ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಶ್ರುತಿ

picture

ಎದೆಗೂಡಿನೊಳಗೊಂದು
ಲಯಭರಿತ ಮಿಡಿತವಿದೆ
ಆತ್ಮವೋ,ಮನವೋ,ಜೀವಭಾವವೋ
ಬಲ್ಲವರಾರು ಅದರ ಹೆಸರು?

ಜಗದ ಹೊಗಳಿಕೆಗೆ ಉಬ್ಬಿ ಉಬ್ಬಿ
ನಿಂದನೆಗೆ ಭಾಗಿ ಕುಸಿದು ತಗ್ಗಿ
ಬಿಸಿ ತಗಲಿದೊಡನೆ ಕರಗಿ ಹರಿದು
ಛಳಿ ತಗಲಿದೊಡನೆ ಸೆಟೆದು ಬಿಗಿದು

ಲೋಕದ ತಾಳಕ್ಕೆ ಕುಣಿ,ಕುಣಿದು ದಣಿದು
ದೊಂಬರಾಟದ ಕಪಿಯಂತೆ ಹಲ್ಕಿರಿದು ಜಿಗಿದು
ಚಿಂತೆಗಳ ಸಂತೆಯಲಿ ದಿಕ್ಕೆಟ್ಟು ಅಲೆದು
ಹಳೆ ಗಾಯ ನೋವುಗಳ ದಿನದಿನವು ಕೆರದು

ದಣಿದು ಸೊರಗಿದೆ ಈ ಮಿಡಿತದ ಲಯವೀಗ
ಬಯಸುತಿದೆ ಶಾಂತಿಯ, ಅಳಿದು ಉದ್ವೇಗ
ಗುರು,ವೈದ್ಯ,ಸಖ ಕೊಟ್ಟ ಮದ್ದು ಕೆಲಸಕ್ಕೆ ಬರದು
ಉಪಶಮನವಡಗಿಹುದು ತಾ ಧ್ಯಾನ ಮಡುವಿನಲ್ಲಿಳಿದು

ಸಮಾಧಾನದ ಸಾಧನಕೆ ನಿರಹಂಕಾರದ ಲೇಪ
ಕರುಣೆ,ತ್ಯಾಗ,ಸಹನೆಗಳ ನಿರ್ವಿಕಾರ ಧೂಪ
ಸ್ವಾರ್ಥವ ಮೀರಿದ ಸ್ನೇಹ ಶ್ರುತಿ ನೇರಿದಾಗ
ಎದೆಬಡಿತವಾಗುವುದು ವಿಶ್ವಗಾನಕೆ ತಂಬೂರಿ


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀಮತಿ. ಅನು ಶಿವರಾಂ

ಕನ್ನಡ ಸಾಹಿತ್ಯದಲ್ಲಿ ಅತ್ಯಾಸಕ್ತಿ ಹೊಂದಿರುವ ಶ್ರೀಮತಿ ಅನು ಸ್ತ್ರೀಹಕ್ಕಿನ ಬಗ್ಗೆ ಹೆಚ್ಚು ಕಾಳಜಿ ಉಳ್ಳವರು. ನಾಟಕಾಭಿನಯ, ನಿರ್ದೇಶನ, ಕಾರ್ಯಕ್ರಮ ನಿರೂಪಣೆ, ಮುಂದಾಳತ್ವ ಮುಂತಾದ ವಿಷಯಗಳಲ್ಲಿ ಎತ್ತಿದಕೈ ಇವರದ್ದು.


ಶ್ರೀಮತಿ. ಅನು ಶಿವರಾಂ ಅವರಿಂದ ಮತ್ತಷ್ಟು ಲೇಖನಗಳು


pictureಸೆರಗು
pictureದಿಟ್ಟೆ
pictureಶ್ರುತಿ
pictureಲಾಲಿ ಹಾಡು

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2026