ಈರುಳ್ಳಿ ಟೋಸ್ಟ್

ಬೇಕಾಗುವ ಸಾಮಗ್ರಿಗಳು
- ಬ್ರೆಡ್ ಒಂದು ಪೌಂಡ್,
- ಹೆಚ್ಚಿದ ಈರುಳ್ಳಿ 250 ಗ್ರಾಂ
- ಹೆಚ್ಚಿದ ಹಸಿ ಮೆಣಸಿನ ಕಾಯಿ
- ಅರಿಸಿನಪುಡಿ ಕಾಲು ಚಮಚ
- ಗರಂಮಸಾಲೆ ಪುಡಿ ಕಾಲು ಚಮಚ
- ಎಣ್ಣೆ ಮೂರು ಚಮಚ
- ಹೆಚ್ಚಿದ ಕೊತ್ತಂಬರಿ ಸೊಪ್ಪು ಎರಡು ಚಮಚ
- ಬೆಣ್ನೆ 50 ಗ್ರಾಂ
- ಉಪ್ಪು ಅರ್ಧ ಚಮಚ
ಮಾಡುವ ವಿಧಾನ
- ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ, ಹಸಿಮೆಣಸಿನಕಾಯಿ ಸೇರಿಸಿ ಈರುಳ್ಳಿ ಮೆತ್ತಗಾಗುವ ವರೆಗೂ ಬೇಯಿಸಿ.
- ಅರಿಶಿನ ಗರಂ ಮಸಾಲಾ,ಉಪ್ಪು,ಕೊತ್ತಂಬರಿ ಸೇರಿಸಿದ ತಕ್ಷಣ ಒಲೆಯಿಂದಿಳಿಸಿ.
- ಬ್ರೆಡ್ ಮೇಲೆ ಮಿಶ್ರಣ ಹರಡಿ.
- ಓವನ್ ನಲ್ಲಿ 10 ನಿಮಿಷ 160 ಡಿಗ್ರಿ ಶಾಖದಲ್ಲಿ ಬೇಯಿಸಿ ( ಈರುಳ್ಳಿಯ ಜೊತೆ ವಿವಿಧ ತರಕಾರಿಕಳನ್ನೂ ಬಳಸಿ ಮಾಡಬಹುದು)