ಅರಿಸಿನ ದೋಸೆ/ಮಂಜಳ್ ದೋಸೆ (ಉಡುಪಿ ಶೈಲಿ)

ಬೇಕಾಗುವ ಸಾಮಗ್ರಿಗಳು
- ಅಕ್ಕಿ ಮೂರು ಲೋಟ
- ಉದ್ದು ಒಂದು ಲೋಟ
- ಮೆಂತ್ಯ ಉಪ್ಪು ಒಂದೊಂದು ಚಮಚ
- ಹಸಿ ಅರಿಸಿನ ಎರಡು ತುಂಡು
ಮಾಡುವ ವಿಧಾನ
- ಅಕ್ಕಿ,ಅರಿಸಿನ,ಮೆಂತ್ಯ ಜೊತೆಯಾಗಿ ನೆನೆಸಿ ನುಣ್ಣಗೆ ರುಬ್ಬಿ
- ಉದ್ದನ್ನು ಪ್ರತ್ಯೇಕ ನೀರಿನಲ್ಲಿ ಮೂರು ಘಂಟೆ ನೆನೆಸಿ
- ಉದ್ದನ್ನು ತೊಳೆದು ನುಣ್ಣಗೆ ನೀರಿಲ್ಲದೇ ರುಬ್ಬಿ
- ಎರಡನ್ನೂ ಉಪ್ಪು ಹಾಕಿ ಆರೇಳು ಘಂಟೆ ಉದುಗಲು ಬಿಡಿ
- ಕಾದ ಕಾವಲಿಗೆ ಎಣ್ಣೆ ಸವರಿ ದೋಸೆ ಹುಯ್ಯಿರಿ
- ಮೂಲಂಗಿ ಅಥವಾ ಪುದೀನಾ ಚಟ್ನಿ ಜೊತೆಗೆ ತಿನ್ನಲು ಚೆನ್ನ