ಮೆದುವಡೆ

ಬೇಕಾಗುವ ಸಾಮಗ್ರಿಗಳು
- ಉದ್ದಿನ ಕಾಳು ಒಂದು ಲೋಟ
- ಉಪ್ಪು ಒಂದು ಚಮಚ
- ಅಕ್ಕಿಹಿಟ್ಟು ಎರಡು ಚಮಚ
- ಹಾಗೂ ಕರಿಯಲು ಎಣ್ಣೆ
ಮಾಡುವ ವಿಧಾನ
- ಕಾಳನ್ನು ಎರಡು ಘಂಟೆ ನೆನೆಸಿಡಿ
- ನೀರನ್ನು ಬಸಿದು ನೊರೆ ಬರುವವರೆಗು ರುಬ್ಬಿಕೊಳ್ಳಿ, ನಂತರ ಉಪ್ಪು, ಅಕ್ಕಿಹಿಟ್ಟು ಸೇರಿಸಿ
- ಒದ್ದೆಯಾದ ಕೈಕಳಿಂದ ಕೈಯಲ್ಲೇ ಅಥವಾ ಪ್ಲಾಸ್ಟಿಕ್ ಹಾಳೆ ಅಥವಾ ಬೇಕಿಂಗ್ ಕಾಗದದ ಮೇಲೆ ಗುಂಡಗೆ ಉಂಡೆ ಮಾಡಿ, ಚಪ್ಪಟೆ ಯಾಗಿ ಒತ್ತಿ ಮಧ್ಯೆ ಸಣ್ನ ತೂತು ಮಾಡಿ ಎಣ್ಣೆಯಲ್ಲಿ ಹಾಕಿ ಕರೆಯಿರಿ
- ಎರಡೂ ಕಡೆ ಮಗುಚಿ ಕೆಂಪಗಾದ ಮೇಲೆ ತೆಗೆದು ಇನ್ನಲು ಕೊಡಿ
- ಇಡ್ಲಿ,ಸಾಂಬಾರು ಅಥವಾ ಸಾರಿನ ಜೊತೆ ತಿನ್ನಲು ಚೆನ್ನ