ಬಾಳೆ ಬಿಸ್ಕತ್ತು

ಬೇಕಾಗುವ ಸಾಮಗ್ರಿಗಳು
- ಸಕ್ಕರೆ ಪುಡಿ 175 ಗ್ರಾಂ
- ಗೋಡಂಬಿ 25 ಗ್ರಾಂ
- ಮೈದಾ ಹಿಟ್ಟು 250 ಗ್ರಾಂ
- ಬೆಣ್ಣೆ 150 ಗ್ರಾಂ
- ಹಾಲಿನ ಪುಡಿ 40 ಗ್ರಾಂ
- ಒಂದು ದೊಡ್ಡ ಬಾಳೆಹಣ್ಣು 50 ಗ್ರಾಂ
- ಬೇಕಿಂಗ್ ಪುಡಿ ಅರ್ಧ ಚಮಚ
- ಚಿಟಿಕೆ ನಿಂಬೆ ಹಳದಿ ಬಣ್ಣ
- ಕಲೆಸಲು ಸ್ವಲ್ಪ ಹಾಲು
ಮಾಡುವ ವಿಧಾನ
- ಗೋಡಂಬಿ ಅರ್ಧ ಹೋಳು ಮಾಡಿ ಒಂದು ಘಂಟೆ ನೀರಿನಲ್ಲಿ ನೆನೆಸಿ,ನೀರು ಸೋಸಿಡಿ
- ಸಕ್ಕರೆಪುಡಿ, ಬೆಣ್ಣೆ ಹಗುರವಾಗಿ ಕಲಸಿ
- ಮೈದಾ, ಹಾಲಿನ ಪುಡಿ, ಹಾಲು, ಬಾಳೆ ಹಣ್ಣು, ಮತ್ತು ಬೇಕಿಂಗ್ ಪೌಡರ್ ಚೆನ್ನಾಗಿ ಕಲಸಿ
- ಆ ಹಿಟ್ಟನ್ನು ಬೆರಳು ಗಾತ್ರ ಅಥವಾ ತೆಳ್ಳಗೆ ಒತ್ತಿ, ಬಿಸ್ಕತ್ ಆಕಾರಕ್ಕೆ ಬಿಲ್ಲೆಗಳಾಗಿ ಕತ್ತರಿಸಿ
- ಎಣ್ಣೆ ಸವರಿದ ಬೇಕಿಂಗ್ ಕಾಗದದ ಮೇಲೆ ಅಂತರದಲ್ಲಿ ಪಕ್ಕ ಪಕ್ಕ ಇಡಿ
- ಅವುಗಳ ಮಧ್ಯಕ್ಕೆ ಒಂದೊಂದು ತುಂಡು ಗೋಡಂಬಿ ಒತ್ತಿಡಿ
- ಓವನ್ ನಲ್ಲಿ 10 ನಿಮಿಷ 160 ಡಿಗ್ರಿ ಶಾಖದಲ್ಲಿ ಬೇಯಿಸಿ