ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ದಾಸರಪದ (ಇ)

ಇರಬೇಕು ಸಂಸಾರದಿ ಮನುಜ        ರಾಗ: ನಾದನಾಮಕ್ರಿಯೆ, ತಾಳ: ಆದಿ

 

ಇರಬೇಕು ಸಂಸಾರದಿ ಮನುಜ ಇರದಂತಿರಬೇಕು ||ಪ||

ಇರದಂತಿರಬೇಕು ಅಥವಾ  ಇರಬೇಕು ಇಲ್ಲದಿರಬೇಕು ಶ್ರೀ ಹರಿದಾಸರು ಸಂಸಾರದೊಳಗೆ ||ಅ ಪ||

 

ಕುಲಸತಿಯಾದರೆ ಕೂಡಿರಬೇಕು

ಸುಲಭದಿಂದಲಿ ಸ್ವರ್ಗ ಸೂರಾಡಬೇಕು

ಕಲಹಗಂಟಿ ಸತಿ ಕರ್ಕಶೆಯಾದರೆ

ಹಲವು ಪರಿಯಿಂದ ಹೊರಗಾಗಬೇಕು |೧|

 

ಮಕ್ಕಳು ತಾವು ಮತಿವಂತರಾದರೆ

ಅಕ್ಕರೆಯಿಂದಲಿ ಕೂಡಿರಬೇಕು

ಚಿಕ್ಕತನದಿ ಬುದ್ಧಿ ಭೋರುಂಡನಾದರೆ

ಗಕ್ಕನೆ ಅಲ್ಲಿಂದ ಹೊರಗಾಗಬೇಕು |೨|

 

ದುಷ್ಟರ ಕಂಡರೆ ದೂರವಿರಬೇಕು

ಶಿಷ್ಟರ ಕಂಡರೆ ಕೈ ಮುಗಿಯಬೇಕು

ದಿಟ್ಟ ಶ್ರೀ ಪುರಂದರವಿಠಲ ರಾಯನ

ಗಟ್ಟಿಯಾಗಿ ನಿರುತ ನೆರೆ ನಂಬಬೇಕು |೩|

 

ಈತ ಲಿಂಗದೇವ ಶಿವನು

ಈತ ಲಿಂಗದೇವ ಶಿವನು | ಆತ ರಂಗಧಾಮ ವಿಷ್ಣು  ||ಪ||

ಮಾತಕೇಳೋ ಮಂಕುಮನುಜ | ಮನದ ಅಹಂಕಾರ ಬಿಟ್ಟು ||ಅ ಪ||

 

ವೇದಕ್ಕೆ ಸಿಕ್ಕಿದನೀತ | ವೇದನಾಲ್ಕು ತಂದನಾತ

ಮೈಗೆಬೂದಿ ಧರಿಸಿದನೀತ | ಗಿರಿಯನ್ನು ಪೊತ್ತನಾತ ||೧||

 

ವ್ಯಾಧನಾಗಿ ಒಲಿದನೀತ | ಮಾಧವಾ ಮಧುಸೂದನನಾತ

ಮದನನ್ನ ಉರುಹಿದನೀತ | ಮದನನ್ನೇ ಪಡೆದನಾತ ||೨||

 

ಗಂಗೆಯನ್ನು ಪೊತ್ತವನೀತ | ಗಂಗೆಯನ್ನು ಪಡೆದನಾತ

ತುಂಗ ಹೆಳವನಕಟ್ಟೆ ಲಿಂಗ | ಅಂತರಂಗ ರಂಗನಾಥ ||೩||

 

ಇಟ್ಟಿಗೆ ಮೇಲೆ ನಿಂತ ನಮ್ಮ

ಇಟ್ಟಿಗೆ ಮೇಲೆ ನಿಂತ ನಮ್ಮ ವಿಠ್ಠಲ ತಾನು

ಪುಟ್ಟಪಾದ ಊರಿನಿಂತ ದಿಟ್ಟ ತಾನು      ||ಪ||

ಪುಟ್ಟ ಪಾದ ಊರಿ ನಿಂತ ಗಟ್ಟಿಯಾಗಿ ನಿಂತಾನಮ್ಮ 

ಟೊಂಕದ ಮೇಲೆ ಕೈಯಕಟ್ಟಿ ಭಕ್ತರು ಬರುವುದ ನೋಡುವನಮ್ಮ ||ಅ ಪ||

 

ಪಂಢರಪುರದಲ್ಲಿರುವನಂತೆ ಪಾಂಡುರಂಗ ಎಂಬುವನಂತೆ|

ಚಂದ್ರಭಾಗ ಪಿತ ಇವನಂತೇ

ಚಂದ್ರಭಾಗ ಪತಿ ಇವನಂತೇ ಅರಸಿರುಕ್ಮಿಣಿ ಪತಿ ಇವನಂತೇ ||೧||

 

ಕನಕದಾಸೆ ಇವಗಿಲ್ಲವಮ್ಮ ಹಣದ ಆಸೆ ಬೇಕಿಲ್ಲವಮ್ಮ||

ನಾದಬ್ರಹ್ಮ ಎಂಬುವ ನಮ್ಮ

ನಾದಬ್ರಹ್ಮ ಎಂಬುವ ನಮ್ಮ ಭಕುತರ ವಚನಕೆ ಕಾದಿಹನಮ್ಮ ||೨||

 

ಕರಿಯಕಂಬಳಿ ಹೊದ್ದಿಹನಮ್ಮ ಹಣೆಗೆ ನಾಮ ಹಚ್ಚಿಹನಮ್ಮ||

ತುಳಸಿಮಾಲೆ ಹಾಕ್ಯನಮ್ಮ

ತುಳಸಿಮಾಲೆ ಹಾಕ್ಯನಮ್ಮ ಪುರಂದರವಿಠ್ಠಲನೊಲಿದನಮ್ಮ ||೩||


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023