ಮೂಲಂಗಿ ವಡೆ (ಉಡುಪಿ ಶೈಲಿ)

ಮಾಡುವ ವಿಧಾನ
- ಮೂಲಂಗಿ ಅರ್ಧ ಕಿಲೋ
- ಉಪ್ಪು ಒಂದೂವರೆ ಚಮಚ
- ಅಕ್ಕಿಹಿಟ್ಟು ಅರ್ಧಲೋಟ
- ಅರ್ಧ ಲೀಟರ್ ಎಣ್ಣೆ ಕೆಂಪಗೆ ಕರಿಯಲು
- ಹಸಿಮೆಣಸಿನಕಾಯಿ ಹತ್ತು
- ಹೆಚ್ಚಿದ ಕೊತ್ತಂಬರಿ ಒಂದು ಕಂತೆ
ಮಾಡುವ ವಿಧಾನ
- ಹಸಿಮೆಣಸಿನಕಾಯಿ , ಕೊತ್ತಂಬರಿ ಉಪ್ಪು ಸೇರಿಸಿ ಒರಟಾಗಿ ರುಬ್ಬಿಕೊಳ್ಳಿ
- ಮೂಲಂಗಿ ಮೇಲಿನ ಸಿಪ್ಪೆ ತೆಗೆದು ಅತಿ ಸಣ್ಣ ಹೋಳು ಅಥವಾ ದಪ್ಪಗೆ ತುರಿಯಿರಿ
- ರುಬ್ಬಿದ ಪದಾರ್ಥ ಮೂಲಂಗಿಗೆ ಅಕ್ಕಿಹಿಟ್ಟು ಸೇರಿಸಿ ಗಟ್ಟಿ ಮುದ್ದೆಯಾಗಿ ಮಾಡಿಕೊಳ್ಳಿ
- ತಕ್ಷಣ ಪುಟ್ಟ ಬಿಲ್ಲೆಗಳಾಗಿ ತಟ್ಟಿಕೊಂಡು ಅಥವಾ ಮಣೆಯ ಮೇಲೆ ತಟ್ಟಿಕೊಂಡು ಡಬ್ಬಿ ಮುಚ್ಚಳದಿಂದ ಒತ್ತಿ ಒಂದೇ ಸಮನಾದ ವಡೆಗಳನ್ನು ಮಾಡಿ
- ಕೆಂಪಗೆ ಕರೆದು ಕೂಡಲೇ ಖಾರ ಚಟ್ನಿ ಅಥವಾ ಸಾಸ್ ಜೊತೆ ಮೆಲ್ಲಲು ಕೊಡಿ
(ಹಿಟ್ಟು ಕಲಸಿದ ಅರ್ಧಗಂಟೆಯೊಳಗೇ ಮಾಡದಿದ್ದಲ್ಲಿ ಅದು ನೀರು ಬಿಟ್ಟುಕೊಳ್ಳುವ ಸಂಭವ ಉಂಟು)