ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 
ಮಸ್ತ್ ಚಟಾಕೆಗಳು

picture

ಗೆಳೆಯ:ನೆನ್ನೆ ಎಲ್ಲಿಗೋ ಹೋಗಿದ್ದೆ? 

ಕಂಜೂಸ್ ಗೆಳೆಯ:ಹುಡುಗಿ ಜೊತೆ ಫಿಲ್ಮ್ ಗೆ. 

ಗೆಳೆಯ:ಎಷ್ತು ಖರ್ಚಾಯ್ತು? 

ಕಂಜೂಸ್ ಗೆಳೆಯ:ಐನೂರು

ಗೆಳೆಯ:ಹಾ ಅಷ್ಟೊಂದಾ! 

ಕಂಜೂಸ್ ಗೆಳೆಯ:ಅವಳ ಹತ್ರ ಇದ್ದದ್ದೇ ಅಷ್ಟು

****

ಬ್ಯಾಂಕ್ ಮಾನೇಜರ್:ನಮ್ಮ ಬ್ಯಾಂಕ್ನಲ್ಲಿ ನಿಮಗೆ Interest ಇದ್ದರೆ ಲೋನ್ ಕೊಡ್ತಾ ಇದ್ವಿ

ಗಿರಾಕಿ:ನಿಮಗೆ Interest ಇಲ್ಲಾಂದ್ರೆ ಯಾಕೆ ಕೊಡ್ತೀರ ಬಿಡಿ

****

ಜಿಪುಣ ವ್ಯಾಪಾರಿ ಸಾಯುವ ಸ್ಥಿತಿಯಲ್ಲಿದ್ದ. ಮಗನನ್ನು ಕುರಿತು:ಮಗಾ ನನ್ನ ನೋಡೋಕೆ ಯಾರ್ಯಾರು ಬಂದಿದ್ದರಪ್ಪಾ? 

ಮಗ:ಅಮ್ಮ,ತಂಗಿ,ತಮ್ಮ,ಅಣ್ಣ ನಾನು ಎಲ್ಲಾರೂ ಬಂದಿದ್ದೀವಿ ಅಪ್ಪ

ವ್ಯಾಪಾರಿ:ಎಲ್ರೂ ಇಲ್ಲಿಗೆ ಬಂದ್ರೆ ಅಂಗಡಿ ಯಾರು ನೋಡ್ಕೊಳ್ಳೋದು?

****

ಆಸೆಯಿಂದ ವಿದೇಶಕ್ಕೆ(ಲಂಡನ್) ವಿಮಾನದಲ್ಲಿ ಹೊರಟ ರಾಂಪಣ್ಣನಿಗೆ ಆಕಾಶದಲ್ಲಿ ಪಾಯಕಾನೆಗೆ ಅವಸರವಾಯ್ತು ! ಟಾಯ್ಲೆಟ್ ಬಳಸಲು ಬಾರದು, ಸರಿ ಒಂದು ಪ್ಲಾಸ್ಟಿಕ್ ಚೀಲದಲ್ಲೇ ಮಾಡಿದ, ಅದೇದಿನ ಲಂಡನ್ ಪೋಲೀಸರಿಗೆ ವಿಮಾನದಲ್ಲಿ ಒಂದೂವರೆ ಕೇ.ಜಿ.ಡ್ರಗ್ಸ್ ಸ್ಮಗ್ಲಿಂಗ್ ಅಗುತ್ತಿರುವ ಸುದ್ದಿ! ರಾಂಪಣ್ಣ ವಿಮಾನದಿಂದ ಇಳಿದಕೂಡಲೆ ಎಲ್ಲರಂತೆ ಇವನಿಗೂ ತಪಾಸಣೆ.ರಾಂಪಣ್ಣ ಪ್ಲಾಸ್ಟಿಕ್ ಚೀಲ ಕೊಡಲು ನಿರಾಕರಿಸಿದ ಸರಿ ಎಳೆದು ಒಯ್ದರು,ರಿಮಾಂಡು,ಚೀಲ ತೂಕ ಮಾಡಿದರು, ಒಂದು ಕೇ.ಜಿ.ಇದೆ ಸರಿ ಇನ್ನರ್ಧ ಎಲ್ಲಿ? ಅಯ್ಯೋ ನನ್ನ ಕೈಲಾದದ್ದು ಇಷ್ಟೆ ಮಾರಯ್ರೆ, ಹಿಂಸೆ! ಇನ್ನರ್ಧ ಕೇ.ಜಿ ಎಲ್ಲಿ? ರಾಂಪಣ್ನನಿಂದ ಅದೇ ಉತ್ತರ.ಮತ್ತೆ ಅದೇ ಪ್ರಶ್ನೆ ಇನ್ನರ್ಧ ಕೇ.ಜಿ ಎಲ್ಲಿ? ಮತ್ತದೇ ಉತ್ತರ, ಕಡೆಗೆ ತಪ್ಪು ತಿಳಿದು ವಾಪಸ್ ಡಿಪೋರ್ಟ್ ಕೆಲವು ದಿನಗಳ ಬಳಿಕ ರಾಂಪಣ್ನ ಬೇಸರದಿಂದ ಜಗಲಿಯಲ್ಲಿ ಕುಳಿತಿದ್ದ, ಗೆಳೆಯನೊಬ್ಬ ತಾನೂ ಲಂಡನ್ನಿಗೆ ಹೋಗುವ ಖುಷಿ ಸುದ್ದಿ ಹೇಳಿದ. ರಾಂಪಣ್ನ: ಓಯ್ ಲಂಡನ್ನಿಗೆ ಹೋಗುವುದಾ? ಸರಿಯಾಗಿ ಒಂದೂವರೆ ಕೇ.ಜಿ.ಮಾಡಲಿಕ್ಕೆ ಆದರೆ ಮಾತ್ರ ಹೋಗಿ ಮಾರಾಯರೆ!

****

ಇಬ್ಬರು ಕಿವುಡರು ಭೇಟಿಯಾದರು.ಏನು ಗಾಡಿ ತಳ್ಕೊಂಡ್ ಹೋಗ್ತಿದ್ದೀರಾ? ಪೆಟ್ರೋಲ್ ಹಾಕ್ಸೋಕ್ಕಾ?.....ಇಲ್ಲಾ ಪೆಟೋಲ್ ಹಾಕ್ಸೋಕ್ಕೆ ಹೋಗ್ತಾ ಇದ್ದೀನಿ......ಹೌದಾ ನಾನೆಲ್ಲೋ ಪೆಟ್ರೋಲ್ ಹಾಕ್ಸೊಕ್ ಹೋಗ್ತಾ ಇದ್ದೀರಾ ಅಂದ್ಕೊಂ

****

ದೇವರು:ಭಕ್ತಾ ಏಳು ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ,ಎರಡು ವರವನ್ನು ಕೇಳು

ಭಕ್ತ:ಮೊದಲನೆಯದು ನನಗೆ ನಿದ್ದ್ರೆಯಲ್ಲೆ ಸಾವು ಬರಬೇಕು. 

ದೇವರು: ತಥಾಸ್ತು ಸರಿ ಎರಡನೆಯದು? 

ಭಕ್ತ:ಎರಡನೆಯದು ನನಗೆ ಎಂದಿಗೂ ನಿದ್ದೇನೇ ಬರಕೂಡದು.

****

ತಂದೆ ಮಗಳ ಮದುವೆ ಬಗ್ಗೆ ವಿಚಾರಿಸುತ್ತಿದ್ದ.ಅವಳ ಕೈಲಿದ್ದ ಫೋಟೊ ನೋಡಿ ತಂದೆ”ಅವನ ಬಳಿ ಸಾಕಷ್ಟು ದುಡ್ಡು ಇದೆಯಾ?”ಎಂದ ಅದಕ್ಕೆ ಮಗಳು”ಹೋಗಪ್ಪ ಈ ಹಾಳು ಗಂಡಸರೇ ಹೀಗೆ ಅವನೂ ಹೀಗೇ ಕೇಳ್ತಾನೆ,ನಿಮ್ಮಪ್ಪನ ಬಳಿ ಸಾಕಷ್ಟು ದುಡ್ಡು ಇದೆಯಾ?” ಅಂತ!!

****

ಹಲ್ಲು:ಎಲೈ ನಾಲಗೆಯೇ ಹುಶಾರ್, ನಾನು ಒಮ್ಮೆ ನಿನ್ನನ್ನ ಜೋರಾಗಿ ಪ್ರೆಸ್ ಮಾಡಿದ್ರೆ ನೀನು ಕತ್ತರಿಸಿ ಹೋಗ್ತೀಯಾ! 

ನಾಲಗೆ:ನಾನು ಒಂದು ತಪ್ಪು ಮಾತಾಡಿದರೆ ನೀನೂ ಸೇರಿ ಮೂವತ್ತೆರಡೂ ಆಚೆ ಬರ್ತೀರಾ ಹುಶಾರ್

****

ಹುಡುಗ ದೇವರಲ್ಲಿ ಬೇಡಿಕೊಂಡ “ನನಗೆ ಒಂದು ಕೆಲಸ,ಜೇಬುತುಂಬ ದುಡ್ಡು ಹಾಗೂ ದೊಡ್ಡ ಗಾಡಿ,ಅದರ ತುಂಬಾ ಹುಡುಗಿಯರು ಇರಬೇಕು” ಎಂದು.ಮುಂದಕ್ಕೆ ಹೇಳುವುದರ ಒಳಗೆ ದೇವರು ತಥಾಸ್ತು ಎಂದ.ಹುಡುಗ ಕಂಡಕ್ಟರ್ ಆಗಿಹೋದ.

****

ವೆಂಕಮ್ಮ: ರೀ ಸಾವಿತ್ರಮ್ಮ ನಮ್ಮ ಮಗಳು exam ಸಮಯದಲ್ಲಿ ಟಿವಿ,ಫೋನ್,ಕಂಪ್ಯೂಟರ್ ಯಾವುದನ್ನೂ ಮುಟ್ಟಲಿಲ್ಲ

ಸಾವಿತ್ರಮ್ಮ:ಅದೇನ್ ಮಹಾ ಬಿಡಿ ನನ್ನ ಮಗ ಪುಸ್ತಕಾನೇ ಮುಟ್ಟಲಿಲ್ಲ

****

ಗರ್ಭಿಣಿ ಹೆಣ್ಣನ್ನು ಕಂಡ ಮಗುವೊಂದು’ಆಂಟಿ ನಿಮ್ಮ ಹೊಟ್ಟೇಲಿ ಏನಿದೆ?” ಅದಕ್ಕೆ ಆಕೆ”ಮುದ್ದಾದ ಮಗು ಇದೆ”ಅಂದಳು.ಅದು ಮುದ್ದಾದ ಮಗು ಆದರೆ ಅದ್ಯಾಕೆ ಅದನ್ನ ತಿಂದುಬಿಟ್ರಿ?”ಅನ್ನಬೇಕೇ

****

Newton ನ ನಾಲ್ಕನೇ ನಿಯಮ: ಏನೇ ಆದರೂ ಲೂಸ್ ಮೋಶನ್ನನ್ನು ಸ್ಲೋಮೋಶನ್ ನಲ್ಲಿ ಮಾಡಲು ಸಾಧ್ಯವಿಲ್ಲ

****

ನನಗೆ ಗೊತ್ತು ನಿಮಗೆ ಚೆನ್ನಾಗಿ ಕನ್ನಡ ಬರುತ್ತೆ ಅಂತ.ಅದಕ್ಕೆ ಒಂದು ಟೆಸ್ಟ್

“ನಾರಿ ನುರಿ ಕೋರಿ ತಿರಿ ಮರಿರಿ” 

ಇದರಲ್ಲಿ ಪ್ರತಿ ಪದದ ಕೊನೆಯ ಅಕ್ಷರ ತೆಗೆದು ಹೇಳಿ..

****

ಕನ್ನಡಾನುವಾದ

1. have a nice day - ತಗೋ ಒಳ್ಳೆ ದಿನ. 

2. what's up? - ಏನಿದೆ ಮೇಲೆ? 

3. keep in touch - ಮುಟ್ಟುತ್ತಾ ಇರು

****

ಮಾಡ್ರನ್ ಕಾಲ

ಮಂತ್ರಿ:ಪ್ರಭು ಯುದ್ಧಕ್ಕೆ ರೆಡಿಯಾಗಿ ಅಂತ ಪಕ್ಕದ ರಾಜ್ಯದವರಿಂದ ಮೆಸೇಜ್ ಬಂದಿದೆ.ಏನು ಮಾಡೋದು? 

ರಾಜ:ಮೆಸೇಜ್ ಸೆಂಡಿಂಗ್ ಫೈಲ್ಡ್ ಅಂತ ರಿಪ್ಲೈ ಕಳಿಸು

****

ವನಜಮ್ಮ:ಏನು ಅನ್ಯಾಯ ಇದೂ ಸರಸ್ವತಮ್ಮಾ ಮಲ್ಲೇಶ್ವರಮ್ ನಲ್ಲಿ ಇವತ್ತು 17ಸಲ ಕರಂಟ್ ಹೋಯ್ತಂತೆ

ಸರಸ್ವತಮ್ಮ: ಯಾಕ್ರಿ ಅನ್ಯಾಯ ವನಜಮ್ಮ 16ಸಲ ವಾಪಸ್ ಬಂತಲ್ಲ,ಅದು ನ್ಯಾಯ ತಾನೆ? 

****

ಕಂಡಕ್ಟರ್:ರೀ ಸ್ವಾಮೀ ದಿನಾ ಪಾಸು ಪಾಸು ಅಂತಿದ್ದೋರು ಟಿಕೆಟ್ ಚೆಕ್ಕಿಂಗ್ ಬಂದಾಗ ಯಾಕೆ ಪಾಸ್ ಅವರಿಗೆ ತೋರಿಸ್ಲಿಲ್ಲ? 

ಪ್ರಯಾಣಿಕ:ಅಯ್ಯೋ ಪಾಸ್ ಇದ್ದರೆ ತಾನೆ!!! 

****

ದೆಹಲಿಗೆ ಬಂದಿದ್ದ ಓರ್ವ ಪ್ರವಾಸಿಗ ಕಾರ್ ಬಾಡಿಗೆಗೆ ತೆಗೆದುಕೊಂಡು ನಗರ ಪ್ರದಕ್ಷಿಣೆ ಹೊರಟ.ಪಾರ್ಲಿಮೆಂಟ್ ಬಳಿಗೆ ಬಂದಾಗ ಫೋಟೊ ತೆಗೆಯಲು ಮೆಟ್ಟಿಲು ಏರಿ ಹೋಗಬೇಕಾಯಿತು. ಸರಿ ತನ್ನ ಕಾರನ್ನು ಅಲ್ಲೇ ನಿಲ್ಲಿಸಿ ಬದಿಯಲ್ಲೇ ನಡೆದು ಹೋಗುತ್ತಿದ್ದ ವ್ಯಕ್ತಿಯನ್ನು’ಸ್ವಾಮೀ ನಾನು ಫೋಟೋ ತೆಗೆದು ಬರುವ ವರೆಗೂ ಈ ನನ್ನ ಕಾರ್ ಕಾವಲು ಕಾಯ್ತೀರಾ" ಅಂದ.ಅದಕ್ಕೆ ಆತ "ರೀ ನನ್ನನ್ನ ಯಾರೆಂದು ತಿಳಿದಿದ್ದೀರಿ? ನಾನು ಈ ಪಾರ್ಲಿಮೆಂಟ್ ಸದಸ್ಯ ಗೊತ್ತಾ" ಅದಕ್ಕೆ ಪ್ರವಾಸಿ ಹೇಳಿದ "ಗೊತ್ತಿರಲಿಲ್ಲ ಸ್ವಾಮೀ ಆದರೂ ನನಗೆ ನಿಮ್ಮ ಮೇಲೆ ನಂಬಿಕೆ ಇದೆ,ಸ್ವಲ್ಪ ಇಲ್ಲೇ ಇರಿ" ಎಂದು ಹೊರಟೇ ಬಿಟ್ಟ.

****

"ನೀವು ಕುಡೀತೀರಾ" ಭಾವೀ ಅಳಿಯನನ್ನು ಮಾವ ಕೇಳಿದ.ಅದಕ್ಕೆ ಅಳಿಯ "ಇದು ಪ್ರಶ್ನೆನೋ ಆಹ್ವಾನನೋ ತಿಳೀ ಲಿಲ್ಲ" ಎಂದ

****

ಬಾಲಕಿ ಒಬ್ಬಳು ಚರ್ಚ್ನಲ್ಲಿ ಕಣ್ಮುಚ್ಚಿ ’ದೇವರೇ ಮಾಸ್ಕೋನಾ ಚೈನಾ ದೇಶದ ರಾಜಧಾನಿಯನ್ನಾಗಿ ಮಾಡಪ್ಪಾ"ಎಂದು ಪದೇ ಪದೇ ಜೋರಾಗಿ ಬೇಡುತ್ತಿದ್ದಳು.ಆಕೆಯ ಅಕ್ಕ ಕಾರಣ ಕೇಳಲು "ನೆನ್ನೆ ಪರೀಕ್ಷೆಯಲ್ಲಿ ಮಾಸ್ಕೋ ಚೈನಾದ ರಾಜಧಾನಿ ಎಂದು ಬರೆದಿರುವೆ"ಎಂದಳು.

****

ಕಾಡಿನಲ್ಲಿ ಹುಲಿಗೆ ಮದುವೆ ಆಗುತಿರಲು ಇಲಿಯೊಂದು ಹರುಶದಿಂದ ಕುಣಿಯುತ್ತಿತ್ತು.ಮೊಲವೊಂದು ಕಾರಣ ಕೇಳಲು "ನನ್ನ ಅಣ್ಣನಿಗೆ ಮದುವೆ"ಎಂದಿತು.ಅದಕ್ಕೆ ಮೊಲ "ನೀನ್ಯಾವಾಗ ಹುಲಿಗೆ ತಮ್ಮನಾದೆ" ಎನ್ನಲು."ನಮ್ಮ ಅಮ್ಮ ಹೇಳ್ತಾರೆ ನಾನೂ ಮದುವೆಗೆ ಮುಂಚೆ ಹುಲಿ ಆಗಿದ್ನಂತೆ."

****

ಆಸ್ಟ್ರೇಲಿಯಾಕೆ ಕಾಲಿಟ್ಟ ಘಳಿಗೆ ಅದು ಏರ್ಪೋರ್ಟ್ ನಲ್ಲಿ ಕಸ್ಟಂ ಆಫೀಸರ್ ಪಾಸ್ಪೋರ್ಟ್ ಸ್ಟಾಂಪ್ ಮಾಡುವ ಮುನ್ನ "ಓಹ್ ಯು ಕಂ ಟು ಡೈ" ಅಂದ.ಅದಕ್ಕೆ ನಾನು "no sir I come to live"ಅಂದೆ.ಆಮೇಲೆ ತಿಳೀತು ಅದು"U come today"ಅಂದು.

****

ನಾನೂ ನನ್ನ ಹೆಂಡತಿ ಶಾಪಿಂಗ್ ಹೋದಾಗ ಕಾರ್ ಪಾರ್ಕ್ ಮಾಡುತ್ತಿರಲು ಮತ್ತೊಂದು ಕಾರಿನಿಂದ ಇಳಿದ ಗಂಡ ಓಡಿ ತಕ್ಷಣ ಇನ್ನೊಂದು ಬದಿಯ ಬಾಗಿಲು ತೆರೆದು ತನ್ನ ಹೆಂಡತಿಯನ್ನು ಇಳಿಯಲು ಸಹಾಯ ಮಾಡಿದ್ದನ್ನು ಕಂಡ ನನ್ನ ಹೆಂಡತಿ"ನೋಡ್ರಿ ಅವನನ್ನ ಹೆಂಡತಿ ಮೇಲೆ ಅದೆಷ್ಟು ಪ್ರೀತಿ" ಅಂದ್ಳುಅದಕ್ಕೆ ನಾನು ಹೀಳಿದೆ"ವಿಷಯ ಹಾಗಲ್ಲ ಕಣೇ ಇಲ್ಲ ಹೆಂಡತಿ ಅಥವಾ ಕಾರು ಎರಡರಲ್ಲಿ ಒಂದಾದ್ರೂ ಹೊಸತಿರಬೇಕು" ನನ್ನಾಕೆ ನಕ್ಕು ಸುಮ್ಮನಾದಳು

****

ನಿರ್ದೇಶಕ:ನೀವು ಹತ್ತನೇ ಮಹಡಿಯಿಂದ ಸ್ವಿಮ್ಮಿಂಗ್ ಪೂಲ್ ಗೆ ಧುಮುಕಬೇಕು

ಹೀರೋ;;ಆದರೆ ನನಗೆ ಈಜು ಬರೋಲ್ಲ

ನಿರ್ದೇಶಕ: ಹೆದರಬೇಡಿ ಅದರಲ್ಲಿ ನೀರು ಇರೋಲ್ಲ!!!!!

****

ಪತ್ರಕರ್ತ : ನಿಮ್ಮ ಚಿತ್ರದ ಬಿಡುಗಡೆ ಬಗ್ಗೆ ಏನು ಹೇಳ್ತೀರಾ? 

ನಿದೇಶಕ : ಕೆಲವರಿಗೆ ಇಷ್ಟವಾಗಿದೆ... ಕೆಲವರಿಗೆ ಇಲ್ಲ.....

ಪತ್ರಕರ್ತ : ನಿಮ್ಮ ಮಾತಿನ ಅರ್ಥ? 

ನಿರ್ದೇಶಕ : ನಮಗೆ ಇಷ್ಟವಾಗಿದೆ.... ಪ್ರೇಕ್ಷಕರಿಗೆ ಇಲ್ಲ.....

****

ಜೈಲಿನಲ್ಲಿದ್ದ ಸಂಟ ಜೈಲರ್ ಗೆ ” ಚಿಕ್ಕವನಾಗಿದ್ದಾಗ ನನ್ನಪ್ಪನ ಮಾತು ಕೇಳಿದ್ದರೆ ಈವತ್ತು ನನಗೆ ಈ ಗತಿ ಬರ್ತಿರ್ಲಿಲ್ಲ. 

ಅದಕ್ಕೆ ಜೈಲರ್ ’ ಏನಂದ್ರು ನಿಮ್ಮಪ್ಪ. 

ಸಂಟ ” ಅರೆ ನಂಗೇನು ಗೊತ್ತು, ಹೇಳಿದ್ನಲ್ಲಾ ಆಗಲೇ ಅವರು ಹೇಳಿದ್ದು ನಾನು ಕೇಳಿಲ್ಲಾಂತ 

****

  ‘ರಾಮನು ಮರದಿಂದ ಬಿದ್ದ ’ ಇದು ಯಾವ ಕಾಲ ಎಂದು ಕೇಳಿದರು ಟೀಚರ್ ಗುಂಡ: "ರಾಮನಿಗೆ ಬಹಳ ಕೆಟ್ಟಕಾಲ ಸಾರ್"

****

ಆತ:ನೀನು ನನ್ನ ಮೂರನೇ ಹೆಂಡ್ತಿ ಹಾಗೇ ಇದ್ದೀಯಾ..... ಆಕೆ:ಹಾಗಾದರೆ ನಿನಗೆ ಎಷ್ಟು ಹೆಂಡತೀರು ?.....ಆತ: ಇಬ್ಬರು 

****

ಎಲ್ಲಾ ನೋಟ್ ಮೇಲೆ ಗಾಂಧೀ ಯಾಕೆ ನಾಗ್ತಾ ಇರ್ತಾರೆ?.......ಅತ್ತರೆ ನೋಟು ವದ್ದೆ ಆಗತ್ತೆ ಅದಕ್ಕೆ 

****

ದೆಹಲಿಗೆ ಬಂದಿದ್ದ ಓರ್ವ ಪ್ರವಾಸಿಗ ಕಾರ್ ಬಾಡಿಗೆಗೆ ತೆಗೆದುಕೊಂಡು ನಗರ ಪ್ರದಕ್ಷಿಣೆ ಹೊರಟ.ಪಾರ್ಲಿಮೆಂಟ್ ಬಳಿಗೆ ಬಂದಾಗ ಫೋಟೋ ತೆಗೆಯಲು ಮೆಟ್ಟಿಲು ಏರಿ ಹೋಗಬೇಕಾಯಿತು. ಸರಿ ತನ್ನ ಕಾರನ್ನು ಅಲ್ಲೇ ನಿಲ್ಲಿಸಿ ಬದಿಯಲ್ಲೇ ನಡೆದು ಹೋಗುತ್ತಿದ್ದ ವ್ಯಕ್ತಿಯನ್ನು "ಸ್ವಾಮೀ ನಾನು ಫೋಟೋ ತೆಗೆದು ಬರುವ ವರೆಗೂ ಈ ನನ್ನ ಕಾರ್ ಕಾವಲು ಕಾಯ್ತೀರಾ" ಅಂದ.ಅದಕ್ಕೆ ಆತ "ರೀ ನನ್ನನ್ನ ಯಾರೆಂದು ತಿಳಿದಿದ್ದೀರಿ? ನಾನು ರಾಜಕಾರಣಿ ಈ ಪಾರ್ಲಿಮೆಂಟ್ ಸದಸ್ಯ ಗೊತ್ತಾ" ಅದಕ್ಕೆ ಪ್ರವಾಸಿ ಹೇಳಿದ "ಗೊತ್ತಿರಲಿಲ್ಲ ಸ್ವಾಮೀ, ಆದರೂ ನನಗೆ ನಿಮ್ಮ ಮೇಲೆ ನಂಬಿಕೆ ಇದೆ,ಸ್ವಲ್ಪ ಇಲ್ಲೇ ಇರಿ" ಎಂದು ಹೊರಟೇ ಬಿಟ್ಟ.

****

"ನೀವು ಕುಡೀತೀರಾ" ಭಾವೀ ಅಳಿಯನನ್ನು ಮಾವ ಕೇಳಿದ.ಅದಕ್ಕೆ ಅಳಿಯ "ಇದು ಪ್ರಶ್ನೆನೋ, ಆಹ್ವಾನನೋ ತಿಳೀ ಲಿಲ್ಲ" ಎಂದ

ಪ್ರಾಯದ ಹುಡುಗಿ ಅರ್ಧ ಗಂಟೆ ಫೋನಿನಲ್ಲಿ ಮಾತು ಮುಗಿಸಿ ರಿಸೀವರ್ ಕೆಳಗಿಟ್ಟ ನಂತರ ಅವಳ ತಂದೆ ಹೇಳಿದ"ಅರೆ ಪರವಾಗಿಲ್ವೇ ಈದಿನ ಬರೀ ಅರ್ಧ ಗಂಟೆನಾ ಕೊರೆದದ್ದು ಭೇಶ್"ಎಂದ. ಅದಕ್ಕೆ ಹುಡುಗಿ"ಅಪ್ಪಾ ಅದು ರಾಂಗ್ ನಂಬರ್" ಅನ್ನಬೇಕೇ. ಬೆಪ್ಪಾದ ಅಪ್ಪ.

****

ತರಲೆ ಪೈಲೆಟ್ ಒಬ್ಬ ಪ್ರತಿಸಲ ಲ್ಯಾಂಡಿಂಗ್ ಸಮಯದಲ್ಲಿ ಕಂಟ್ರೋಲ್ ರೂಂ ಗೆ ಏನಾದರೂ ತರಲೆ ಮಾಡುತ್ತಿದ್ದ.ಮೊದಲೇ ಭಯೋತ್ಪಾದಕರ ಕಾಟ ಹೆಚ್ಚಾಗಿದ್ದ ಸಮಯವದು.ಅಂದು ಲ್ಯಾಂಡ್ ಮಾಡುವ ಸಮಯಕ್ಕೆ ಬಂದಾಗ ತನ್ನ ದ್ವನಿ ಬದಲಿಸಿ "ನಾನ್ಯಾರು ಗೆಸ್ ಮಾಡು" ಎಂದ ಆಗಾಗಲೇ ಸಾಕಷ್ಟು ಅರಿತಿದ್ದ ಕಂಟ್ರೋಲರ್ ಟವರ್ ಹಾಗು ನಿಲ್ದಾಣದ ದೀಪ ಆರಿಸಿ ಉತ್ತರಿಸಿದ "ನೀನೆಲ್ಲಿದ್ದೀಯಾ ಗೆಸ್ ಮಾಡು ಎಂದ"

****

ಗುಹೆಯೊಂದಕ್ಕೆ ಪ್ರವಾಸಿಗರನ್ನು ಗೈಡ್ ಕರೆದು ಕೊಂಡು ಹೊರಟಿದ್ದ. ಒಬ್ಬ ಪ್ರವಾಸಿಗ ”ಇಲ್ಲಿ ಬಹಳ ಬಾವುಲಿಗಳು ಇವೆಯಂತೆ ಹೌದಾ”    ಗೈಡ್: ”ತುಂಬಾ ಇತ್ತು ಆದರೆ ಈಗ ಒಂದೂ ಇಲ್ಲ......”   ಪ್ರ:”ಅಬ್ಬ ಸಧ್ಯ” ಗೈಡ್: ”ಹಾವುಗಳು ಅವನ್ನೆಲ್ಲಾ ತಿಂದು ಹಾಕಿದವು”     ಪ್ರ:”ಆ...!”

****

ಹೆಂಡತಿ: ಅಲ್ಲ್ಲಾರೀ ನಿಮಗೆ ಮದುವೆ ಆಗಿರೋದು ಜ್ಞಾಪಕ ಇದೆ ತಾನೆ? ಮತ್ತೆ ಹುಡುಗಿಯರನ್ನ ಯಾಕೆ ಹಾಗೆ ನೋಡೋದು? ಗಂಡ: ಅಂದರೆ? ನೀನ್ ಹೇಳೋದು ಡಯಟ್ ಮಾಡೋವಾಗ ಮೆನೂ ಕೂಡಾ ನೊಡೋದೂ ತಪ್ಪಾ !

****

ಜುರಾಸಿಕ್ ಪಾರ್ಕ್ ಸಿನಿಮಾ ನೋಡಲು ಗುಂಡ ಗೆಳೆಯರೊಡನೆ ಹೋಗಿದ್ದ.ಡೈನೋಸರ್ ಪರದೆಯ ಮೇಲೆ ಬರುತ್ತಿದ್ದ ಹಾಗೆ ಗುಂಡ ಹೆದರಿ ಅಳಲು ಆರಂಭಿಸಿದ.ಗೆಳೆಯರು”ಅಯ್ಯಾ ಗುಂಡ ಇದು ಸಿನಿಮಾ ನಿಜವಲ್ಲ” ಎಂದು ಸಮಾಧಾನ ಹೇಳಿದರು ಗುಂಡ ಅಳುವುದು ನಿಲ್ಲಿಸದೇ ಹೇಳಿದ ”ಇದು ಸಿನಿಮಾ ಅಂಥ ನಂಗೊತ್ತು ನಿಮಗೆ ಗೊತ್ತು ಹಾಳಾದ್ದು ಆ ಡೈನೋಸೋರ್ಗೆ ಗೊತ್ತಿರಬೇಕಲ್ಲಾ”

****

ಹುಬ್ಬಳ್ಳಿಯಲ್ಲಿ ಗಣಪತಿ ಹಬ್ಬಕ್ಕೆ ಚಂದಾ ವಸೂಲಿಗೆ ಬಂದ ಹುಡುಗರು ಮನೆಯ ಬಾಗಿಲಲ್ಲಿದ್ದ ಬಾಲಕನನ್ನು ”ನಿಮ್ಮ ಫಾದರ್ ಇದ್ದಾರೇನಲ ಯಪ್ಪ? ಸ್ವಲ್ಪ ಕರಿ ಮತ್ತ” ಹುಡುಗ ಹೇಳಿದ ”ಇಲ್ರೀ”.... ”ಹೋಗ್ಲಿ ಮದರ್?”...”ಇಲ್ರೀ”.....ಹೋಗ್ಲಿ ”ಬ್ರದರ್ ಇದ್ದರಾ?”.....”ಅದಾರ್ರಿ ಆದ್ರೆ ಬರಾಂಗಿಲ್ಲ”.....”ಯಾಕೆ?”.....”ತೊಟ್ಟಿಲಲ್ಲಿ ಮಲಗಿದ್ದಾರ್ರಿ”

****

ಸಾಲಗಾರ ಸೋಮಣ್ಣ ಬ್ಯಾಂಕ್ ಗೆ ಪರ್ಮನೆಂಟ್ ಗಿರಾಕಿ”ಸಾಮೀ ಕುರಿ ಸಾಲ,ಹಸು ಸಾಲ,ಬಾವಿ ಸಾಲ,ಪಂಪ್ ಸಾಲ,ಬರಗಾಲ ಸಾಲ,ಬೀಜ ಸಾಲ,ಗೊಬ್ಬರ ಸಾಲ”ಇದು ಬಿಟ್ಟು ಬೇರೇ ಯಾವ್ದಾದ್ರೂ ಸಾಲ ಐತಾ”ಅಂತ ಕೇಳಿದ.ಅದಕ್ಕೆ ಬ್ಯಾಂಕ್ ಮ್ಯಾನೇಜರ್ ಅದೆಲ್ಲಾ ಮೊದಲು ತೀರಿಸು,ಇನ್ಯಾವ್ದೂ ಸಾಲ ಇಲ್ಲ ಹೋಗು” ಎಂದ.ಅದಕ್ಕೆ ಸೋಮಣ್ಣ”ಓಗ್ಲೀ ಯಾವ್ದಾದ್ರೂ ಮನ್ನ ಆಗೋ ಸಾಲ ಐತಾ?” ಅಂದ.

****

ಪುಡಾರಿ ಪಾಪಣ್ಣ ಭಲೇ ಮಾತುಗಾರ.ಭಾಷಣ ಮಾಡುವುದೆಂದರೆ ಸಾಕು ಕೇಳುಗರಿಗೆ ಅಚ್ಚರಿಯೇ ಸರಿ.ಒಮ್ಮೆ ಒಂದು ಊರಿನಲ್ಲಿ ಭಾಷಣ ಮಾಡುವಾಗ”ಮಾನ್ಯರೇ ಈ ಊರಿನ ಚೇರ್ಮನ್ ಸಾಹೆಬರೂ ನಾನೂ ಚಡ್ಡಿ ದೋಸ್ತ್,ನಾವಿಬ್ರೂ ಒಂದೇ ತಟ್ಟೇಲಿ ಊಟ ಮಾಡ್ತಿದ್ವಿ”ಅಂದ.ಚೇರ್ಮನ್ ಪಕ್ಕದಲ್ಲಿ ಕುಳಿತಿದ್ದವರು”ಹೌದಾ ಸಾರ್” ಎಂದರು ಅದಕ್ಕೆ ಚೇರ್ಮನ್ ”ನಿಜ ಆದರೆ ನಾನು ಮೊದಲು ಊಟ ಮಾಡಿ ಆಮೇಲೆ ಅವನು ಮಾಡುತ್ತಿದ್ದ,ಯಾಕೇಂದ್ರೆ ತಟ್ಟೆ ತೊಳೆಯೋ ಗೋಜೇ ಇರಲ್ಲ ಅದಕ್ಕೆ”

****

ಡಾಗ್ ಶೋ ಒಂದರಲ್ಲಿ ಬಹುಮಾನ ಪಡೆದವರನ್ನು ಟಿವಿ ಸಂದರ್ಶನಕ್ಕೆಂದು ಮಾತನಾಡಿಸುತ್ತಿದ್ದರು.”ಕಂಗ್ರಾಜುಲೇಶನ್ಸ್ ಸಾರ್ ನಿಮ್ಮ ನಾಯಿಗಳು ಅದೆಷ್ಟು ಮುದ್ದಾಗಿವೆ,ಇವುಗಳ ಹೆಸರು?.......”ಸುಪ್ರೀತ,ಸುಮಂಗಲ,ಸುಜಾತ,ಸುಮಲತ,ಸಂಗೀತ”......ವಾವ್ ಚೆನ್ನಾಗಿವೆ ಹೆಸರುಗಳು,ಅಂದಹಾಗೆ ತಮ್ಮ ಹೆಸರು?....”ಟಾಮಿ”

****

”ಹೌದೂ ಹುಡ್ಗೀಗೆ ಸರ್ಕಾರೀ ಕೆಲಸ,ಅಡುಗೆ ಮಾಡಕ್ಕೆ ಬರತ್ತೆ, ಹಾಡು, ಹಸೆ ಎಲ್ಲಾದ್ರಲ್ಲೂ ನಿಸ್ಸೀಮಳಂತೆ? ಒಳ್ಳೆ ಮನೆತನ ಬೇರೆ ಅದ್ಯಾಕೆ ಲಲಿತಮ್ಮಾವರೇ ಆ ಹೆಣ್ಣು ನಿಮ್ಮ ಮಗನಿಗೆ ಬೇಡಾ ಅಂದ್ರಂತೆ?” ಹೀಗೆ ಒಂದೇ ಸಮನೆ ಪ್ರಶ್ನೆ ಹಾಕುತ್ತಿದ್ದ ಪಕ್ಕದಮನೆಯಾಕೆಗೆ ಲಲಿತಮ್ಮ ಹೇಳಿದ್ದು ಒಂದೇ ಕಾರಣ” ಅಯ್ಯೋ ಅದಷ್ಟೇ ಅಲ್ಲ ಹುಡುಗೀಗೆ ಕರಾಟೇನೂ ಬರತ್ತಂತೆ,ಅದಕ್ಕೆ ಒಪ್ಪಲಿಲ್ಲ”

****

ಅಮೇರಿಕಾದಲ್ಲಿ ಒಬ್ಬ ಪುಟ್ಟ ಬಡ ಬಾಲಕ ತನಗೆ $100 ಹಣ ಬೇಕೆಂದು ದೇವರಿಗೇ ಪತ್ರ ಬರೆದ.ಅಂಚೆಯವರು ಆ ಪತ್ರದ ಮೇಲೆ ”To the God,USA' ಎಂದು ಬರೆದಿದ್ದ ಕಾರಣ ಏನೂ ಮಾಡಲು ತೋಚದೆ ಜಾರ್ಜ್ ಬುಶ್ ಗೆ ಕಳಿಸಿದರು.ಬುಶ್ ಕನಿಕರದಿಂದ $5 ಪತ್ರದ ಜೊತೆಯಲ್ಲಿಟ್ಟು ಜವಾಬು ಕಳಿಸಿದ.From White House ಎಂದು ಬರೆದಿದ್ದ ಆ ಪತ್ರವನ್ನು ತೆರೆದು $5 ಇದ್ದುದನ್ನು ಕಂಡು ಬಾಲಕ ಹೀಗೆಂದು ರಿಪ್ಲೈ ಬರೆದ ”ಓ ದೇವಾ $100 ಕಳಿಸಿದ್ದಕ್ಕೆ ಧನ್ಯವಾದಗಳು, ಆದರೆ ಈ White Houseನಲ್ಲಿರುವ ಲುಚ್ಚಾಗಳು 95% ಮುರಿದು ಕಳಿಸಿದ್ದಾರೆ”

****

ಮಗನು ಶಾಲೆಯಿಂದ ತಂದ ಮನೆಕೆಲಸವನ್ನು ತಂದೆ ತಾಯಂದಿರೇ ಮಾಡಿ ಮುಗಿಸಿ ಕಳಿಸುತ್ತಿದ್ದರು.ಒಮ್ಮೆ ಮಗನು ಶಾಲೆಯಿಂದ ಬಂದೊಡನೇ ರೇಗಿದ”ಅಪ್ಪಾ ಅಮ್ಮಾ ನೀವು ಈ ದಿನ ಹೋಂ ವರ್ಕ್ ಸರಿಯಾಗೇ ಮಾಡಿಲ್ಲ”

****

ಊರಿನಲ್ಲಿ ಭೀಕರ ಭೂಕಂಪ, ಬಿರುಗಾಳಿ,ಪ್ರವಾಹ,ಕುಂಭ್ದ ದ್ರೋಣ ಮಳೆ,ಸಿಡಿಲು,ಗುಡುಗು ತಡೆಯಲಾರದೆ ತಂದೆ ಮಗನಿಗೆ ಹೇಳಿದ ಈ ಊರಿನಲ್ಲಿ ಇನ್ನು ಬದುಕಲು ಸಾಧ್ಯವಿಲ್ಲ ನೀನು ಸ್ವಲ್ಪ ಕಾಲ ಮಾವನ ಮನೆಗೆ ಹೋಗು ಎಂದು ಕಳಿಸಿಕೊಟ್ಟ. ಕೆಲವೇ ದಿವಸಗಳಲ್ಲಿ ಮಾವನಿಂದ ಒಂದು ಪತ್ರ ಬಂದಿತು”ಭೀಕರ ಭೂಕಂಪ, ಬಿರುಗಾಳಿ,ಪ್ರವಾಹ,ಕುಂಭ್ದ ದ್ರೋಣ ಮಳೆ,ಸಿಡಿಲು,ಗುಡುಗು ಎಲ್ಲಾ ನಮ್ಮೂರಿಗೇ ಕಳಿಸಿ,........ಆದರೆ ನಿಮ್ಮ ಮಗನನ್ನು ನೀವೇ ನೋಡಿಕೊಳ್ಳಿ”

****

ಮಂತ್ರಿಯೊಬ್ಬನಿಗೆ ಇದ್ದ ಹಲ್ಲುಗಳನ್ನೆಲ್ಲಾ ವೈದ್ಯರು ಕಿತ್ತರು. ಚುನಾವಣೆ ಸಮಯ ಬೇರೆ,ಪ್ರತಿದಿನ ಭಾಷಣ ಮಾಡಲೇಬೇಕು. ಮೊದಲದಿನ  ಪ್ಲಾಸ್ಟಿಕ್ ಹಲ್ಲುಗಳನ್ನು ಧರಿಸಿ ಕಷ್ಟಪಟ್ಟು 10ನಿಮಿಶ ಮಾತಾಡಿದ,ಮರುದಿನ 20 ನಿಮಿಶ,ಮುಂದಿನ ದಿನ ಅರ್ಧ ಘಂಟೆ......ಮತ್ತೊಂದು ದಿನ ಮಾತಾಡುವುದನ್ನು ನಿಲ್ಲಿಸಲು ಆಗಲೇ ಇಲ್ಲ.ನಾಲ್ಕಾರು ಘಂಟೆಯ ಬಳಿಕ ಗೆಳೆಯರೊಬ್ಬರು ಕಾರಣ ಕೇಳಲು ಆ ದಿನ ಮಂತ್ರಿ ಮರೆತು ತನ್ನ ಹೆಂಡತಿಯ ಹಲ್ಲುಗಳನ್ನು ಧರಿಸಿದ್ದು ತಿಳಿಯಿತು.

****

ಕಳ್ಳರಿಬ್ಬರು ಬ್ಯಾಂಕಿನ ದರೋಡೆ ಮಾಡಿ ಓಡಿ ಬಂದು ಒಂದು ಕಡೆ ಅವಿತು ಕುಳಿತರು 

ಒಬ್ಬ ಕಳ್ಳ: ಎಷ್ಟು ಹಣ ಇದೆ ಅಂತ ಎಣಿಸಿ ನೋಡೋಣಾ ? 

ಇನ್ನೊಬ್ಬ ಕಳ್ಳ: ನನಗೆ ನಿದ್ದೆ ಬರ್ತಾ ಇದೆ ಮನೇಗೆ ಹೋಗೋಣ, ಹೇಗಿದ್ರೂ ನಾಳೆ ಪೇಪರಲ್ಲಿ ಬಂದೇ ಬರುತ್ತಲ್ಲ

****

ಪ್ರಶ್ನೆ:ಭಾರತದ ಕಾನೂನು ವ್ಯವಸ್ತೆಯಲ್ಲಿ 2ನೇ ಮದುವೆಗೆ ಅವಕಾಶವಿಲ್ಲ. ಯಾಕೆ ? 

ಉತ್ತರ: ಒಂದೇ ತಪ್ಪಿಗೆ ಎರಡೆರಡು ಶಿಕ್ಷೆ ಕೊಡಲಾಗುವುದಿಲ್ಲ.

****

ಇಬ್ಬರು ಸ್ನೇಹಿತರಿಗೆ 3 ಬಾಂಬುಗಳು ಸಿಕ್ಕಿದವು. ಪೋಲೀಸರಿಗೆ ಒಪ್ಪಿಸಲು ತೆಗೆದುಕೊಂಡು ಹೋಗುವಾಗ ಒಬ್ಬ ಹೇಳಿದ

`ಅಕಸ್ಮಾತ್ ದಾರಿಯಲ್ಲಿ 1 ಬಾಂಬ್ ಢಂ ಅಂದ್ಬಿಟ್ರೆ ಏನ್ ಮಾಡೋದು ?' 

ಇನೊಬ್ಬ : 3 ರಲ್ಲಿ ಎರಡೇ ಸಿಕ್ಕಿದ್ದು ಅನ್ನೋದು ಅಷ್ಟೇ” !!!

****

ಮೊಬೈಲ್ ಕಂಪನಿಯಲ್ಲಿ ಕೆಲಸ ಖಾಲಿಯಿದೆ.ಅಂತ ಒಂದು ಜಾಹಿರಾತು 

ಯಾವುದೇ ಡಿಗ್ರಿ, ಡಿಪ್ಲಮೊ ಬೇಕಾಗಿಲ್ಲ, ರಾತ್ರಿ ಪಾಳಿ ಇಲ್ಲ, ಬೆಳಗ್ಗಿಂದ ಸಂಜೆ ವರೆಗು ಮಾತ್ರ ಕೆಲಸ,ಬೇಗ ಬಯೋ ಡಾಟಾ ಕಳಿಸಿ.

ಸಂಬಳ 10,000 ರೂ ........

ಕೆಲಸ.. ....... ........ಟವರ್ಮೇಲೆ ಕುಳಿತು ಕಾಗೆ ಓಡಿಸುವುದು

****

ಈ ತಿಂಗಳು ಬಾಡಿಗೆ ಕಟ್ಟಕ್ಕಾಗಲ್ಲಾ ಸಾರ್ -ಎಂದ ಬಾಡಿಗೆದಾರ. ಏನ್ರಿ ಆಚೆ ತಿಂಗಳೂ ಹೀಗೇ, ಹೋದ ತಿಂಗಳೂ ಹೀಗೇ, ಈಗಲೂ ಅದೇ? "ನನ್ನದು ಯಾವಾಗಲೂ ಒಂದೇ ಮಾತು ಸಾರ್"

****

3 ಜನ ದೇವಸ್ಥಾನದ ಅರ್ಚಕರು ಒಂದುದಿನ ಭೇಟಿಯಾದಾಗ ತಮಗೆ ಮಂಗಳಾರತಿ ತಟ್ಟೆಯಲ್ಲಿ ಬಿದ್ದ ಹಣವನ್ನು ಏನು ಮಾಡುತ್ತೇವೆಂದು ಬಿನ್ನವಿಸಿಕೊಳ್ಳುತ್ತಿದ್ದರು. ಮೊದಲನೆಯವ ಹೇಳಿದ:"ನಾನೊಂದೊ ಗೆರೆಯನ್ನು ಹಾಕಿ ನಾಲ್ಕು ಹೆಜ್ಜೆ ದೂರ ನಿಂತು ಬಂದ ಎಲ್ಲಾ ಹಣವನ್ನು ಅದರ ಕಡೆಗೆ ಎಸೆಯುತ್ತೇನೆ,ಆಚೆಗೆ ಬಿದ್ದದ್ದು ಹುಂಡಿಗೆ ಈಚೆಗೆ ಬಿದ್ದದ್ದು ನನಗೆ!" ಎರಡನೆಯವ:"ನಾನು ನೆಲದ ಮೇಲೆ ವೃತ್ತವನ್ನು ಬರೆದು ನಾಲ್ಕು ಹೆಜ್ಜೆ ದೂರ ನಿಂತು ಬಂದ ಎಲ್ಲಾ ಹಣವನ್ನು ಅದರ ಕಡೆಗೆ ಎಸೆಯುತ್ತೇನೆ,ಆಚೆಗೆ ಒಳಗೆ ಬಿದ್ದದ್ದು ಹುಂಡಿಗೆ ಹೊರಗೆ ಬಿದ್ದದ್ದು ನನಗೆ!" ಕಡೇಯ ಅರ್ಚಕ ಹೇಳಿದ:"ನಾನು ಹಾಗೆಲ್ಲಾ ಮಾಡಲ್ಲ,ಬಂದ ಎಲ್ಲಾ ಹಣವನ್ನು ಕೈಯಲ್ಲಿ ಹಿಡಿದು ಮೇಲೆ ಎಸೆಯುತ್ತೇನೆ,ಮೇಲೆ ಹೋದದ್ದು ದೇವರಿಗೆ ಕೆಳಗೆ ಬಂದದ್ದು ಮಾತ್ರ ನನಗೆ"ಅಂದ

****

ತಡವಾಗಿ ಕೆಲಸಕ್ಕೆ ಬಂದ ಕೂಲಿ ಆಳನ್ನು ಸಾಹುಕಾರ ಯಜಮಾನ ವಿಚಾರಿಸಿದ" ಏಯ್ ದಿನಾಗಲೂ ಕೆಲಸಕ್ಕೆ ತಡವಾಗಿ ಬರ್ತೀಯಲ್ಲಾ,ಏನ್ ಕಾರಣ?" ಎಂದ,ಅದಕ್ಕೆ ಆ ಆಳು "ಅರೆ ದೇವಸ್ಥಾನಕ್ಕೆ ಓಗ್ಬುಟ್ ಬರ್ತೀನೀ ಸ್ವಾಮಿ"ಎಂದ."ಅಕಸ್ಮಾತ್ ಆದ್ಯಾವ್ರು ಪ್ರತ್ಯಕ್ಷ ಆದರೆ ಏನ್ ಕೇಳೋತಿಯಾ?" ಸಾಹುಕಾರ ಕೇಳಿದ.ಅದಕ್ಕೆ ಆಳು"ತುಂಬ ಹಣ,ಐಸ್ವರ್ಯ,ದೊಡ್ಡಮನೆ ,ಜಮೀನು,ಚಿನ್ನ..." ಎನ್ನುತ್ತಿರಲಿ ಸಾಹುಕಾರ "ಥೂ ನಿನ್ನ ದೇವರು ಪ್ರ್ಯತ್ಯಕ್ಷ ಆದರೆ "ಶಾಂತಿ ಕೊಡು, ನೆಮ್ಮದಿ ಕೊಡು, ಸಂತೋಷ ಕೊಡು, ಆರೋಗ್ಯ ಕೊಡು,"ಅಂತ ಕೇಳ್ಬೇಕು ಗೊತ್ತಾಯ್ತ,ಅದಕ್ಕೆ ಆಳು ಮೆಲ್ಲನೆ ನುಡಿದ"ಅದ್ಸರಿ ಬುದ್ದಿ ಯಾರ್ಯಾರಿಗೆ ಏನಿಲ್ವೋ ಅದನ್ನೇ ತಾನೆ ಕೇಳ್ಕೋಬೇಕು"ಅನ್ನಬೇಕೆ!

****

ಹಾಲು ಕೊಳ್ಳುವಾಗ ಒಬ್ಬಾತ ಕೇಳಿದ"ಇದು ತಾಜಾ ಹಾಲು ತಾನೆ?" ಹಾಲಿನಾಕೆ "ಇದೇನ್ಸ್ವಾಮಿ ಹಿಂಗ್ ಕೇಳ್ತೀರಾ, ನಾಲ್ಕು ಘಂಟೆ ಮೊದಲು ಇದು ಹುಲ್ಲಾಗಿತ್ತು"

****

ಪುಟ್ಟ ಬಾಲಕಿ ಸೀಮಾ ಬೆಳಿಗ್ಗೆ ಎದ್ದೊಡನೆ ತನ್ನ ಕನಸಿನಲ್ಲಿ ಲಕ್ಷ್ಮಿ ಬಂದಿದ್ದನು ವಿವರಿಸಿದಳು.ಅವಳ ತಂದೆ ತಾಯಿಗೆ ಖಂಡಿತ ಎನೋ ಲಕ್ ಇರಬಹುದು ಎಂದು "ನಿಜವಾಗ್ಲೂ ? ಲಕ್ಷ್ಮೀನೇ ಬಂದ್ಲಾ? ಏನಂದ್ಲು?" ಅದಕ್ಕೆ ಸೀಮಾ "ಹೂ ಬಿಗಿಯಾಗಿ ಸೀರೆ ಉಟ್ಕೊಂಡು, ಬೆಳಿಗ್ಗೆ ಸೂರ್ಯ ಹುಟ್ಟೋ ಸಮಯಕ್ಕೆ ಸರಿಯಾಗಿ ದೊಡ್ಡ ಹಿತ್ತಾಳೆ ಬಿಂದಿಗೆ ಹಿಡ್ಕೊಂಡು ಮನೆ ಮುಂದೆಲ್ಲಾ ಚೆಲ್ತಾ ಇದ್ಳು?".... ಏನು?...ನೀರು....ಯಾರು....ನಮ್ಮನೆ ಕೆಲಸದವಳು..ಲಕ್ಷ್ಮೀ

****

ಗುಂಡ ಹೊಸದಾಗಿ ಒಂದು ಹಳೆ ಕಾರ್ ಕೊಂಡ,ಸ್ನೇಹಿತರನ್ನೆಲ್ಲಾ ಒಂದು ರೌಂಡ್ ಕೂಡಿಸಿಕೊಂಡು ಹೋದ,"ತುಂಬಾ ಚೆನ್ನ್ನಾಗಿದೆ,ಇಂಥಾ ಕಾರ್ ಎಲ್ಲೂ ನೋಡಿಲ್ಲ" ಗೆಳೆಯನೊಬ್ಬ ಹೊಗಳಿದ, ಮತ್ತೊಬ್ಬ ಹೇಳಿದ"ಹೌದು ಹಾರ್ನ್ ಒಂದು ಬಿಟ್ಟು ಮಿಕ್ಕೆಲ್ಲಾ ಭಾಗಗಳೂ ಶಬ್ದಮಾಡೋ ಕಾರ್ ಇದೇ ಮೊದಲು ನೋಡ್ತಿರೋದು"

****

ಮಗಳು ಗಂಡನ ಸಮೇತ ಯುಗಾದಿಗೆಂದು ಅಮ್ಮನ ಊರಿಗೆ ಬಂದಿದ್ದಳು.ಹಬ್ಬಕ್ಕೆ ಭಾರೀ ಊಟೋಪಚಾರ ನಡೆದಿದೆ, ಊಟಕ್ಕೆಲ್ಲರೂ ಕುಳಿತಿರಲು ಅಳಿಯನಿಗೆ ವಾಯುವಿಸರ್ಜನೆ ಯಾಗಿ ಟೂಯ್ ಎಂದು ರಾಗವಾಗಿ ಹೂಸಿದನು, ಯಾರಿಗೂ ಅದರ ಅರಿವೇ ಆಗದಂತಿದ್ದರು.ಮತ್ತೆರಡು ನಿಮಿಷದ ನಂತರ ಅದೇ ಬಾದೆಯಿಂದ ಕಷ್ಟವಾಗಿ ಅದರ(ಶಬ್ಧ) ಜೊತೆಗೇ ಲಲಲಲ ರಾರಾ ಲಾಲಲಲ ಎಂದು ಹಾಡಿದ. ತಕ್ಷಣ ಅತ್ತೆಯವರು "ಅಳಿಯಂದಿರೇ ನೀವು ಆವಾಗ ಹಾಡಿದ ಹಾಡೇ ಚೆನ್ನಾಗಿತ್ತು" ಅನ್ಬೇಕೇ

****

ಕಲಾಮಂದಿರದ ಮೆಟ್ಟಿಲಮೇಲೆ ಕೇಳಿ ಬಂದ ಸಂಭಾಷಣೆ -ನಾಟಕಗಳಲ್ಲಿ ಯಾಕೆ ಇಂಟರ್ ವೆಲ್ ಕೊಡಲ್ಲ ? -ಕೊಟ್ರೆ ಯಾರೂ ವಾಪಸ್ ಬರಲ್ಲ....

ಪರೀಕ್ಷೆಗೆ ಮುಂಚೆ ಕ್ರಿಕೆಟ್ ಆಡೋದು ಅಪರಾಧಾನಾ? ನೀನು ಆಡೋ ರೀತಿ ಕ್ರಿಕೆಟ್ ಯಾವಾಗ ಆಡಿದ್ರೂ ಅಪರಾಧನೇ

****

ಬಾಕ್ಸಿಂಗ್ ಪಟು ಮಹಮದ್ ಆಲಿ ಒಮ್ಮೆ ಅಮೇರಿಕಾದಲ್ಲಿ ವಿಮಾನ ಹತ್ತಿದ. ಗಗನ ಸಖಿ ಸೀಟ್ ಬೆಲ್ಟ್ ಹಾಕಲು ಹೇಳಿದಳು. ಅದಕ್ಕೆ ಆಲಿ"ಸೂಪರ್ ಮ್ಯಾನ್ ಗೆ ಸೀಟ್ ಬೆಲ್ಟ್ ಅಗತ್ಯವಿಲ್ಲ"ಎಂದ. ತಕ್ಷಣ ಆಕೆ" ಸೂಪರ್ ಮ್ಯಾನ್ ಗೆ ವಿಮಾನದ ಅಗತ್ಯವೇಕೊ?" ಎಂದು ಹಾಸ್ಯ ಮಾಡಿ ಗೆದ್ದಳು.ಗೆಳೆಯ:ನೆನ್ನೆ ಎಲ್ಲಿಗೋ ಹೋಗಿದ್ದೆ? 

ಬಾಕ್ಸಿಂಗ್ ಪಟು ಮಹಮದ್ ಆಲಿ ಒಮ್ಮೆ ಅಮೇರಿಕಾದಲ್ಲಿ ವಿಮಾನ ಹತ್ತಿದ. ಗಗನ ಸಖಿ ಸೀಟ್ ಬೆಲ್ಟ್ ಹಾಕಲು ಹೇಳಿದಳು. ಅದಕ್ಕೆ ಆಲಿ"ಸೂಪರ್ ಮ್ಯಾನ್ ಗೆ ಸೀಟ್ ಬೆಲ್ಟ್ ಅಗತ್ಯವಿಲ್ಲ"ಎಂದ. ತಕ್ಷಣ ಆಕೆ" ಸೂಪರ್ ಮ್ಯಾನ್ ಗೆ ವಿಮಾನದ ಅಗತ್ಯವೇಕೊ?" ಎಂದು ಹಾಸ್ಯ ಮಾಡಿ ಗೆದ್ದಳು.

ಮತ್ತಷ್ಟು ಲೇಖನಗಳು

ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ

ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು

pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

© ಹಕ್ಕುಸ್ವಾಮ್ಯ 2008 - 2023