ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಕಗ್ಗ ( ಸ )

ಸರಿಯಾಗಲಿಲ್ಲವದು ಸರಿಯಿದಲ್ಲವೆನುತ ।

ಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ ।।

ಕೊರೆಯಾದೊಡೇನೊಂದು ನೆರೆದೊಡೇನಿನ್ನೊಂದು ।

ಒರಟು ಕೆಲಸವೊ ಬದುಕು ಮಂಕುತಿಮ್ಮ ।।

 

ಸತ್ತೆವೆನ್ನಾಶೆಗಳು ಗೆದ್ದೆನಿಂದ್ರಿಯಗಣವ ।

ಚಿತ್ತವಿನ್ನಲುಗದೆಂಬಾ ಜಂಭ ಬೇಡ ।।

ಎತ್ತಣಿಂದಲೋ ಗಾಳಿ ಮೋಹಬೀಜವ ತಂದು ।

ಬಿತ್ತಲಾರದೆ ಮನದಿ ಮಂಕುತಿಮ್ಮ ।।

 

ಸರ್ವರುಂ ಸಾಧುಗಳೆ ಸರ್ವರುಂ ಬೋಧಕರೆ ।

ಜೀವನ ಪರೀಕ್ಷೆ ಬಂದಿದಿರು ನಿಲುವನಕ ।।

ಭಾವಮರ್ಮಂಗಳೇಳುವವಾಗ ತಳದಿಂದ ।

ದೇವರೇ ಗತಿಯಾಗ ಮಂಕುತಿಮ್ಮ ।।

 

ಸ್ಮಿತವಿರಲಿ ವದನದಲಿ ಕಿವಿಗೆ ಕೇಳಿಸದಿರಲಿ ।

ಹಿತವಿರಲಿ ವಚನದಲಿ ಋತವ ಬಿಡದಿರಲಿ ।।

ಮಿತವಿರಲಿ ಮನಸಿನುದ್ವೇಗದಲಿ ಭೋಗದಲಿ ।

ಅತಿ ಬೇಡವೆಲ್ಲಿಯುಂ ಮಂಕುತಿಮ್ಮ ।।

 

ಸುರಪಸಭೆಯಲಿ ಗಾಧಿಸುತ ವಸಿಷ್ಠ ಸ್ಪರ್ಧೆ ।

ಧರೆಯೊಳದರಿಂ ಹರಿಶ್ಚಂದ್ರಂಗೆ ತಪನೆ ।।

ಬರುವುದಿಂತೆತ್ತಣಿನೊ ಬೇಡದ ಪ್ರಾರಬ್ಧ ।

ಕರುಮಗತಿ ಕೃತ್ರಿಮವೊ ಮಂಕುತಿಮ್ಮ ।।

 

ಸುತ್ತಿ ಸುತ್ತುವ ಖಗವ ಗೂಡ ನೆನಪೆಳೆಯುವುದು ।

ಗೊತ್ತುನೂಲ್ ಪಿಡಿದಿಹುದು ದನವ ಬಯಲಿನಲಿ ।।

ತತ್ತ್ವವೊಂದರ ಹಿಡಿತಕೊಗ್ಗದಿಹ ಬಾಳೇನು ।

ಕಿತ್ತ ಗಾಳಿಯ ಪಟವೊ ಮಂಕುತಿಮ್ಮ ।।

 

ಸಾಕುಸಾಕೆನಿಸುವುದು ಲೋಕಸಂಪರ್ಕಸುಖ ।

ಸೋಕಿದೆಡೆ ತುರಿಯನೆಬ್ಬಿಸುವ ತುರುಚಿಯದು ।।

ಮೂಕನವೆ ತುರಿಸದಿರೆ ತುರಿಯುತಿರೆ ಹುಣ್ಣುರಿತ ।

ಮೂಕನಪಹಾಸ್ಯವಿದು ಮಂಕುತಿಮ್ಮ ।।


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022