ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸರ್ವಜ್ಞ (ಆ)

"ಆಡದೆ ಕೊಡುವವನು | ರೂಢಿಯೊಳಗುತ್ತಮನು |

ಆಡಿ ಕೊಡುವವನು ಮಧ್ಯಮನದಮ ತಾ |

ನಾಡಿ ಕೊಡದವನು ಸರ್ವಜ್ಞ |"

 

ಆಡದಲೆ ಮಾಡುವನು | ರೂಡಿಯೊಳಗುತ್ತಮನು |

ಆಡಿ ಮಾಡುವನು ಮಧ್ಯಮನು , ಅಧಮ ತಾ |

ನಾಡಿ ಮಾಡದನು ಸರ್ವಜ್ಞ |"

 

"ಆಳಾಗ ಬಲ್ಲವನು | ಆಳುವನು ಅರಸಾಗಿ |

ಆಳಾಗಿ ಬಾಳಲರಿಯದವನು ಕಡೆಯಲ್ಲಿ |

ಹಾಳಾಗಿ ಹೋಹ ಸರ್ವಜ್ಞ |"

 

"ಆಳು ಇದ್ದರೆ ಅರಸು | ಕೂಳು ಇದ್ದರೆ ಬಿರಸು |

ಆಳು ಕೂಳುಗಳು ಮೇಳವಿಲ್ಲದ ಮನೆಯು |

ಬಾಳುಗೇಡೆಂದ ಸರ್ವಜ್ಞ |"

 

"ಆಗ ಬಾ ! ಈಗ ಬಾ | ಹೋಗಿ ಬಾ | ಎನ್ನದೆಲೆ |

ಆಗಲೇ ಕರೆದು ಕೊಡುವವನ ಧರ್ಮ ಹೊ |

ನ್ನಾಗದೆ ಬಿಡದು  à²¸à²°à³à²µà²œà³à²ž |"

 

"ಆನೆ ಕನ್ನಡಿಯಲ್ಲಿ | ತಾನಡಗಿ ಈಪ್ಪಂತೆ |

ಜ್ಞಾನವುಳ್ಳವರ ಹೃದಯದಲಿ ಪರಶಿವನು |

ತಾನಡಗಿ ಇಹನು ಸರ್ವಜ್ಞ |"

 

"ಆನೆ ನೀರಾಟದಲಿ | ಮೀನ ಕಂಡಂಜುವುದೆ ? | 

ಹೀನ ಮಾನವರ ಬಿರುನುಡಿಗೆ ತತ್ತ್ವದ |

ಜ್ಞಾನಿಯಂಜುವನೆ ? ಸರ್ವಜ್ಞ |"

 

"ಆರು ಬೆಟ್ಟವ ಹಾರಿದೆನೆಂದರೆ

ಹಾರಿದನೆಂದೆನಬೇಕು ಮೂರ್ಖರೊಳು

ಕಲಹವೇ ಸಲ್ಲ ಸರ್ವಜ್ಞ |"

 

ಆಗಿಲ್ಲ ಹೋಗಿಲ್ಲ | ಮೇಗಿಲ್ಲ ಕೆಳಗಿಲ್ಲ |

ತಾಗಿಲ್ಲ ತಪ್ಪು ತಡೆಯಿಲ್ಲ, ಲಿಂಗಕ್ಕೆ |

ದೇಗುಲವೆ ಇಲ್ಲ ಸರ್ವಜ್ಞ |

 

ಆಗು ಹೋಗುಗಳಿಲ್ಲ | ಮೇಗು ಕೀಳುಗಳಿಲ್ಲ |

ಬೋಗಗಳು ಅಲ್ಲಿ ಮೊದಲಿಲ್ಲ, ಯೋಗಿಗೆ |

ರಾಗವೇ ಇಲ್ಲ ಸರ್ವಜ್ಞ | 

 

ಆ ದೇವ ಈ ದೇವ | ಮಾದೇವನೆನಬೇಡ |

ಆ ದೇವರದೇವ ಭುವನದ ಪ್ರಾಣಿಗಳಿ |

ಗಾದವನೆ ದೇವ ಸರ್ವಜ್ಞ |

 

ಆನೆ ತಾ ತುಡುಗಾಗೆ | ಜ್ಞಾನಿ ಮೂರ್ಖನುಮಾಗೆ |

ಭೂನಾಥ ಜಾರನಾದರೆ ಮಾಣಿಪುದು |

ಮಾನವರಿಗಳವೆ ಸರ್ವಜ್ಞ | 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025