ಗೋಡಂಬಿ ಬಿಸ್ಕತ್ತು

ಬೇಕಾಗುವ ಸಾಮಗ್ರಿಗಳು
- ಸಕ್ಕರೆ ಪುಡಿ 200 ಗ್ರಾಂ
- ಗೋಡಂಬಿ ಪುಡಿ 100 ಗ್ರಾಂ
- ಮೈದಾ ಹಿಟ್ಟು 100 ಗ್ರಾಂ
- ತುಪ್ಪ 100 ಗ್ರಾಂ
- ಹಾಲಿನ ಪುಡಿ 200 ಗ್ರಾಂ
- ಹಾಲಿನ ಕೆನೆ (Condencced milk)
ಮಾಡುವ ವಿಧಾನ
- ಅಗಲವಾದ ಬಾಣಲೆಯಲ್ಲಿ ತುಪ್ಪ ಕಾಯಿಸಿ ಒಲೆಯ ಮೇಲಿಂದ ಇಳಿಸಿ, ತಣ್ಣಗಾಗಲು ಬಿಡಿ
- ಹಾಲಿನಪುಡಿ,ಕೆನೆ,ಮೈದಾ ಎಲ್ಲಾ ಸೇರಿಸಿ ಮೆತ್ತಗಿನ ಹದಕ್ಕೆ ಕಲಸಿಕೊಳ್ಳಿ
- ಆ ಹಿಟ್ಟನ್ನು ಬೆರಳು ಗಾತ್ರ ಅಥವಾ ತೆಳ್ಳಗೆ ಒತ್ತಿ, ಬಿಸ್ಕತ್ ಆಕಾರಕ್ಕೆ ಬಿಲ್ಲೆಗಳಾಗಿ ಕತ್ತರಿಸಿ
- ಬೇಕಿಂಗ್ ಕಾಗದದ ಮೇಲೆ ಅಂತರದಲ್ಲಿ ಪಕ್ಕ ಪಕ್ಕ ಇಡಿ
- 10-15 ನಿಮಿಷ 160 ಡಿಗ್ರಿ ಶಾಖದಲ್ಲಿ ಬೇಯಿಸಿ, ಬಿಸ್ಕತ್ ತಯಾರಿ (ಬಿಸಿಯಲ್ಲಿ ಬಡಿಸಲು ಬೊಂಬಾಟ್)