ಖರ್ಜೂರದ ರಾಯತ

ಬೇಕಾಗುವ ಸಾಮಗ್ರಿಗಳು
- ಒಂದು ಲೋಟ ಮೊಸರು
- ನೂರು ಗ್ರಾಂ ಖರ್ಜೂರ
- ಒಂದು ಹೋಳು ತೆಂಗಿನತುರಿ
- ಕರಿಮೆಣಸು ನಾಲ್ಕು
- ಉಪ್ಪು ರುಚಿಗೆ
ಮಾಡುವ ವಿಧಾನ
- ಖರ್ಜೂರವನ್ನು ಬೀಜ ತೆಗೆದು, ಮೆಣಸು ಮತ್ತು ತೆಂಗಿನ ಕಾಯಿ ತುರಿಯೊಂದಿಗೆ ಸೇರಿಸಿ ರುಬ್ಬಿಕೊಳ್ಳಿ
- ಅದಕ್ಕೆ ಉಪ್ಪು ಸೇರಿಸಿ ಮೊಸರಿಗೆ ಬೆರೆಸಿ
- ಪುಟ್ಟ ಬಾಣಲೆಯಲ್ಲಿ ತುಪ್ಪದ ಒಗ್ಗರಣೆ ಮಾಡಿ ಮಿಶ್ರಣಕ್ಕೆ ಬೆರೆಸಿ, ಉಣಬಡಿಸಿ