ಕೊಬ್ಬರಿ ಕುಕ್ಕೀಸ್

ಬೇಕಾಗುವ ಸಾಮಗ್ರಿಗಳು
- ಸಕ್ಕರೆ ಪುಡಿ 100 ಗ್ರಾಂ
- ಬೆಣ್ಣೆ 100 ಗ್ರಾಂ
- ಮೈದಾ ಹಿಟ್ಟು 150 ಗ್ರಾಂ
- ಒಣಗಿದ ತೆಂಗಿನ ತುರಿ 60 ಗ್ರಾಂ
- ಹಾಲಿನ ಪುಡಿ 40 ಗ್ರಾಂ
- ಬೇಕಿಂಗ್ ಪುಡಿ ಅರ್ಧ ಚಮಚ
- ನಾಲ್ಕು ಏಲಕ್ಕಿ ಪುಡಿ
- ವೆನಿಲಾ ಎಸೆನ್ಸ್ ಕಾಲು ಚಮಚ
ಮಾಡುವ ವಿಧಾನ
- ಸಕ್ಕರೆ ಬೆಣ್ಣೆ ನಿಧಾನವಾಗಿ ಕೆನೆಗಟ್ಟಿಸಿ
- ಮೈದಾ, ತೆಂಗು,ಹಾಲಿನ ಪುಡಿ, ಬೇಕಿಂಗ್ ಪುಡಿ,ಏಲಕ್ಕಿಪುಡಿ,ಎಸೆನ್ಸ್ ಎಲ್ಲಾ ಸೇರಿಸಿ ಮೃದುವಾಗಿ ಕಲಸಿ
- ಹಿಟ್ಟನ್ನು ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ, ಅಂಗೈ ಮೇಲೆ ಮೆಲ್ಲಗೆ ಚಪ್ಪಟೆಯಾಗಿ ಒತ್ತಿ
- ಎಣ್ಣೆ ಸವರಿದ ಬೇಕಿಂಗ್ ಕಾಗದದ ಮೇಲೆ ಅಂತರದಲ್ಲಿ ಪಕ್ಕ ಪಕ್ಕ ಇಡಿ
- ಓವನ್ ನಲ್ಲಿ 12 ನಿಮಿಷ 160 ಡಿಗ್ರಿ ಶಾಖದಲ್ಲಿ ಬೇಯಿಸಿ