ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಭಾವಗೀತೆ (ಎ)

ಎದೆ ತುಂಬಿ ಹಾಡಿದೆನು

 

ಎದೆ ತುಂಬಿ ಹಾಡಿದೆನು ಅಂದು ನಾನು

ಮನವಿಟ್ಟು ಕೇಳಿದಿರಿ ಅಲ್ಲಿ ನೀವು

ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು

ಕೇಳುವಿರಿ ಸಾಕೆನಗೆ ಅದುವೇ ಬಹುಮಾನ

ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ?

 

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ

ಹಾಡುವುದು ಅನಿವಾರ್ಯ ಕರ್ಮ ನನಗೆ,

ಕೇಳುವವರಿಹರೆಂದು ನಾ ಬಲ್ಲೆನದರಿಂದ

ಹಾಡುವೆನು ಮೈತುಂಬಿ ಎಂದಿನಂತೆ

ಯಾರು ಕಿವಿ ಮುಚ್ಚಿದರು ಎನಗಿಲ್ಲ ಚಿಂತೆ

 

 

-ಡಾ. ಜಿಎಸ್. ಶಿವರುದ್ರಪ್ಪ

 

  ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ

ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ

ನಾಲ್ಕು ಹನಿಯ ಚೆಲ್ಲಿ

ದಿನದಿನವು ಕಾದು ಬಾಯಾರಿ ಬೆಂದೆ

ಬೆಂಗದಿರ ತಾಪದಲ್ಲಿ

ನನ್ನೆದೆಯ ಹಸಿರ ಉಸಿರು ಕುಗ್ಗಿದರು

ಬರಲಿಲ್ಲ ನಿಮಗೆ ಕರುಣ

ನನ್ನ ಹೃದಯದಲಿ ನೋವು ಮಿಡಿಯುತಿದೆ

ನಾನು ನಿಮಗೆ ಶರಣ

ಬಡವಾದ ನನ್ನ ಒಡಲುರಿಯ ಬೇಗೆ

ನಿಮಗರಿವು ಆಗಲಹುದೆ?

ನೀಲಗಗನದಲಿ ತೇಲಿ ಹೋಗುತಿಹ

ನಿಮ್ಮ ನೆಳೆಯಬಹುದೆ?

ಬಾಯುಂಟು ನನಗೆ, ಕೂಗಬಲ್ಲೆನಾ

ನಿಮ್ಮೆದೆಯ ಪ್ರೇಮವನ್ನು

ನೀವು ಕರುಣಿಸಲು ನನ್ನ ಹಸಿರೆದೆಯು

ಉಸಿರುವುದು ತೋಷವನ್ನು

ಓ ಬನ್ನಿ ಬನ್ನಿ, ಓ ಬನ್ನಿ ಬನ್ನಿ

ನನ್ನೆದೆಗೆ ತಂಪತನ್ನಿ,

ನೊಂದ ಜೀವರಿಗೆ ತಂಪನೀಯುವುದೆ

ಪರಮ ಪೂಜೆಯೆನ್ನಿ!

                          -ಡಾ.ಜಿ.ಎಸ್.ಶಿವರುದ್ರಪ್ಪ


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022