ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಭಾವಗೀತೆ (ಹ)

ದಿ||   ಜಿ ಎಸ್ ಶಿವರುದ್ರಪ್ಪ

ಹೌದೇನೇ ಉಮಾ

 

ಹೌದೇನೇ ಉಮಾ ಹೌದೇನೇ.

ಜನವೆನ್ನುವುದಿದು ನಿಜವೇನೇ ?-

ಮಸಣದ ಬೂದಿಯ ಮೈಗೆ ಬಳಿದು ಶಿವ

ಎಲ್ಲೆಲ್ಲೋ ತಿರುಗುವನಂತೆ !

 

ಹೊಟ್ಟೆ ಬಟ್ಟೆಗೂ ಗತಿಯಿಲ್ಲದರೊಲು

ಊರೂರಲು ತಿರಿದುಂಬುವನಂತೆ !

ನೀನು ಕೂಡ ಬಂಗಾರದ ಮೈಯಿಗೆ

ಆ ಬೂದಿಯನೇ ಬಳಿಯುವೆಯಂತೆ.

 

ನಿನ್ನ ತಾಯಿ ನಾನಾಗಿಹ ತಪ್ಪಿಗೆ

ಸಹಿಸಬೇಕೆ? ಅವಮಾನವನು?

ಮತ್ತೆ ನಿನ್ನ ಶಿವ ಕರೆಯಲು ಬರಲಿ

‘ಮನೆಯೊಳಿಲ್ಲ ಉಮೆ’- ಎನ್ನುವೆನು.

 

ಹಾಡು ಹಳೆಯದಾದರೇನು

- ಜಿ.ಎಸ್.ಶಿವರುದ್ರಪ್ಪ

 

ಹಾಡು ಹಳೆಯದಾದರೇನು ಭಾವ ನವನವೀನ..

ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ ||ಪ||

 

ಹಳೆಯ ಹಾಡು ಹಾಡು ಮತ್ತೆ ಅದನೆ ಕೇಳಿ ತಣಿಯುವೆ

ಹಳೆಯ ಹಾಡಿನಿಂದ ಹೊಸತು ಜೀವನಾ ಕಟ್ಟುವೆ ||೧||

 

ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು ಹೃದಯ ತೆರೆದಿದೆ

ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ ||೨||

 

 

ಹಕ್ಕಿಯೊಂದು ಹಾರಿ ಬಂದು

ಹಕ್ಕಿಯೊಂದು ಹಾರಿ ಬಂದು

ನನ್ನ ಎದೆಯೊಳವಿತುಕೊಂಡು

ಬಣ್ಣ ಬಣ್ಣ ರೆಕ್ಕೆ ಬಿಚ್ಚಿ

ಮನಸಿಗೆಲ್ಲ ಅದನು ಹಚ್ಚಿ ಕುಣಿಯತೊಡಗಿತು

ಹಕ್ಕಿ ಕುಣಿಯತೊಡಗಿತು ||

 

ಅಲ್ಲಿ ಇಲ್ಲಿ ಓಡಿಯಾಡಿ

ನೋವು ಮರಸಿ ಮೋದಿ ಮಾಡಿ

ಮತ್ತೆ ಮತ್ತೆ ಕಾಡಿ ಬೇಡಿ

ಏನೋ ಮಾಡಿತು ಹಕ್ಕಿ ಏನೋ ಮಾಡಿತು ||

 

ನಕ್ಕು ನಲಿದು ಹಾಡುತಿರಲು

ದಿನವು ಹೀಗೆ ಉರುಳುತಿರಲು

ಕಂದ ಕಣ್ಣು ಕಾರುತಿರಲು

ಲೋಕವೇನೋ ಆಡುತಿರಲು

ಅಂಜಿ ಹಾರಿತು ಹಕ್ಕಿ ಅಂಚಿ ಹಾರಿತು ||

 

ಇಂತು ಹಕ್ಕಿ ಹಾರಿಹೋಗಿ

ಲೋಕವೆಲ್ಲ  ಖಾಲಿಯಾಗಿ

ಬದುಕು ತುಂಬ ಭಾರವಾಗಿ

ನೆನಪು ನೋವು ಮಾಗಿಯಾಗಿ

ನಾನು ಉಳಿದೆನು ಇಲ್ಲಿ ನಾನು ಉಳಿದೇನು ||

 

-ಶರತ್ ಕಲ್ಕೋಡ

 

 

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022