ಈರೂಳ್ಳಿ ರಾಯತ

ಬೇಕಾಗುವ ಸಾಮಗ್ರಿಗಳು
- ಕಾಲು ಕಿಲೋ ಬಿಳಿ ಈರೂಳ್ಳಿ
- ಎರಡು ಲೋಟ ಗಟ್ಟಿ ಮೊಸರು
- ನಾಲ್ಕು ಕರಿಮೆಣಸು
- ಅರ್ಧ ಚಮಚ ಜೀರಿಗೆ
- ಅರ್ಧ ಚಮಚ ಅಚ್ಚಮೆಣಸಿನ ಪುಡಿ (ಸಾರಿನ ಪುಡಿಯನ್ನೂ ಉಪಯೋಗಿಸಬಹುದು)
- ಉಪ್ಪು ರುಚಿಗೆ
- ಒಗ್ಗರಣೆಗೆ ಸಾಸಿವೆ, ಜೀರಿಗೆ, ತುಪ್ಪ,ಚಿಟಿಕೆ ಇಂಗು, ಎರಡು ಹಸಿ ಮೆಣಸಿನಕಾಯಿ (ಸಣ್ಣಗೆ ಹೆಚ್ಚಿದ್ದು)
ಮಾಡುವ ವಿಧಾನ
- ಈರೂಳ್ಳಿಯನ್ನು ಕೆಂಡದಲ್ಲಿ ಅಥವಾ ದೊಡ್ಡ ಹೋಳು ಮಾಡಿ ಓವನ್ ನಲ್ಲಿ ಕೆಂಪಗೆ ಸುಟ್ಟು ತೆಗೆಯಿರಿ
- ತಣ್ನಗಾದ ಈರೂಳ್ಳಿಯನ್ನು ಚೆನ್ನಾಗಿ ಕಿವುಚಿ ಮೊಸರಿಗೆ ಉಪ್ಪುಸೇರಿಸಿ ಬೆರೆಸಿ
- ತುಪ್ಪದ ಒಗ್ಗರಣೆ ಹಸಿಮೆಣಸು,ಜೀರಿಗೆ,ಸಾಸಿವೆ ಇಂಗು ಹಾಕಿ ಮಾಡಿ ಮಿಶ್ರಣಕ್ಕೆ ಬೆರೆಸಿ