ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ವೈದ್ಯ-ರೋಗಿ

picture

ರೋಗಿ:ಡಾಕ್ಟ್ರೇ ನನಗೆ ಕ್ಯಾನ್ಸರ್ ಅಂತ ಗ್ಯಾರಂಟಿನಾ? ಯಾಕೇಂದ್ರೆ ನನ್ನ ಗೆಳೆಯನಿಗೆ ಕ್ಯಾನ್ಸರ್ ಅಂತ ಹೇಳಿದ್ರು ಅವನು ಟೀಬಿ ಇಂದ ಸತ್ತ

ಡಾಕ್ಟರ್: ಹೆದರಬೇಡಿ ನೀವು ಕ್ಯಾನ್ಸರ್ನಿಂದಲೇ ಸಾಯ್ತೀರ

****

ಡಾಕ್ಟರ್:ಕುಡಿತ ಆರೋಗ್ಯಕ್ಕೆ ಬಹಳ ಹಾನಿಕರ, ನಿಮ್ಹತ್ರ ಬಹಳ ಮಾತಾಡೋದಿದೆ

ಗುಂಡ:ಸರಿ ಹಾಗಾದ್ರೆ ಸಂಜೆ ಬಾರಲ್ಲಿ ಸಿಕ್ಕೋಣ ಸಾರ್

****

ರೋಗಿ: ಡಾಕ್ಟ್ರೇ ಇದು Operation theatre ಇಲ್ಲೇಕೆ ಹೂವಿನ ಹಾರ ಇದೆ? 

ಡಾಕ್ಟರ್: ಇದು ನನ್ನ ಮೊದಲ ಆಪರೇಶನ್ ,ಸಕ್ಸಸ್ ಆದ್ರೆ ನನಗೆ, ಇಲ್ದಿದ್ದ್ರೆ.........

****

ಡಾಕ್ಟರ್: ಒಂದೇ ಸಲ ನಾಲ್ಕು ಹಲ್ಲು ಏಕೆ ಹೋಯ್ತು? 

ಗುಂಡ: ನನ್ನ ಹೆಂಡತಿ ಚಕ್ಕುಲಿ ಮಾಡಿದ್ಲು..... 

ಡಾಕ್ಟರ್: ಬೇಡಾ ಅನ್ಬೇಕಿತ್ತು ಅಲ್ವಾ? 

ಗುಂಡ:ಆಯ್ಯೋ ತಿಂದಿದ್ದಕ್ಕೆ ಒಂದು ಹೋಯ್ತು,ಬೇಡಾ ಅಂದದ್ದಕ್ಕೆ ಇನ್ನೂ ಮೂರು ಹೋಯ್ತು

****

ಡಾಕ್ಟರ್: ನೋಡು ತಿಮ್ಮ ದಿನಾ ಸ್ವಿಮ್ಮಿಂಗ್ ಮಾಡು ಸ್ಲಿಮ್ ಆಗ್ತೀಯಾ,ಒಳ್ಳೆ excersize ಅದು. 

ತಿಮ್ಮ: ಏ ಸುಮ್ಮೆ ಇರಿ ಡಾಕ್ಟ್ರೇ ತಿಮಿಂಗಲಗಳು ದಿನಾ ಸ್ವಿಮ್ಮಿಂಗ್ ಮಾಡ್ತವೆ ಸಿಮ್ಮಾಗಾ ಇವೆ?

**** 

ರೋಗಿ: ಈ ಅಸ್ತಿಪಂಜರ ಯಾಕೆ ಇಟ್ಕೊಂಡಿದ್ದೀರಾ? 

ಡಾಕ್ಟರ್:ಅದು ನನ್ನ ಮೊದಲ ಗಿರಾಕಿದು,ಅಭಿಮಾನಕ್ಕೆ

****

ಡಾಕ್ಟರ್:ನೀವು ದಿನಾ ಹೋಟೇಲಿನಲ್ಲಿ ಊಟ ಮಾಡೋದ್ರಿಂದ ಈ ಖಾಯಿಲೆ ಬಂದಿದೆ. 

ರೋಗಿ: ಹಾಗಾದ್ರೆ ನಾಳೆಯಿಂದ ಪಾರ್ಸೆಲ್ ಕಟ್ಟಿಸಿಕೊಂದು ಮನೆಲೇ ತಿಂತೀನಿ ಡಾಕ್ಟ್ರೇ

****

ರೋಗಿ:ಡಾಕ್ಟ್ರೇ ನನಗೆ ಮೂರುತಿಂಗಳಿನಿಂದ ಕೆಮ್ಮು..... 

ಡಾಕ್ಟರ್: ಇಷ್ಟು ದಿನಾ ಯಾಕೆ ಸುಮ್ಮನಿದ್ರಿ.... 

ರೋಗಿ:ಇಲ್ಲಾ ಡಾಕ್ಟ್ರೇ ಸುಮ್ಮನೆ ಇರ್ಲಿಲ್ಲ ಕೆಮ್ತಾ ಇದ್ದೆ...

****

ರೋಗಿ:ಆಪರೇಶನ್ ಏನಾದ್ರೂ ಹೆಚ್ಚುಕಮ್ಮಿ ಆಗಿ ನಾನು ಗೊಟಕ್ ಅಂದ್ರೆ ನೀನು ಹ್ಯಾಗಾದ್ರೂ ಮಾಡಿ ಆ ಡಾಕ್ಟ್ರನ್ನೇ ಮದುವೆ ಮಾಡ್ಕೋ

ಹೆಂಡತಿ: ಯಾಕ್ರಿ ಹೀಗಂತೀರಾ, ಚೀ ಬಿಡ್ತು ಅನ್ನಿ

ರೋಗಿ:ಹಾಗಲ್ಲಾ ಕಣೇ ಅವನಿಗೆ ಸೇಡು ತೀರಿಸಿಕೊಳ್ಳೋಕ್ಕೆ ಇದು ಒಂದೇದಾರಿ

****

ಸರ್ಕಾರಿ ನೌಕರ ಡಾಕ್ಟರ್ ಬಳಿ ಹೋಗಿ "ಡಾಕ್ಟರೇ ನನಗೆ ಸಂಪೂರ್ಣ ಸ್ಟ್ರೆಸ್ ಆಗಿ ಹೋಗಿದೆ ಏನಾದರೂ ಸಹಾಯ ಮಾಡಿ"ಎಂದ. ಅದಕ್ಕೆ ವೈದ್ಯ ಆತನ ಎಲ್ಲ ವಿವರ ಕೇಳಿ "ನೀವು ರಜದಲ್ಲಿ ಮನೆಗೆಲಸ ಜಾಸ್ತಿ ಮಾಡಿದ್ದೀರಿ,ನಿಮಗೆ ಪೂರ್ತಿ ವಿಶ್ರಾಂತಿ ಬೇಕಾಗಿದೆ ಆದಷ್ಟು ಬೇಗ ಕೆಲಸಕ್ಕೆ(ಸರ್ಕಾರಿ) ವಾಪಸ್ ಹೋಗಿ ಎಲ್ಲ ಸರಿ ಹೋಗತ್ತೆ" ಅನ್ನಬೇಕೆ

****

ಮಾನಸಿಕ ಚಿಕಿತ್ಸೆ ನೀಡುವ ವೈದ್ಯರ (psychiatrist) ಸೆಕ್ರೆಟರಿ ಕೋಣೆಯೊಳಗೆ ಬಂದು ಹೇಳಿದಳು "ಡಾಕ್ಟ್ರೇ ಹೊರಗೆ ಕಾಯ್ತಾ ಇರೋ ಒಬ್ಬಾತ ತಾನು invisible ಅಂತ ಹೇಳ್ತಿದ್ದಾನೆ" ಅಂದಳು. ಅದಕ್ಕೆ ಡಾಕ್ಟರ್ ಹೊರಕ್ಕೆ ಬಂದು "ಯಾರದು? ಯಾರೂ ಕಾಣ್ತಾ ಇಲ್ಲವಲ್ಲಾ?"ಅಂದ ತಕ್ಷಣ ರೋಗಿ "ನಾನು?"ಅನ್ನಬೇಕೆ. ಆಗ ಡಾಕ್ಟರ್ ಶಾಂತವಾಗಿ "(ಹಂಗೆ) ಬಾ ಒಳಗೆ"

****

ವಿಪರೀತ ಖಾಯಿಲೆಯಾಗಿ ಆಪರೇಶನ್ ಕೋಣೆಯ ಹಾಸಿಗೆಯಲ್ಲಿ ಮಲದಿದ್ದ ಗುಂಡ ಸರ್ಜನ್ ಶಸ್ತ್ರಚಿಕಿತ್ಸೆ ಶುರುಮಾಡಲು ಬಂದಾಗ ”ಡಾಕ್ಟರೇ ಇದಾದ ನಂತರ ನಾನು ಉಳಿಯುವ ಚಾನ್ಸಸ್ ಎಷ್ಟು ಎಂದ”     ಡಾ: ಖಂಡಿತ ನೀವು ಉಳೀತೀರ.     ಗುಂ:ಅದು ಹೇಗೆ ಅಷ್ಟು ಖಂಡಿತವಾಗಿ ಹೇಳ್ತೀರಾ?     ಡಾ:”ಈ ಆಪರೇಶನ್ ನಲ್ಲಿ 10ಕ್ಕೆಒಂದೇ ಸಕ್ಸಸ್ ಆಗೋದು, ನೆನ್ನೆ ತಾನೆ ಒಂಭತ್ತನೆಯವ ಸತ್ತ”

****

ಡಯಟ್ಟು,ವ್ಯಾಯಾಮ ಏನು ಮಾಡಿದರೂ ತೂಕ ಇಳಿಸಲಾರದೆ ಅತಿಯಾದ ಮೈಭಾರವನ್ನೂ ಎತ್ತಲಾರದೆ ಗುಂಡ ಆತ್ಮಹತ್ಯೆಯೇ ಕಡೆಯದಾರಿ ಎಂದು ನಿರ್ಧರಿಸಿ ಎತ್ತರದ ಮಹಡಿಯ ಮೇಲಿಂದ ಧುಮುಕಿದ.ಕಣ್ಣು ಬಿಟ್ಟಾಗ ಡಾಕ್ಟರನ್ನು ಕಂಡು”ನಾನಿನ್ನೂ ಬದುಕಿದ್ದೀನಾ?”ಎಂದ.ಅದಕ್ಕೆ ಡಾಕ್ಟರ್ ”ಹೌದಪ್ಪಾ,ಆದರೆ ನೀನು ಯಾರ ಮೇಲೆ ಬಿದ್ದೆಯೋ ಆ ನಾಲ್ವರೂ ಸತ್ತರು”

****

ಗುಂಡ:ನಾನು ಕಾಫಿ ಕುಡಿಯುವಾಗಲೆಲ್ಲಾ ನನ್ನ ಕಣ್ಣಿಗೆ ಏನೋ ಚುಚ್ಚಿದಹಾಗೆ ನೋವಾಗುತ್ತದೆ" ಡಾಕ್ಟರ್:" ಚಮಚವನ್ನು ತೆಗೆದು ಕುಡಿಯಿರಿ ಎಲ್ಲ ಸರಿ ಹೋಗುತ್ತದೆ"

****

” ರೋಗಿ: ಡಾಕ್ಟರ್ ಡಾಕ್ಟರ್ ನನಗೆ ಎಲ್ಲಾ ಎರಡೆರೆಡು ಕಾಣುತ್ತಿದೆ

ಡಾಕ್ಟರ್: ಹೌದಾ ಎಲ್ಲಿ ಆ ಕುರ್ಚಿಯಲ್ಲು ಕೂತ್ಕೋಳ್ಳಿ

ರೋಗಿ: ಯಾವುದು ಎಡಗಡೆದೋ,ಬಲಗಡೆದೋ.....

****

ರೋಗಿ:ಡಾಕ್ಟರ್ ನನಗೆ ಮಂಡಿ ನೋವಿದೆ

ಡಾಕ್ಟರ್: ಹಾಗಿದ್ದರೆ ನೀವು ದಿನಾ 8 ಕಿ.ಮೀ ದೂರ ನಡೆಯಬೇಕು

ವಾರದಬಳಿಕ ರೋಗಿ ಡಾಕ್ಟರಿಗೆ ಫೋನ್ ಹಚ್ಚಿ:ಡಾಕ್ಟರ್ ಈಗ ನಾನು ರಾಮನಗರದಲ್ಲಿ ಇದ್ದೇನೆ ಇನ್ನೂ ಎಷ್ಟು ದಿನ ಹೀಗೇ ನಡೀಬೇಕು?

****

ರೋಗಿ: ಡಾಕ್ಟರ್ ಎಲ್ಲರೂ ನನ್ನನ್ನು ನಿರ್ಲಕ್ಷ ಮಾಡುತ್ತಾರೆ

ಡಾಕ್ಟರ್:next please

****

ರೋಗಿಯೊಬ್ಬ ಕೆಂಪಗಾದ ಕಿವಿಗಳ ನೋವನ್ನು ತಾಳಲಾರದೆ ಡಾಕ್ಟರ್ ಬಳಿಗೆ ಓಡಿ ಬಂದ.

ಡಾಕ್ಟರ್:ಏನಾಯ್ತಪ್ಪಾ? ಹೇಗಾಯ್ತು?

ರೋಗಿ:ಡಾಕ್ಟರೇ ನಾನು ಐರನ್ ಮಾಡೋವಾಗ ಫೋನ್ ಬಂತು ಫೋನ್ ಬದಲು ಇಸ್ತ್ರಿ ಪೆಟ್ಟಿಗೆ ನನ್ನ ಕಿವಿಗೆ ಒತ್ತಿದೆ.

ಡಾಕ್ಟರ್:ಛೆ ಪಾಪ,ಆದರೆ ಎರಡೂ ಕಿವಿಗೆ ಹೇಗಾಯ್ತು

ರೋಗಿ:ಸ್ವಲ್ಪ ಸಮಯಬಿಟ್ಟು ಆ ಬಡ್ಡಿ ಮಗ ಮತ್ತೆ ಫೋನ್ ಮಾಡ್ದ

****

ರೋಗಿ:ಡಾಕ್ಟರ್ ನನಗೆ ಮರೆವಿನ ರೋಗ ಬಂದಂತಿದೆ

ಡಾಕ್ಟರ್: ಸರಿ ಯಾವಾಗಿನಿಂದ ಬಂದಂತಿದೆ?

ರೋಗಿ: ಯಾವ ರೋಗದ ಬಗ್ಗೆ ಕೇಳಿದಿರಿ ನೀವು?

****

ದಂತ ವೈದ್ಯ:ಏ ಮುಖ ಯಾಕ್ರಿ ಹಾಗೆ ಮಾಡ್ತೀರಿ ನನ್ನಿನ್ನೂ ನಿಮ್ಮನ್ನ ಮುಟ್ಟೇ ಇಲ್ಲ

ರೋಗಿ: ನೀವು ನನ್ನ ಪಾದದ ಮೇಲೆ ಕಾಲು ಇಟ್ಟೀದ್ದೀರ ಸಾರ್

****

ಡಾಕ್ಟರ್ : ಏನ್ರೀ ನಿಶ್ಯಕ್ತಿಗೇ ಅಂತ ಕೊಟ್ಟ ಟಾನಿಕ್ ಎಕೆ ಕುಡೀಲಿಲ್ಲ? 

ರೋಗಿ : ಡಾಕ್ಟರ್ ಕ್ಷಮಿಸಿ ನನ್ನಿಂದ ಅದರ ಮುಚ್ಚಳ ತೆಗೆಯೋಕೇ ಆಗಲಿಲ್ಲ

****

ಆಸ್ಪತ್ರೆಯಲ್ಲಿ ಮಲಗಿದ್ದ ಗುಂಡ ನರ್ಸ್ ನನ್ನು ಕಂಡು ಹೇಳಿದ 'ನೀನು ನನ್ನ ಹೃದಯವನ್ನೇ ಕದ್ದಿರುವೆ'

ನರ್ಸ್: ಅದಕ್ಕೆ ಮೊದಲು ಡಾಕ್ಟ್ರು ನಿನ್ನ ಕಿಡ್ನಿಯನ್ನೇ ಕದ್ದಿದ್ದಾರೆ!

****

ರೋಗಿಯೊಬ್ಬಳು: ಡಾಕ್ಟ್ರೇ, ನೀವು ನನ್ನನ್ನ ಟೆಸ್ಟ್ ಮಾಡುವಾಗ ನಿಮ್ಮ ನರ್ಸನ್ನು ಸ್ವಲ್ಪ ಒಳಗೆ ಕರೀತೀರಾ.

ಡಾಕ್ಟರ್: ಏನಮ್ಮಾ ನನ್ನ ಮೇಲೆ ನಿಮಗೆ ವಿಶ್ವಾಸ ಇಲ್ಲವೇನಮ್ಮ? 

ರೋಗಿ: ನಿಮ್ಮ ಮೇಲೆ ವಿಶ್ವಾಸವಿದೆ, ಆದರೆ ಹೊರಗೆ ಕುಳಿತಿರುವ ನನ್ನ ಗಂಡನ ಮೇಲೆ ಇಲ್ಲ..!

****

ಮೆಡಿಕಲ್ ಕಾಲೇಜುಗಳಲ್ಲಿ ಅದೇನು ಕಲಿಸ್ತಾರೋ ಬಿಡ್ತಾರೋ ಗೊತ್ತಿಲ್ಲ...ಆದರೆ ಎರಡು ವಿಷಯಗಳನ್ನು ಚೆನ್ನಾಗಿ ಕಲಿಸ್ತಾರೆ

1.ಔಷಧಿ ಚೀಟಿಗಳನ್ನು ಯಾರಿಗೂ ಅರ್ಥವಾಗದ ಹಾಗೆ ಗೀಚಿ ಬರೆಯೋದು

2.ಬಿಲ್ಲುಗಳನ್ನು ಮಾತ್ರ ಸ್ಪಷ್ಟವಾಗಿ ಬರೆಯೋದು!

****

ಮೈಕೈಯೆಲ್ಲಾ ಗಾಯವಾಗಿ ಊದಿಕೊಂಡಿದ್ದ ಗುಂಡನನ್ನು ಕಂಡು ಗೆಳೆಯ - 'ಗುಂಡ, ಇದೇನೋ ನಿನ್ನ ಅವಸ್ಥೆ'? 

ಗು೦ಡ: ಏನು ಹೇಳಲಿ, ಔಷಧ ಬದಲಾಗಿ ಹೋಯ್ತು.

ಗೆಳೆಯ : ಔಷಧ ಬದಲಾದರೆ ಹೀಗೆ ಆಗುತ್ತಾ? ಯಾವ ಔಷಧಿ ಅದು?

ಗುಂಡ: ರಾತ್ರಿ ಶಕ್ತಿ ವರ್ಧನೆಗೇಂತ ಡಾಕ್ಟರ್ ನನಗೆ ಔಷಧ ಕೊಟ್ಟಿದ್ರು. ಆದರೆ ಅದನ್ನು ಕುಡಿದದ್ದು ನನ್ನ ಹೆ೦ಡತಿ!!!

****

ಇನ್ಸ್ ಪೆಕ್ಟರ್: ನಿಜ ಹೇಳಿ, ನೀವು ಔಷಧ ಬದಲಾಯಿಸಿ ಇ೦ಜೆಕ್ಷನ್ ಚುಚ್ಚಿದ್ದರಿ೦ದಲೇ ತಾನೇ ಈಗ ರೋಗಿ ಸತ್ತದ್ದು? 

ಡಾಕ್ಟರ್:ಅಲ್ಲಲ್ಲ.ಸಾರ್ ಇ೦ಜೆಕ್ಷನ್ ಸರಿಯಾಗಿತ್ತು. ಬದಲಾದದ್ದು ರೋಗಿ.!!

****

ಗುಂಡಿನಚಟದಿಂದ ತಿಮ್ಮ ಅನಾರೋಗ್ಯ ತಂದುಕೊಂಡ ,ಹೆಂಡ್ತಿ ಮಕ್ಕಳು ಬೈದು "ಹೋಗಿ ಡಾಕ್ಟ್ರನ್ನ ಕಾಣ್ರೀ,ನೀವು ಕುಡೀರಿ ಆದ್ರೆ ಡಾಕ್ಟರ್ ಎಷ್ಟು ದಿನಕ್ಕೊಮ್ಮೆ ಕುಡೀ ಅಂತಾರೋ ಅಷ್ಟುಮಾತ್ರ ಕುಡೀರಿ" ಅಂದ್ರು.

ಅಪ್ಪಣೆಯಂತೆ ತಿಮ್ಮ ಡಾಕ್ಟರನ್ನ ಕಂಡು ಬಂದ ,ಮನೆಯವರೆಲ್ಲಾ ಕುತೂಹಲದಿಂದ ಕೇಳಿದರು "ಎಷ್ಟು ದಿನಕ್ಕೊಮ್ಮೆ ಕುಡೀಬೋದು ಅಂದ್ರು?"

ಅದಕ್ಕೆತಿಮ್ಮ"ಅದೆಲ್ಲಾ ಇರಲಿ ವಾರಕ್ಕೆ ಅದೆಷ್ಟು ತಿಂಗಳುಬರ್ತವೆಳ? "ಅನ್ನಬೇಕೇ

****

"ಏಯ್ ನೀನು ರಾಮಣ್ಣನವರ ಮಗ ಸೀನ ಅಲ್ವಾ,ಇದೇನೋ ಬಸ್ ಸ್ಟಾಪ್ ನಲ್ಲಿ ಆಸ್ಪತ್ರೆ ಡ್ರೆಸ್ ನಲ್ಲಿ? ನಿಂಗೆ ಹೃದಯ ಚಿಕಿತ್ಸ್ತೆ ಇತ್ತಲ್ವಾ ಇವತ್ತು?"

"ಅಯ್ಯೋ ಬಿಡಿಸಾರ್ ಬಟ್ಟೆ ಗಿಟ್ಟೆ ಎಲ್ಲಾ ಕಳ್ಚಿ ಈವೇಶ ಹಾಕ್ಬಿಟ್ಟು ದರದರ ಅಂತ ಶ್ರೆಚ್ಚರ್ ನಲ್ಲಿ ಎಳ್ಕೊಂಡ್ ಹೋಗ್ಬಿಡೋದಾ..... ಆಮೇಲೆ ಕತ್ತಲೆ ರೂಂನಲ್ಲಿ ಬಾಗಿಲು ಹಾಕಿ ಪಟಪಟ ಅಂತ ಮುಖಕ್ಕೆ ಲೈಟ್ ಹಾಕೋದಾ...

ಕತ್ತರಿ,ಚಾಕೂ,ದಪ್ಪ ಸೂಜೀ ಯಪ್ಪ....ಆಮೇಲೆ ಎಲ್ಲಾ ನರ್ಸ್ ಗಳು ಕೇಳ್ತಾರೆ- ಫಸ್ಟ್ ಆಪರೇಶನ್ನಾ? 

ಹೆದರಬೇಡಿ ಏನೂ ಆಗಲ್ಲಾ ,ಹಾರ್ಟ್ ಆಪರೇಶನ್ ತುಂಬಾ ಸಿಂಪಲ್ಲು ..ಅಂತ"

"ಅಯ್ಯೋ ಅಷ್ಟಕ್ಕೇ ಹೆದರಿ ಓಡಿಬಂದ್ಯಾ?"..." ಅಯ್ಯೋ ಹಂಗದಿದ್ದು ನನಗಲ್ಲ ಹೊಸಾ ಡಾಕ್ಟರ್ ಗೆ"

****

ತಿಮ್ಮಡಾಕ್ಟರ್ ಬಳಿಗೆ ಓಡೋಡಿ ಬಂದ" ಡಾಕ್ಟರೇ ನಾನು ಪತ್ರ ಬರೆಯೋವಾಗ ನನ್ನ ಮಗ .... ನನ್ನ ಮಗ.....ಇಂಕ್ ಬಾಟಲ್ ಇಟ್ಟಿದ್ರೆ ಎತ್ಕೊಂಡ್ ಗಟ ಗಟ ಅಂತ ಕುಡುದ್ಬುಟ್ಟಾ ಡಾಕ್ಟ್ರೇ,,ಏನ್ ಮಾಡ್ಲೀ ಡಾಕ್ಟ್ರೇ ಬೇಗ ಬನ್ನೀ ಡಾಕ್ಟ್ರೇ "ಎಂದು ಗೋಗರೆದ.

****

ಆ ಡಾಕ್ಟರೋ ಬಹಳ ಬಿಜಿ, "ನೋಡಪ್ಪಾ ತಿಮ್ಮ ಇಲ್ಲಿ ತುಂಬಾ ಜನ ಇದ್ದಾರೇ ನಾನು ಇನ್ನು ಹತ್ತು-ಹದಿನೈದು ನಿಮಿಶದಲ್ಲಿ ಅಲ್ಲಿರ್ತೀನಿ ಅಲ್ಲೀವರೆಗೂ ನೀನು,,,,,,"ತಿಮ್ಮ ತಕ್ಷಣ ಹೇಳಿದ”ಅಲ್ಲೀವರೆಗೂ ಏನ್ ಮಾಡೋದ್ ಡಾಕ್ಟ್ರೇ, ಪೆನ್ಸಿಲ್ ನಲ್ಲೇ ಬರೀತಿರ್ತೀನಿ"

****

ಖಾಯಿಲೆ ಬಂದಾಗ ಆಸ್ಪತ್ರೆಗೆ ಹೋಗಬೇಕು, ಏಕೆ? ಆಸ್ಪತ್ರೆ ನಡೆಸೋರು ಬದುಕಬೇಡವೇ? ಡಾಕ್ಟರನ್ನೂ ಕಾಣಬೇಕು, ಗೀಚಿದ್ದನ್ನ ಇಸ್ಕೋಡ್ ಬರಬೇಕು,ಏಕೆ? ಡಾಕ್ಟರ್ ಬದುಕಬೇಡವೇ? ಡಾಕ್ಟರ್ ಬರೆದುಕೊಟ್ಟ ಔಷಧಿ/ಮಾತ್ರೆ ಎಲ್ಲಾ ಅಂಗಡೀಲಿ ತಗೋಬೇಕು,ಏಕೆ? ಅಂಗಡಿ ನಡೆಸೋರು ಬದುಕಬೇಡವೇ? ಆಮೇಲೆ ತಂದ ಔಷಧಿ/ಮಾತ್ರೆ ಎಲ್ಲಾ ಬಚ್ಚಲಲ್ಲಿ ಸುರೀಬೇಕು,ಏಕೆ? ನೀವ್ ಬದುಕಬೇಡವೇ?

****

ವೈದ್ಯ: ಇವೆಲ್ಲಾ ತಿಂದ್ರೆ ಡಯಟ್ಟೂ ಅಲ್ಲ ಮೈ ತೂಕಾನೂ ಇಳಿಯಲ್ಲ. ಇನ್ಮೇಲೆ ಬರೀ ಚಪಾತಿ, ತರಕಾರಿ, ಹಣ್ಣು, ಸ್ಕಿಮ್ ಮಿಲ್ಕ್, ಸಕ್ಕರೆ ಇಲ್ಲದ ಸ್ವೀಟ್ಸ್!!! ತಿನ್ಬೇಕು ತಿಳೀತಾ? ರೋಗಿ: ಹೂ ಡಾಕ್ಟರ್, ಅದ್ಸರೀ ಇದೆಲ್ಲಾ ಊಟಕ್ಕೆ ಮೊದಲು ತಿನ್ಬೇಕಾ ಅಥವಾ ಆಮೇಲೋ?*!*?!  

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022