ಸಂಟ-ಬಂಟ-ಸರ್ದಾರ್

ಸಂಟ:ನಾನು ದಿನಾ ಆಫೀಸ್ಗೆ ಹೋಗುವ ಮೊದಲು ನನ್ನ ಹೆಂಡತಿಗೆ ಮುತ್ತು ಕೋಡ್ತೀಬಿ
ಬಂಟ:ನಾನು ಹಾಗಲ್ಲ ನೀನು ಆಫೀಸ್ಗೆ ಹೋದಮೇಲೆ ಕೊಡ್ತೀನಿ
ಸಂಟ: ಹ್ಹೀ ಹ್ಹೀ ನಾನೇ ಮೊದಲು ಕೊಡೋದು
****
ಸಂಟ:ನಾನು ಅಮೇರಿಕಾಗೆ ಹೋಗಲು ಯೋಚನೆ ಮಾಡ್ತಿದ್ದೀನಿ
ಬಂಟ:ಹಾಗಿದ್ರೆ ತುಂಬಾ ಹಣ ಬೇಕಲ್ವಾ?
ಸಂಟ:ಇಲ್ಲ ಯೋಚನೆ ಮಾಡೊಕ್ಕೆ ಹಣ ಯಾಕೆ ಬೇಕು
****
ಒಂದು ಟ್ರಕ್ ಕೆಟ್ಟು ಅದನ್ನು ರಿಪೇರಿಗೆ ಎಳೆದುಕೊಂಡು ಹೋಗಲು ಇನ್ನೊಂದು ಟೋಯಿಂಗ್ ಟ್ರಕ್ ಬಂದಿತು, ಮಧ್ಯೆ ದಪ್ಪ ಹಗ್ಗ ಕಟ್ಟಿ ಎಳೆದುಕೊಂಡು ಹೋಗುತ್ತಿರಲು
ಸಂಟ ಹೇಳಿದ: ನೋಡು ಒಂದು ಹಗ್ಗ ತೊಗೊಂಡು ಹೋಗಕ್ಕೆ ಎರಡು ಟ್ರಕ್ ಬೇಕಾ?
****
ಸಂಟಾ ತನ್ನ ಗೆಳತಿಗೆ ಪತ್ರ ಬರೆಯುತ್ತಿದ್ದ, ಅದನ್ನು ನೋಡಿದ ಬಂಟಾ ಕೇಳಿದ
"ಏನೋ ಲೆಟರ್ ಖಾಲಿ ಇದೆ,ಯಾಕೆ ಈನೂ ಬರೆದಿಲ್ಲಾ?"
ಅದಕ್ಕೆ ಸಂಟಾ ಹೇಳಿದ " ಈ ನಡುವೆ ನಾವು ಮಾತಾಡೋದು ನಿಲ್ಲಿಸಿದ್ದೇವೆ"
****
ಸಂಟಾ: ಎಲ್ರೂ ಯಾಕ್ ಹಿಂಗ್ ಓಡ್ತಾ ಇದ್ದಾರೆ?
ಬಂಟಾ:ರನ್ನಿಂಗ್ ರೇಸ್, ಮೊದಲು ಬಂದವರಿಗೆ ಬಹುಮಾನ ಉಂಟು
ಸಂಟಾ: ಮತ್ತೆ ಮಿಕ್ಕವರೆಲ್ಲಾ ಯಾಕ್ ಓಡ್ಬೇಕೂ?
****
ಸರ್ದಾರ್ ಕನ್ನಡಕದ ಅಂಗಡಿಗೆ ನುಗ್ಗಿದ.ಡಿಸ್ಪ್ಲೇ ಇಟ್ಟಿದ್ದ ಒಂದು ಕನ್ನಡಕ ತೆಗೆದುಕೊಂಡು "ಗ್ಲಾಸ್ ಕಾಕ್ಕೊಂಡ್ರೆ ಚೆನ್ನಾಗಿ ಓದಬಹುದಂತೆ ಹೌದಾ?"ಅಂದ. ಸೇಲ್ಸ್ ಮನ್ ಹೌದು ಎಂದು ಮತ್ತೊಂದು ಲೇಟೆಸ್ಟ್ ಫ್ರೇಮ್ ತೋರಿಸಿದ.ಅದನ್ನು ಧರಿಸಿ "ಏನದು ಇಂಗ್ಲೀಶಿನಲ್ಲಿ ಬರೆದಿರುವುದು ಅಲ್ಲಿ" ಅಂದ. "ಅದು buy 1 ger 1 free, ಯಾಕೆ ಇನ್ನೂ ಸರಿಯಾಗಿ ಕಾಣ್ತಾ ಇಲ್ವ?" ಎಂದ ಸೇಲ್ಸ್ ಮನ್."ಹಂಗಲ್ಲ ನಾನು ಸ್ಕೂಲೀಗೆ ಹೋದವನಲ್ಲ," ಅನ್ನಬೇಕೆ.
****
ಒಬ್ಬ ಸರ್ದಾರ್ ಮತ್ತೊಬ್ಬ ಸರ್ದಾರನನ್ನು ಕೇಳಿದ "ಅಕಸ್ಮಾತ್ ನಿನ್ನ ನಾಯಿಯ ಬಾಲ ಕತ್ತರಿಸಿ ಹೋದರೆ ಏನು ಮಾಡುವೆ?" ಅದಕ್ಕೆ ಆ ಮತ್ತೊಬ್ಬ ಜಾಣನಂತೆ ತಕ್ಷಣ ಹೇಳಿದ"ರೀ ಟೈಲ್ ಶಾಪ್ ಇದೆಯಲ್ಲಾ?"
****
ಪ್ರವಾಸಕ್ಕೆ ಹೊರಟಿದ್ದ ಇಬ್ಬರು ಸರ್ದಾರರು ರೈಲಿನಲ್ಲಿ ಬಹಳ ಹೊತ್ತು ಮಾತನಾಡುತ್ತಾ ಎಲ್ಲಾ ವಿಶಯ ಮುಗಿಸಿ ಸ್ವಲ್ಪಹೊತ್ತು ಮೌನವಾರದು. ಏನಾದರೂ ಮಾತಾಡಬೇಕೆನಿಸಿ ಒಬ್ಬ "ಅರೆ ನಿನ್ನ ಸಾಕ್ಸ್ ಎರಡೂ ಬೇರೆ ಬೇರೆ ಬಣ್ಣವಿದೆ?" ಅಂದ. ಅದಕ್ಕೆ ಆತ "ಅದೇನ್ ಮಹಾ ಇದೇ ಥರದ್ದು ಮನೇಲೂ ಒಂದು ಪೇರ್ ಇದೆ"ಅಂದ
****
ಸಂಟ ಬಂಟ ಡಬಲ್ ಡೆಕ್ಕರ್ನಲ್ಲಿ ಪ್ರಯಾಣ ಮಾಡಲು ಹತ್ತಿದರು.ಬಂಟ ಕೆಳಗಿನ ಮಹಡಿಯಲ್ಲಿ ಕುಳಿತಿರಲು ಸಂಟ ಮೇಲೆ ಹೋಗಿ ಗಾಬರಿಯಿಂದ ಕೆಳಗೆ ಓಡಿ ಬಂದ.ಏನಾಯಿತೆಂದು ಕೇಳಲು "ಸದ್ಯ ಇಲ್ಲೇ ಇರೋಣ ಮೇಲಿನ ಬಸ್ಸಿಗೆ ಡ್ರೈವರ್ರೇ ಇಲ್ಲ ಹಂಗೇ ಹೋಗ್ತಿದೇ !"
****
ಸಂಟ: ಏನೋ ಮಾಡ್ತಿದ್ದೀಯಾ ಬಂಟ
ಬಂಟ: ಮಗನ ವಾಯ್ಸ್ ರೆಕಾರ್ಡ್ ಮಾಡ್ತಿದ್ದೀನಿ
ಸಂಟ: ಯಾಕೆ ?
ಬಂಟ: ದೊಡ್ಡವನಾದ ಮೇಲೆ ಅದರ ಅರ್ಥ ಕೇಳೋಕ್ಕೆ
****
ಸಂಟ ಕೆಲಸದವನಿಗೆ ‘ಹೋಗಿ ಗಿಡಗಳಿಗೆ ನೀರು ಹಾಕು’......ಆಳು: ಆಗಲೆ ಮಳೆ ಬರ್ತಾ ಇದೆ ಸ್ವಾಮೀ........ಸಂಟ: ಮಳೆ ಬಂದ್ರೆ ಏನಂತೆ ಛತ್ರಿ ಹಿಡ್ಕೊಂಡು ಹಾಕು.
****
ಸಂಟ: ನೆನ್ನೆ ರಾತ್ರಿ ಕಳ್ಳ ಬಂದು ನನ್ನ ಮನೆಯಲ್ಲಿ ಎಲ್ಲಾ ದೋಚಿಕೊಂಡು ಹೋದ
ಬಂಟ: ಆದ್ರೆ ನಿನ್ನ ಹತ್ರ ಗನ್ ಇತ್ತಲ್ಲ?
ಸಂಟ:ಅದನ್ನ ನಾನು ಬಚ್ಚಿಟ್ಟಿದ್ದೇಪ್ಪ ಸಧ್ಯ ಇಲ್ಲದಿದ್ದ್ರೆ ಅದನ್ನೂ ಕಳ್ಕೋತಿದ್ದೆ
****
ಸಂಟ:ಲೋ ಬಂಟ ಚತ್ರಿ ತೂತಾಗಿದೆ ಹೊಸಾದು ತೊಗೊಳ್ಳೋ
ಬಂಟ: ಅರೆ ಇರ್ಲಿ ಬಿಡೋ ಮಳೆ ನಿಂತು ಹೋಗೋದು ಹೇಗೆ ಗೊತ್ತಾಗಬೇಕು ಹೇಳು
****
ಬಾಸ್: ಸಂಟ ನಮ್ಮ ಆಫೀಸಲ್ಲಿ ಯಾವ ಕೆಲಸಾನೂ ನಿನಗೆ ಕೊಡಲು ಆಗುವುದಿಲ್ಲ, sorry ಬೇರೆ ಕೆಲಸ ನೋಡ್ಕೋ ಹೋಗು.
ಸಂಟ: ಸಾರ್ ದಯವಿಟ್ಟು ನನ್ನನ್ನ ಅಪಾಯಿಂಟ್ ಮಾಡ್ಕೊಳ್ಳಿ ಕೆಲಸ ಏನೂ ಯಾವತ್ತೂ ಕೇಳಲ್ಲ
****
ಸರದಾರ್ ಒಬ್ಬ ಇಪ್ಪತ್ತು ರೂಪಾಯಿ ಕೊಟ್ಟು ಲಾಟರಿ ಟಿಕೆಟ್ ಕೊಂಡ. ಅದೃಷ್ಟಕ್ಕೆ ಇಪ್ಪತ್ತು ಕೋಟಿ ರೂ ಲಾಟರಿಯಲ್ಲಿ ಗೆದ್ದ. ಲಾಟರಿ ಡೀಲರ್ ಆತನಿಗೆ ತೆರಿಗೆ ನಂತರ ಹದಿನಾಲ್ಕು ಕೋಟಿ ಕೊಟ್ಟ.ಕೋಪಗೊಂಡ ಸರ್ದಾರ್ ಹೇಳಿದ ‘ ಪೂರಾ ಇಪ್ಪಾತ್ತು ಕೋಟಿ ಕೊಟ್ಟರೆ ಸರಿ ಇಲ್ಲದ್ದಿದ್ದರೆ ನನ್ನ ಇಪ್ಪಾತ್ತು ರೂಪಾಯಿ ವಾಪಸ್ ಕೊಡು’ ಅಂದ!!!
****
ಪೋಸ್ಟ್ ಮ್ಯಾನ್: ನಾನು ಐದು ಮೈಲಿ ಪ್ರಯಾಣ ಮಾಡಿ ಈ ಪತ್ರ ತಂದಿದ್ದೇನೆ.
ಸರ್ದಾರ್:ಅಷ್ಟು ದೂರದಿಂದೇಕೆ ಬಂದೆ? ಪೋಸ್ಟ್ ಮಾಡಬಹುದಿತ್ತಾಲ್ಲಾ?
****
ಸರ್ದಾರ್ ಮತ್ತು ಅವನ ಹೆಂಡತಿ ಹೋಟೆಲ್ ನಲ್ಲಿ ಕಾಫಿ ಆರ್ಡರ್ ಮಾಡಿದರು.ಕಾಫಿ ಟೆಬಲ್ ಗೆ ಬಂದ ತಕ್ಷಣ ಸರ್ದಾರ್ ತನ್ನ ಹೆಂಡತಿಗೆ ಹೇಳಿದ "ಬೇಗ ಬೇಗ ಕುಡಿ" ಅದಕ್ಕೆ ಹೆಂಡತಿ "ಯಾಕೆ ?".ಸರ್ದಾರ್ ತಟ್ಟನೆ ಹೇಳಿದ "ಬಿಸಿ ಕಾಫಿ 5 ರೂ,ಕೋಲ್ಡ್ ಕಾಫಿಗೇ 10 ರೂ....ಹೂ ಬೇಗ"
****
ಡೈವರ್ಸ್ ಗೆ ಅರ್ಜಿ ಹಾಕಿದ್ದ ಸರ್ದಾರನಿಗೆ ನ್ಯಾಯಾಧೀಶ ಕೇಳಿದ "ನಿನಗಿರುವುದು ಮೂರು ಮಕ್ಕಳು ನೀನು ಆಸ್ತಿ ಹೇಗೆ ಭಾಗ ಮಾಡುವೆ?" ಅದಕ್ಕೆ ಸರ್ದಾರ್ "ಓಕೆ ನಾವು ಮುಂದಿನ ವರ್ಷ ಆರ್ಜಿ ಹಾಕ್ತೀವಿ" ಅನ್ನೋದೇ
****
ಒಬ್ಬ ಸರ್ದಾರನನ್ನು ಆತನ ಗೆಳೆಯ ಕೇಳಿದ "ಅರೆ! ಮನಮೋಹನ್ ಸಿಂಗ್ ಯಾಕೆ ಸಂಜೆ ವೇಳೆ ಮಾತ್ರ ಜಾಗಿಂಗ್ ಹೋಗ್ತಾರೆ?".ಸರ್ದಾರ್ ಉತ್ತರಿಸಿದ" ಅರೆ ಭಾಯ್ ಅವರು PM ಅಲ್ವಾ AM ಅಲ್ಲಾನೋಡು ಅದಕ್ಕೇ"ಅಂದು ನಕ್ಕ
****
ಸರ್ದಾರ್ ಕನ್ನಡಿಯ ಮುಂದೆ ಕಣ್ಣು ಮುಚ್ಚಿ ನಿಂತಿದ್ದ. ಅದಕ್ಕೆ ಆತನ ಹೆಂಡತಿ "ಅರೆ ಅದೇನ್ ಅಷ್ಟು ಹೊತ್ತಿನಿಂದ ಕನ್ನಡಿ ಮುಂದೆ?" ಅದಕ್ಕೆ ಸರ್ದಾರ್ "ನಾನು ನಿದ್ದೆ ಮಾಡುವಾಗ ಹೇಗೆ ಕಾಣ್ತೀನಿ ಅಂತ ನೋಡ್ತಿದ್ದೀನಿ ಡಿಯರ್"
****
ಸಂಟ:ನೀನು ನನಗೆ ದ್ರೋಹ ಮಾಡಿದೆ
ಬಂಟ:ಇಲ್ಲ ನಾನು ನಿನಗೆ ಬರೀ ರೇಡಿಯೋ ಮಾರಿದೆ ಅಷ್ಟೆ
ಸಂಟ:ಆದ್ರೆ ಲೇಬಲ್ ಮೇಲೆ Made In Japan ಅಂತ ಬರೆದಿದೆ ಆದರೆ ರೇಡಿಯೋ ಆನ್ ಮಾಡಿದರೆ ಇದು ಆಲ್ ಇಂಡಿಯಾ ರೇಡಿಯೋ ಅಂತ ಹೇಳ್ತಾರೆ?" ಅನ್ನೋದೇ
****
ಸರ್ದಾರ್ ಬ್ಯಾಂಕ್ ಕೆಲಸಕ್ಕೆ interview ಗೆ ಹೋದ.ಅಲ್ಲಿ "cyclone ಅಂದ್ರೆ ಏನು?" ಅಂದರು. ಅದಕ್ಕೆ ಸರ್ದಾರ್ ನಕ್ಕು "cyclone ಒಂದು ಸಣ್ಣ ಸಾಲ ಸೈಕಲ್ ಕೊಂಡುಕೊಳ್ಳಲು" ಅಂದ
****
ಸರ್ದಾರ್ ಕನ್ನಡಕದ ಅಂಗಡಿಗೆ ನುಗ್ಗಿದ.ಡಿಸ್ಪ್ಲೇ ಇಟ್ಟಿದ್ದ ಒಂದು ಕನ್ನಡಕ ತೆಗೆದುಕೊಂಡು "ಗ್ಲಾಸ್ ಕಾಕ್ಕೊಂಡ್ರೆ ಚೆನ್ನಾಗಿ ಓದಬಹುದಂತೆ ಹೌದಾ?"ಅಂದ. ಸೇಲ್ಸ್ ಮನ್ "ಹೌದು" ಎಂದು ಮತ್ತೊಂದು ಲೇಟೆಸ್ಟ್ ಫ್ರೇಮ್ ತೋರಿಸಿದ.ಅದನ್ನು ಧರಿಸಿ "ಏನದು ಇಂಗ್ಲೀಶಿನಲ್ಲಿ ಬರೆದಿರುವುದು ಅಲ್ಲಿ?" ಅಂದ. "ಅದು buy 1 get 1 free, ಯಾಕೆ ನಿಮಗೆ ಇನ್ನೂ ಸರಿಯಾಗಿ ಕಾಣ್ತಾ ಇಲ್ವ?" ಎಂದ ಸೇಲ್ಸ್ ಮನ್."ಹಂಗಲ್ಲ ನಾನು ಎಂದೂ ಸ್ಕೂಲೀಗೇ ಹೋದವನಲ್ಲ," ಅನ್ನಬೇಕೆ.
****
ಒಬ್ಬ ಸರ್ದಾರ್ ಮತ್ತೊಬ್ಬ ಸರ್ದಾರನನ್ನು ಕೇಳಿದ "ಅಕಸ್ಮಾತ್ ನಿನ್ನ ನಾಯಿಯ ಬಾಲ ಕತ್ತರಿಸಿ ಹೋದರೆ ಏನು ಮಾಡುವೆ?" ಅದಕ್ಕೆ ಆ ಮತ್ತೊಬ್ಬ ಜಾಣನಂತೆ ತಕ್ಷಣ ಹೇಳಿದ"ರೀ ಟೈಲ್ ಶಾಪ್ ಇದೆಯಲ್ಲಾ?"
****
ಪ್ರವಾಸಕ್ಕೆ ಹೊರಟಿದ್ದ ಇಬ್ಬರು ಸರ್ದಾರರು ರೈಲಿನಲ್ಲಿ ಬಹಳ ಹೊತ್ತು ಮಾತನಾಡುತ್ತಾ ಎಲ್ಲಾ ವಿಶಯ ಮುಗಿಸಿ ಸ್ವಲ್ಪಹೊತ್ತು ಮೌನವಾರದು. ಏನಾದರೂ ಮಾತಾಡಬೇಕೆನಿಸಿ ಒಬ್ಬ "ಅರೆ ನಿನ್ನ ಸಾಕ್ಸ್ ಎರಡೂ ಬೇರೆ ಬೇರೆ ಬಣ್ಣವಿದೆ?" ಅಂದ. ಅದಕ್ಕೆ ಆತ "ಅದೇನ್ ಮಹಾ ಇದೇ ಥರದ್ದು ಮನೇಲೂ ಒಂದು ಪೇರ್ ಇದೆ"ಅಂದ
****
ಸಂಟ ಬಂಟ ಡಬಲ್ ಡೆಕ್ಕರ್ನಲ್ಲಿ ಪ್ರಯಾಣ ಮಾಡಲು ಹತ್ತಿದರು.ಬಂಟ ಕೆಳಗಿನ ಮಹಡಿಯಲ್ಲಿ ಕುಳಿತಿರಲು ಸಂಟ ಮೇಲೆ ಹೋಗಿ ಗಾಬರಿಯಿಂದ ಕೆಳಗೆ ಓಡಿ ಬಂದ.ಏನಾಯಿತೆಂದು ಕೇಳಲು "ಸದ್ಯ ಇಲ್ಲೇ ಇರೋಣ ಮೇಲಿನ ಬಸ್ಸಿಗೆ ಡ್ರೈವರ್ರೇ ಇಲ್ಲ ಹಂಗೇ ಹೋಗ್ತಿದೇ !"
****
ಹುಡುಗಿಯೊಬ್ಬಳು ಸರ್ದಾರನ ಅಂಗಡಿಗೆ ಬಂದು ನಾಚಿಕೆಯಿಂದ ”ನನಗೊಂದು ಅಂಡರ್ ವೇರ್ ತೋರಿಸಿತ್ತೀರಾ” ಅಂದಳು. ಉತ್ತರವಾಗಿ ಸರ್ದಾರ್ ಮತ್ತಷ್ಟು ನಾಚಿಕೆಯಿಂದ ಹೇಳಿದ”ಈಗ ಎಲ್ಲರ ಮುಂದೆ ಬೇಡ ಸಂಜೆ ಏಳರ ನಂತರ ಬನ್ನಿ”ಎಂದನು ಮಂದಕ್ಕೆ ನೀವೇ ಊಹಿಸಿ...
****
ಸರದಾರನ ಹೆಂಡತಿ ಈಜುವ ಕೊಳಕ್ಕೆ ಟೂ ಪೀಸ್ ಧರಿಸಿ ಹೋದ.ಅಲ್ಲಿದ್ದ ಕೋಚ್ ”ಟೂ ಪೀಸ್ ನಿಷೇಧ ಇದೆ” ಅಂದ.ಅದಕ್ಕೆ ಆಕೆ ” ಸರಿ ಹಾಗಾದರೆ ಒನ್ ಪೀಸ್ ಆಗಬಹುದಾ? ಯಾವುದನ್ನು ತೆಗಿಯಲಿ?” ಅಂದಾಗ ಕೋಚ್ ಬಿಟ್ಟ ಬಾಯಿ ಮುಚ್ಚಲೇ ಇಲ್ಲ
****
ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ಸರ್ದಾರ್ ಕೈಯಲ್ಲಿ ದೊಡ್ಡ ಊಟದ ಡಬ್ಬ ಹಿಡಿದು ಹೊರಟಿದ್ದ.ಆತನ ಗೆಳೆಯ ಎಲ್ಲಿಗೆ ಹೊರಟಿರುವೆ ಎಂದು ಕೇಳಲು.ಆತ್ಮ ಹತ್ಯೆ ಮಾಡಿಕೊಳ್ಳಲು ಹಳಿಯ ಕಡೆ ಹೊರಟಿರುವೆ”ಎಂದ.”ಆದರೆ ಊಟ ಯಾರಿಗೆ?” ಎನ್ನಲು ಸರ್ದಾರ್ ಹೇಳಿದ”ಅಕಸ್ಮಾತ್ ಟ್ರೈನ್ ತಡವಾಗಿ ಬಂದರೆ ನಾನು ಹಸಿವಿನಿಂದ ಸಾಯಬಾರದಲ್ಲವೇ” ಅನ್ನುವುದೇ
****
ಸರ್ದಾರ್ ಒಬ್ಬ ಅಡುಗೆ ಮನೆಗೆ ನುಗ್ಗಿ ಸಕ್ಕರೆಡಬ್ಬ ತೆಗೆದು ಒಮ್ಮೆ ಅದನ್ನು ನೋಡಿ ಮುಚ್ಚಿಟ್ಟ, ಇದನ್ನು ಆತನ ಹೆಂಡತಿ ಗಮನಿಸಿದಳು.ಮಾರನೇ ದಿನವೂ ಅದೇ ರೀತಿ ಮಾಡಿದ. ಹೀಗೇ ದಿನಾ ಸಕ್ಕರೆ ಡಬ್ಬಿ ತೆಗೆದು ನೋಡುತ್ತಿರಲು ಹೆಂಡತಿ ಕಾರಣ ಕೇಳಿದಳು ಅದಕ್ಕೆ ಸರ್ದಾರ್ ಹೇಳಿದ” ಡಾಕ್ಟರ್ ದಿನಾ ಸುಗರ್ ಲೆವೆಲ್ ಚೆಕ್ ಮಾಡಲು ಹೇಳಿದ್ದಾರೆ ಚಿನ್ನಾ” ಅನ್ನಬೇಕೇ...
****
ಒಂದು ಕಚೇರಿಯಲ್ಲಿ ಓರ್ವ ಮುಸ್ಲಿಂ, ಓರ್ವ ಮದ್ರಾಸಿ ಮತ್ತೊಬ್ಬ ಸರ್ದಾರ್ ತಮ್ಮ ಊಟದಸಮಯದ್ದಿ ತಾವು ತಂದ ಡಬ್ಬಿ ತೆಗೆದು ದಿನಾ ಅದೇ ತಿಂದು ತಿಂದು ಬೇಸರವಾಗಿ ಒಂದು ನಿರ್ಧಾರಕೆ ಬಂದರು.ನಾಳೆ ದಿನ ಮತ್ತೆ ಅದೇ ತಿಂಡಿ ನಮ್ಮ ಡಬ್ಬಿಯಲ್ಲಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಎಂದುಕೊಂಡರು.ಸರಿ ಮಾರನೇ ದಿನ ಮೂವರೂ ಆತ್ಮ ಹತ್ಯೆ ಮಾಡಿಕೊಂಡರು.ಕಾರಣ ತಿಳಿದ ಅವರಹೆಂಡತಿಯರು ಅಳುತ್ತಾ ಹೇಳಿದರು. ಮುಸ್ಲಿಂ: ” ಮಟನ್ ಬಿಟ್ಟು ಬೇರೆ ಬೇಕು ಅಂದಿದ್ದರೆ ಕಳಿಸುತ್ತಿದ್ದೆ,ಯಾಕೆ ಹೀಗೆ ಮಾಡಿದರೋ... ಅಲ್ಲಾ...” .....ಮದ್ರಾಸಿ:” ನನಕೆ ದಿನಾ ಇಡ್ಲಿ ವಾಂಡ ಅಂದಿದ್ದರೆ ವೇರೆ ಕಲ್ಸ್ತಾಇರ್ತಿದ್ದೆ ಅರೆ... ಆಂಡವನೇ...” ಎನ್ನಲು ಸರ್ದಾರನ ಹೆಂಡತಿ ”ಅರೆ ನನ್ನ ಗಂಡ ಯಾಕೆ ಸತ್ತ ಅಂತ ನನಗೆ ಗೊತ್ತೇ ಆಗ್ಲಿಲ್ಲ, ದಿನಾ ಅವರೇ ಡಬ್ಬಿ ಕಟ್ಟಿಕೊಂಡು ಹೋಗ್ತಿದ್ರು....ಅಯ್ಯಯ್ಯೋ...”
****
3 ಸರ್ದಾರ್ ಗಳು ಕಚೇರಿಯಿಂದ ತಮ್ಮ ಬಾಸ್ ಗೆ ತಿಳಿಯದ ಹಾಗೆ ಗುಪ್ತವಾಗಿ ಬೇಗ ಮನೆಗೆ ಹೋಗಲು ಸಂಚು ಮಾಡಿದರು.ಅದರಂತೆ ಒಂದುದಿನ ಎಲ್ಲರೂ ಬೇಗ ಹೊರಟರು. ಒಬ್ಬನು ಮನೆಗೆ ಹೋಗಿ ಮನೆಕೆಲಸ ಮಾಡಿ ರೆಸ್ಟ್ ಪಡೆದು ಟೀ ಕುಡಿದು ಅರಾಮವಾಗಿ ಕಳೆದನು, ಇನ್ನೊಬ್ಬನು ವ್ಯಾಯಾಮ ಮಾಡಿ ಹೆಂಡತಿಯೊಡನೆ ಸುತ್ತಾಡಿ ಹಾಯಾಗಿ ಕಳೆದನು, ಮತ್ತೊಬ್ಬನು ಮೆಲ್ಲಗೆ ಮನೆಗೆ ಬಂದು ತನ್ನ ರೂಮಿನಲ್ಲಿ ತನ್ನ ಹೆಂಡತಿಯ ಜೊತೆ ತನ್ನ ಬಾಸ್ ಚಕ್ಕಂದ ಆಡುತ್ತಿರುವುದನ್ನು ನೋಡಿ ಹಾಗೇ ಸದ್ದಾಗದ ಹಾಗೆ ಬಾಗಿಲು ಮುಚ್ಚಿ ಹೊರಗೆ ಹೋದನು. ಮರುದಿನ ಎಲ್ಲರೂ ಹೇಗಿತ್ತು ನೆನ್ನೆ ಇಂದೂ ಕಚೇರಿಗೆ ಬಂಕ್ ಹೊಡೆಯೋಣವಾ ಎಂದಾಗ ಆ ಕಡೇಯ ಸರ್ದಾರ್ ಹೇಳಿದ” ಬೇಡಪ್ಪ ನೆನ್ನೆ ಇನ್ನೇನು ಸ್ವಲ್ಪದ್ರಲ್ಲೆ ಸಿಕ್ಕಾಕೊಂಡು ಬಿಡ್ತಿದ್ದೆ, ನೀವು ಬೇಕಾದ್ರೆ ಹೋಗಿ” ಅಂದ.
****
ಸರ್ದಾರ್ ಒಬ್ಬ ಗ್ರಂಥಾಲಯದಲ್ಲಿ ಕಥೆ ಓದಲು ಒಂದು ದಪ್ಪವಾದ ಪುಸ್ತಕ ಹಿಡಿದು ಎಲ್ಲಾ ಪುಟಗಳನ್ನು ಓದಿ ಮುಗಿಸೇ ಬಿಟ್ಟ.
ನಂತರ ಮನಸ್ಸಿನಲ್ಲೇ ಅಂದುಕೊಂಡ”ಅರೆ ಇದೇನ್ ಕಥೇಗಿಂತ ಬರೀ ಹೆಸರುಗಳೇ ಜಾಸ್ತಿ ಇದೆ”ಅಂತ..... ಅಷ್ಟರಲ್ಲಿ ಲೈಬ್ರೇರಿಯನ್ ಆ ಪುಸ್ತಕ ಕಸಿದು”ಇಲ್ಲಿದೆಯಾ ನಾನು ಆವಾಗ್ಲಿಂದ ಹುಡುಕುತ್ತಿದ್ದೆ ಈ ಯಲ್ಲೋ ಪೇಜಸ್ ನ”
****
ಸರ್ದಾರ್ ಉಡುಪಿ ಹೋಟೆಲ್ ಗೆ ಹೋಗಿ ದೋಸೆ ಆರ್ಡರ್ ಮಾಡಿ ಬರೀ ಪಲ್ಯ ತಿಂದು ದೋಸೆ ಬಿಟ್ಟ,ನಂತರ ಒಂದು ಸಮೋಸ ಆರ್ಡರ್ ಮಾಡಿ ಅದರಲ್ಲಿದ್ದ ತರಕಾರಿ ಪಲ್ಯ ಮಾತ್ರ ತಿಂದು ಮಿಕ್ಕಿದ್ದು ಬಿಟ್ಟ,ವಡೆ ಆರ್ಡರ್ ಮಾಡಿ ಗರಿಗರಿ ಎನ್ನುವ ಮೇಲಿನ ಪದರ ಬಿಡಿಸಿ ಒಳಗಿದ್ದ ಮೃದುವಾದ ಭಾಗ ಮಾತ್ರ ತಿಂದ.
ಕುತೂಹಲ ತಡೆಯಲಾರದೆ ಮಾಣಿ ಕೇಳಿದ ”ಯಾಕೆ ಸಾರ್ ಹೀಗೆ ಮಾಡ್ತಿದ್ದೀರಿ?”ಎಂದು.ಅದಕ್ಕೆ ಸರ್ದಾರ್”ನನಗೆ ಆರೋಗ್ಯ ಸರಿ ಇಲ್ಲ, ಡಾಕ್ಟರ್ ಹೇಳಿದ್ದಾರೆ ಹೊರಗಡೆ ತಿಂಡಿ ತಿನ್ನ ಬೇಡ ಅಂತ”
ಸರದಾರ್ ಜೂಸ್ ಬಾಟಲನ್ನೆ ಬಹಳ ಹೊತ್ತು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಲೇ ಇದ್ದದ್ದನ್ನು ಕಂಡು ಮತ್ತೊಬ್ಬ ಯಾಕೆಂದು ಕೇಳಿದ.ಅದಕ್ಕೆ ಸರ್ದಾರ್ ಹೇಳಿದ `ಅದರಮೇಲೆ CONCENTRATE ಅಂತ ಬರೆದಿದೆ?`