ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ದಾಸರಪದ (ರ)

ರಘುರಾಮರ ಪಾದವ  ಹಿಡಿ ಹಿಡಿ

ರಘುರಾಮರ ಪಾದವ  ಹಿಡಿ ಹಿಡಿ ||ಪ||

ಕಾಮ ಕ್ರೋಧ ಮದ ಮತ್ಸರಗಳೆಂಬೋ | ದುರಿತವ ಬ್ಯಾಗನೆ ಹೊಡಿ ಹೊಡೀ||೧||

ಹೆಣ್ಣು ಹೊನ್ನು ಮಣ್ಣು ಮೂರರಾಶೆಯ ಮಾಡಿದೆ | ಅದರೊಳಗೇನಿದೆ ಹುಡಿ ಹುಡೀ ||೨||

ಶಿದವಿಠಲನ ಪಾದಸ್ಮರಣೆಯ |ಮರೆಯದೆ ಬೇಗನೆ ನುಡಿ ನುಡೀ ||೩||

 

ರಂಗ ಬಾರೋ ರಂಗಯ್ಯ ಬಾರೋ

ರಂಗ ಬಾರೋ ರಂಗಯ್ಯ ಬಾರೋ - ನೀ ||ಪ||

ಬಾರದಿದ್ದರೆ ಎನ್ನ ಪ್ರಾಣ ಉಳಿಯದು ||ಅ||

ಅತ್ತಿಗೆ ಮೈದುನ ಬಾರೋ ಅತ್ತೆಯ ಮಗಳ ಗಂಡ | ಅತ್ತಿಗೆ ಮೇಲತ್ತಿಗೆ ನಾದಿನಿ ಸೊಸೆಯ ಗಂಡ ||೧||

ಮಾವನ ಅಳಿಯನೆ ಬಾರೋ ಮಾವನ ಬೀಗನ ತನುಜ | ಮಾವನ ಮಡದಿಯ ಮಗಳ ತಂಗಿಯ ಗಂದ ||೨||

ಅಂಬುಧಿ ಶಯನನೆ ಬಾರೋ ಆದಿ ವಸ್ತುವೆ ರಂಗ |ಕಂಬದೊಳು ನೆಲೆಸಿದ ಆದಿಕೇಶವರಾಯ ||೩||

 

ರಂಗನ ನೋಡಿರೆ ರಾಜಕುವರ

ರಂಗನ ನೋಡಿರೆ ರಾಜಕುವರ ನರ| ಸಿಂಗದೇವ ನಮ್ಮ ದೇವಕಿಸುತನ ||ಪ||

 

ಹಮ್ಮಿನ ತಾಯಿತ ತೋಳ ಬಾಪುರಿಯೋ | ಘಮ್ಮನೆ ಘಲ್ಲೆಂಬ ಗೆಜ್ಜೆಯ ಧ್ವನಿಯೊ |

ಸುಮ್ಮಹಿಮನ ಕಿವಿಯಲ್ಲಿ ಚೌಕುಲಿಯೋ | ತಿಮ್ಮರಾಯನಿಟ್ಟ ಸೊಬಗಿನ ಬಗೆಯೊ||೧||

 

ಶುಕ್ಕರವಾರದ ಪೂಜೆಗೊಂಬುವನ |ಸಕ್ಕರೆ ಪಾಲು ಮೊಸರು ಬೆಣ್ಣೆ ಮೆಲ್ಲುವನ|

ಘಕ್ಕನೆ ಸುರರಿಗೆ ಅಮೃತವನಿತ್ತವನ|ರಕ್ಕಸಕುಲವೈರಿ ರಾವಣಾಂತಕನ||೨||

 

ಪಾಪವಿನಾಶಿನಿ ಸ್ನಾನವ ಮಾಡಿ|ಪಾಪಗಳೆಲ್ಲವು ಬೇಗ ಬಿಟ್ಟೋಡಿ|

ಈ ಪರಿ ದಿನದಿನ ಮೂರುತಿ ನೋಡಿ| ಶ್ರೀಪತಿ ಪುರಂದರ ವಿಠಲನ ಪಾಡಿ||೩||

 

 

ರಾಮನೆಂತ  ಚೆಲುವನಮ್ಮ 

ರಾಗ : ಶಂಕರಾಭರಣ  ತಾಳ : ಆದಿ  s ಮಿಶ್ರ ಚಾಪು 

 

ರಾಮನೆಂತ  ಚೆಲುವನಮ್ಮ 

ಸೀತಾ  ರಾಮನೆಂತ  ಚೆಲುವನಮ್ಮ 

ರಾಮ ಜಗದಭಿ  ರಾಮ 

ದುರಿತವಿರಾಮ ಸದ್ಗುಣಧಾಮ 

ತಾರಕ  ನಾಮ  ಮೇಘಶ್ಯಾಮ  ಶ್ರೀ  ರಘ II ರಾಮನೆಂತ  II 

 

(ಮಿಶ್ರ  ಚಾಪು)

ನೀಲ ಮಣಿಗವು  ಬಾಲ ಚಂದ್ರನ  

ಜಾಲ  ನೋತವು  ಬಾಲ  ಚಂದ್ರನ 

ಪೋಲುತಿರುವುದು  ಹಾಲಭಾಗ  ವಿಶಾಲ  ಕಮಲಾಕ್ಷಿ 

 

 

ರಾಗಿ ತಂದೀರಾ 

 

ರಾಗಿ ತಂದೀರಾ ಭಿಕ್ಷಕೆ  ರಾಗಿ ತಂದೀರಾ 

ಯೋಗ್ಯರಾಗಿ ಭೋಗ್ಯರಾಗಿ 

ಭಾಗ್ಯವಂತರಾಗಿ ನೀವು II ರಾಗಿ II 

 

ಅನ್ನದಾನವ ಮಾಡುವರಾಗಿ 

ಅನ್ನ  ಛತ್ರವ ನಿತ್ತವರಾಗಿ 

ಅನ್ಯ  ವಾರ್ತೆಗಳ ಬಿತ್ತವರಾಗಿ 

ಅನ್ಯ  ವಾರ್ತೆಗಳ ಬಿತ್ತವರಾಗಿ 

ಅನುದಿನ  ಭಜನೆಯ ಮಾಡುವರಾಗಿ  II  ರಾಗಿ  II 

 

ಮಾತಾ  ಪಿತರ  ಸೇವಿತರಾಗಿ 

ಪಾತಕ  ಕಾರ್ಯವ ಬಿತ್ತವರಾಗಿ 

ಖ್ಯಾತಿಯಲ್ಲಿ ಮಿಗಿಲಾದವರಾಗಿ 

 ನೇತಿ  ಮಾರ್ಗದಲಿ ಖ್ಯಾತರಾಗಿ II ರಾಗಿ II 

 

ಶ್ರೀರಮಣನ  ಸದಾ ಸ್ಮರಿಸುವರಾಗಿ 

ಗುರುವಿಗೆ  ಬಾಗುವಂಥವರಾಗಿ 

ಕರೆ  ಕರೆ  ಸಂಸಾರ  ಸೇಗುವರಾಗಿ 

ಪುರಂದರ  ವಿಠಲನ ಸೇವಿತರಾಗಿ  II ರಾಗಿ II

 

ರಂಗ  ಕೊಳಲನೂದಲಾಗಿ 

 

ರಂಗ  ಕೊಳಲನೂದಲಾಗಿ  ಮಂಗಳಮಯವಾಯ್ತು  ಧರೆ 

ಜಗಂಗಳು  ಚೈತನ್ಯ  ಮರೆತು  ಅಂಗ  ಪರವಶವಾದುವು  II ಪ II 

 

ತೀಡಿದ ಮಾರುತ  ಮಂದಮತಿಗೈಯೆ ಬಾಡಿದ  ಬರಲು  ಫಲಗೋ೦ಚಲು ಬಿಡೆ 

ಪಾಡಲೋಲ್ಲವು  ಅಳಿಕುಲಂಗಳು  ಬಾಡಿದ  ಮಾಮರ  ಚಿಗುರೂಡೆಯ 

ಹೇಡಿಗೊ೦ಡವು  ಜಾಣಕ್ಕಿಗಿಳಿ  ಮಾತಾಡದೆ ಕಾಲೆಗುಂದಿದವು  ಕೋಗಿಲೇ 

ಓಡಾಟ  ವೈರವ ಬಿಟ್ಟು  ಖಗಮೃಗ  ಗಾಢ  ನಿದ್ರಾವಶವಾದುವು II ೧ II 

 

ನಾಳಿನ ಚಂಪಕ  ನಾಗ  ಪುನ್ನಾಗ  ಪಾಟಿಲ ಶಾವಂತಿಗೆ  ಕುಂದ ಬಕುಳವು 

ಮಾಲತಿ ಜಾಜಿ ಪರಿಮಳಗ೦ಡಿತು ನೀಲಾ೦ಗನ೦ಘ್ರಗೆ ಎರಗಿದವು 

ದಾಮ ವನಮಾಲಿ ಶೀವತ್ಸ  ಕೌಸ್ತುಭ  ಸ್ವಾಮಿ  ಪುರಂದರ  ವಿಠಲ  ರಾಯನೌ 

ನಾಮ ಕ್ರಿಯೇ  ಮೇಘ ರಂಜಿನಿ  ಪಾಡೇ  ಸಮ ವೇದನಮು ನಮೋ ಎನ್ನೇ II ೨ II 

 

 

ರಂಗನಾಥನ ನೋಡುವ ಬನ್ನಿ

ರಂಗನಾಥನ ನೋಡುವ ಬನ್ನಿ ||ಪ||

ಶ್ರೀರಂಗನ ದಿವ್ಯ ವಿಮಾನದಲ್ಲಿಹನ ||ಅ||

 

ಕಮನೀಯಗಾತ್ರನ ಕರುಣಾಂತರಂಗನ ಕಾಮಿತಾರ್ಥವೀವ ಕಲ್ಪವೃಕ್ಷನ 

ಕಮಲದಳನೇತ್ರನ ಕಸ್ತೂರಿರಂಗನ ಕಾಮಧೇನು ಕಾವೇರಿ ರಂಗನ ||೧||

 

ವಾಸುಕಿ ಶಯನನ ವಾರಿಧಿ ನಿಲಯನ ವಾಸುದೇವ ವಾರಿಜ ನಾಭನ

ವಾಸವಾದಿ ಭಕ್ತ ಹೃದಯಾಂಬುಜದಲ್ಲಿ ವಾಸವಾಗಿರುತಿಹ ವಸುದೇವಸುತನ ||೨||

 

ಮಂಗಳಗಾತ್ರನ ಮಂಜುಳಭಾಷನ ಗಂಗಾಜಲಕ ಅಜಜನಕನ 

ಸಂಗೀತಲೋನನ ಸಾಧುಸಮ್ಮತನ ರಂಗವಿಠಲ ರಾಜೀವನೇತ್ರನ ||೩||

 

ರಂಗನ್ಯಾಕೆ ತಿರುಗಿಬಾರನೆ ಅಂತ

ರಂಗನ್ಯಾಕೆ ತಿರುಗಿಬಾರನೆ ಅಂತ ರಂಗಪೀಠದಿ ಮೊಗದೊರನೆ ||ಪ||

ಮಂಗಳಾಂಗನೊಳು ಮಾತಾಡದೆ ಸತಿ | ಕಂಗಳು ದಣಿಯದೆ ನೋಡಿ ||ಅ ಪ ||

ಅಂಗನೆ ಹ್ಯಾಗೆ ಜೀವಿಸಲಮ್ಮ ಎ| ನ್ನಿಂಗಿತವಾರಿಗುಸುರಲಮ್ಮ ||೧||

 

ಕಲ್ಲೆದೆಯಾದೆ ಇನಿತುದಿನ ಜೀವ |ಕೊಲ್ಲದು ಹೋಯೆಂಬ ರೋದನ |

ಫುಲ್ಲನಾಭನ ಎಂಜಲುಂಡರೆ ಕಷ್ಟ |ವಿಲ್ಲದ ಸುಖ ಕಣ್ಣು ಕಂಡರೆ ||೨||

 

ಕೃಷ್ಣನ ಶುಭಗುಣ ಹೊಗಳುತ ಬಹು | ಕಷ್ಟ ನೀಗಿದೆ ನಕ್ಕು ತತ್ವಶಃ |

ಸೃಷ್ಟೀಶ ಪ್ರಸನ್ನವೆಂಕಟೇಶನ ನೆನೆ | ವಷ್ಟರೊಳಗೆ ಮಾಯವಾದನೆ ||೩||

 

ರಂಗ ಕುಣಿದ ಮುದ್ದು  ರಂಗ ಕುಣಿದ

ರಂಗ ಕುಣಿದ ಮುದ್ದು ರಂಗ ಕುಣಿದ ||ಪ||

 

ರಂಗ ಕುಣಿದ ಗೋಪಿಕಂಗಳ ಮುಂದೆ | 

ಪೊಂಗೆಜ್ಜೆ ರವದೊಳು ಅಂಗಳದೊಳು||೧||

 

ಗೆಳೆಯರೆಂದೆನಿಸುವ ಎಳೆಮಕ್ಕಳೊಡಗೂಡಿ | 

ಬಳಕುತ ಬಾಗುತ ನಲಿದಾಡಿ||೨||

 

ಮೊಳೆವಲ್ಲು ಬಾಯಿಜೊಲ್ಲು ಗಿಳಿಸೊಲ್ಲಿನಿಂದಲಿ|

ಕಳಕಳಿಸಿ ನಕ್ಕು ನಲಿಸಿ ಬಿದ್ದೆದ್ದು||೩||

 

ಸುಳುಗುರುಳು ಪಣೆಯಲಿ ಒಲಿದಾಡಲು |

ಬಲರಾಮ ತಿದ್ದಿದರಳುತ ಅಳುಕುತ ||೪||

 

ಅರಳೆಲೆ ಮಾಗಾಯಿ ಬೆರಳ ರನ್ನುಂಗುರ | 

ಕಿರುಗೆಜ್ಜೆ ಭಾರೆಂದು ತರಳರಿಗಿತ್ತು||೫||

 

ಮಕ್ಕಳ ರತುನ ಶ್ರೀ ಚಿಕ್ಕಕೃಷ್ಣಯ್ಯನು |

ಬೆಕ್ಕಿಗೆ ಬೆದರೈವೆ ಇಕ್ಕದೆ ನೋಡಿ ||೬||

 

ನಗುತತಿ ಮುದ್ದಿಸಿ ಬಿಗಿದಪ್ಪಲೆಶೋದೆಯ | 

ಮಗ ಪ್ರಸನ್ವೆಂಕತೇಶ ಚಿಗಿದುಡಿಯಲ್ಲಿ ||೭||

 

ರಕ್ಷಿಸೆನ್ನನು ದಯಾಂಬುಧೇ 

ರಕ್ಷಿಸೆನ್ನನು ದಯಾಂಬುಧೇ ರಕ್ಷಿಸೆನ್ನನು ||ಪ||

 

ರಕ್ಷಿಸೆನ್ನನು ಪಾಪ ಶಿಕ್ಷಿಸಿ ಕರುಣದಿ | 

ಪಕ್ಷಿವಾಹನ ಪ್ರಿಯ ಅಕ್ಷೋಭ್ಯ ಮುನಿಪ||ಅ||

 

ಅನುಮಾನವಿಲ್ಲದೆ ಮಣಿದ ತಾವಾಂಘ್ರಿಗೆ | 

ಅನಘ ಶ್ರೀ ಮಾಧವ ಮನಿ ಕರಜಾತ ||೧||

 

ಜಯಮುನಿ ವಂದಿತ ಜಯವಂತ ನೀನೆವೆ | 

ದಯ ಮಾದಿದರೆ ದುಹ್ಖ ಬಯಲಾಗರಿಯೆ ||೨||

 

ಪ್ರಾಣೇಶ ವಿಠಲಲ ಧ್ಯಾನದೊಳಗೆ ಮನ | 

ತಾನಿರುವಂದದಿ ಪೋಣಿಸು ಜವದಿ ||೩||

 

ರಂಗಯ್ಯ ರಂಗ ಬಾರೋ

ರಂಗಯ್ಯ ರಂಗ ಬಾರೋ | 

ಬರುತೀಯ ನಮ್ಮನಿಗೆ ಬಾರೋ ||ಪ||

 

ಬಂದರೆ ಬುಗುರೀ ಚಂಡುಗಳನೆ ಕೊಟ್ಟು | 

ಬಗೆ ಬಗೆ ಆಟವ ಕಲಿಸಿ ವಲಿಸುವೇ ||೧||

 

ಬಂದರೆ ರಸಾ ರಸಾಯನನಗಳನಿಣಿಸೀ | 

ಮುಸುಕಿನೊಳಗೆ ಬಚ್ಚಿಟ್ಟುಕೊಂಬೆನು ಬಾರೋ ||೨||

 

ಬಂದರೆ ಶ್ರೀದವಿಠಲ ನಿನಗೇ | 

ಸುಂದರೆ ಸವಿಮಾತಾ ಹೇಳುವರೊಂದು ||೩||

 

ರಘುರಾಮರ ಪಾದವ  ಹಿಡಿ ಹಿಡಿ

ರಘುರಾಮರ ಪಾದವ  ಹಿಡಿ ಹಿಡಿ ||ಪ||

 

ಕಾಮ ಕ್ರೋಧ ಮದ ಮತ್ಸರಗಳೆಂಬೋ | 

ದುರಿತವ ಬ್ಯಾಗನೆ ಹೊಡಿ ಹೊಡೀ||೧||

 

ಹೆಣ್ಣು ಹೊನ್ನು ಮಣ್ಣು ಮೂರರಾಶೆಯ ಮಾಡಿದೆ | 

ಅದರೊಳಗೇನಿದೆ ಹುಡಿ ಹುಡೀ ||೨||

 

ಶಿದವಿಠಲನ ಪಾದಸ್ಮರಣೆಯ |

ಮರೆಯದೆ ಬೇಗನೆ ನುಡಿ ನುಡೀ ||೩||

 

ರಂಗ ಬಾರೋ ರಂಗಯ್ಯ ಬಾರೋ

ರಂಗ ಬಾರೋ ರಂಗಯ್ಯ ಬಾರೋ - ನೀ ||ಪ||

ಬಾರದಿದ್ದರೆ ಎನ್ನ ಪ್ರಾಣ ಉಳಿಯದು ||ಅ||

 

ಅತ್ತಿಗೆ ಮೈದುನ ಬಾರೋ ಅತ್ತೆಯ ಮಗಳ ಗಂಡ | 

ಅತ್ತಿಗೆ ಮೇಲತ್ತಿಗೆ ನಾದಿನಿ ಸೊಸೆಯ ಗಂಡ ||೧||

 

ಮಾವನ ಅಳಿಯನೆ ಬಾರೋ ಮಾವನ ಬೀಗನ ತನುಜ | 

ಮಾವನ ಮಡದಿಯ ಮಗಳ ತಂಗಿಯ ಗಂದ ||೨||

 

ಅಂಬುಧಿ ಶಯನನೆ ಬಾರೋ ಆದಿ ವಸ್ತುವೆ ರಂಗ |

ಕಂಬದೊಳು ನೆಲೆಸಿದ ಆದಿಕೇಶವರಾಯ ||೩||

 

ರಂಗನ ನೋಡಿರೆ ರಾಜಕುವರ

ರಂಗನ ನೋಡಿರೆ ರಾಜಕುವರ ನರ| ಸಿಂಗದೇವ ನಮ್ಮ ದೇವಕಿಸುತನ ||ಪ||

 

ಹಮ್ಮಿನ ತಾಯಿತ ತೋಳ ಬಾಪುರಿಯೋ | ಘಮ್ಮನೆ ಘಲ್ಲೆಂಬ ಗೆಜ್ಜೆಯ ಧ್ವನಿಯೊ |

ಸುಮ್ಮಹಿಮನ ಕಿವಿಯಲ್ಲಿ ಚೌಕುಲಿಯೋ | ತಿಮ್ಮರಾಯನಿಟ್ಟ ಸೊಬಗಿನ ಬಗೆಯೊ||೧||

 

ಶುಕ್ಕರವಾರದ ಪೂಜೆಗೊಂಬುವನ |ಸಕ್ಕರೆ ಪಾಲು ಮೊಸರು ಬೆಣ್ಣೆ ಮೆಲ್ಲುವನ|

ಘಕ್ಕನೆ ಸುರರಿಗೆ ಅಮೃತವನಿತ್ತವನ|ರಕ್ಕಸಕುಲವೈರಿ ರಾವಣಾಂತಕನ||೨||

ಪಾಪವಿನಾಶಿನಿ ಸ್ನಾನವ ಮಾಡಿ|ಪಾಪಗಳೆಲ್ಲವು ಬೇಗ ಬಿಟ್ಟೋಡಿ|

ಈ ಪರಿ ದಿನದಿನ ಮೂರುತಿ ನೋಡಿ| ಶ್ರೀಪತಿ ಪುರಂದರ ವಿಠಲನ ಪಾಡಿ||೩||

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023