುಡಿ ಚಿಟಿಕೆ ಬೆರೆಸಿದರೆ ರುಚಿ ಹೆಚ್ಚು