ಉಪ್ಪಿನ ಬಿಸ್ಕತ್ತು

ಬೇಕಾಗುವ ಸಾಮಗ್ರಿಗಳು
- ಮೈದಾ ಹಿಟ್ಟು 100 ಗ್ರಾಂ
- ಅಕ್ಕಿ ಹಿಟ್ಟು 50 ಗ್ರಾಂ
- ಉಪ್ಪು ಅರ್ಧ ಚಮಚ
- ಬಿಳಿ ಬೆಣ್ಣೆ 100 ಗ್ರಾಂ
- ಕಾಳು ಮೆಣಸು ಅರ್ಧ ಚಮಚ
- ಮೊಸರು ಒಂದು ಚಮಚ
- ಜೀರಿಗೆ ಅರ್ಧ ಚಮಚ
- ಬೇಕಿಂಗ್ ಪುಡಿ ಕಾಲು ಚಮಚ
ಮಾಡುವ ವಿಧಾನ
- ಮೈದಾ, ಅಕ್ಕಿಹಿಟ್ಟು, ಬೇಕಿಂಗ್ ಪುಡಿ ಸೇರಿಸಿ ಜರಡಿ ಹಿಡಿದು ಬೆಣ್ಣೆ ಸೇರಿಸಿ ಚೆನ್ನಾಗಿ ನಾದಿ
- ಉಳಿದ ಪದಾರ್ಥಗಳನ್ನೂ ಸೇರಿಸಿ ಮೃದುವಾಗಿ ಕಲಸಿ
- ಆ ಹಿಟ್ಟನ್ನು ಬೆರಳು ಗಾತ್ರ ಅಥವಾ ತೆಳ್ಳಗೆ ಒತ್ತಿ, ಬಿಸ್ಕತ್ ಆಕಾರಕ್ಕೆ ಬಿಲ್ಲೆಗಳಾಗಿ ಕತ್ತರಿಸಿ
- ಎಣ್ಣೆ ಸವರಿದ ಬೇಕಿಂಗ್ ಕಾಗದದ ಮೇಲೆ ಅಂತರದಲ್ಲಿ ಪಕ್ಕ ಪಕ್ಕ ಇಡಿ
- ಓವನ್ ನಲ್ಲಿ 15 ನಿಮಿಷ 160 ಡಿಗ್ರಿ ಶಾಖದಲ್ಲಿ ಬೇಯಿಸಿ