ಮಸಾಲೆ ಬಿಸ್ಕತ್ತು

ಬೇಕಾಗುವ ಸಾಮಗ್ರಿಗಳು
- ಮೈದಾ ಹಿಟ್ಟು 250 ಗ್ರಾಂ
- ಸಕ್ಕರೆ ಪುಡಿ 25 ಗ್ರಾಂ
- ಬಿಳಿ ಬೆಣ್ಣೆ 75 ಗ್ರಾಂ
- ಉಪ್ಪು ಚಮಚದಷ್ಟು
- ಸಣ್ಣಗೆ ಹೆಚ್ಚಿದ ಎರಡು ಹಸಿ ಮೆಣಸಿನಕಾಯಿ
- ಕೊತ್ತಂಬರಿ ಮತ್ತು ಪುದೀನಾ ಸೊಪ್ಪು ಎರಡು ಚಮಚ
- ಎಳ್ಳು ಒಂದು ಚಮಚ
- ಮೊಸರು 40 ಗ್ರಾಂ
ಮಾಡುವ ವಿಧಾನ
- ಸಕ್ಕರೆ ಬೆಣ್ಣೆ ಕೆನೆ ಕಟ್ಟುವಂತೆ ಬೆರೆಸಿ
- ಮೈದಾ, ಉಪ್ಪು, ಸೊಪ್ಪು,ಮೆಣಸಿನಕಾಯಿ,ಎಳ್ಳು ಹಾಗೂ ಮೊಸರು ಸೇರಿಸಿ ಚೆನ್ನಾಗಿ ಕಲಸಿ.
- ಎಣ್ಣೆ ಸವರಿದ ಬೇಕಿಂಗ್ ಕಾಗದದ ಮೇಲೆ ಅಂತರದಲ್ಲಿ ಪಕ್ಕ ಪಕ್ಕ ಇಡಿ.
- ಓವನ್ ನಲ್ಲಿ 15 ನಿಮಿಷ 160 ಡಿಗ್ರಿ ಶಾಖದಲ್ಲಿ ಬೇಯಿಸಿ