ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ತೆಂಗಿನ ಕಾಯಿ ಹಾಲಿನ ಭಾತ್

ಬೇಕಾಗುವ ಸಾಮಗ್ರಿಗಳು

  • ಅಕ್ಕಿ1ಪಾವು
  • ತೆಂಗಿನಕಾಯಿ 1(ಅಥವಾ 1ಟಿನ್ coconut cream)
  • ಮೆಣಸಿನಪುಡಿ 2ಚಮಚ
  • ಗೋಡಂಬಿ 100ಗ್ರಾಂ
  • ಒಣದ್ರಾಕ್ಷಿ 100ಗ್ರಾಂ
  • ಉಪ್ಪು 1-2 ಚಮಚ
  • ತುಪ್ಪ 2ಚಮಚ
  • ಒಗ್ಗರಣೆಗೆ-ಎಣ್ಣೆ 40ಗ್ರಾಂ,ಅರಿಶಿನ 1ಚಿಟಿಕೆ,ಇಂಗು 1ಚಿಟಿಕೆ, ಸಾಸಿವೆ 1ಚಮಚ,ಕರಿಬೇವು 2ಎಳಸು
  • ಕೊತ್ತಂಬರಿ ಸೊಪ್ಪು 1ಕಂತೆ

ಮಾಡುವ ವಿಧಾನ

  • ಅಕ್ಕಿಯನ್ನು ತೊಳೆದು ಉದುರುದುರಾಗಿ (ತುಪ್ಪ ಬೆರೆಸಿ) ಅನ್ನ ಮಾಡಿಕೊಳ್ಳಿ, ತಣ್ಣಗಾಗಲು ಬಿಡಿ
  • ತೆಂಗಿನ ಕಾಯನ್ನು ತುರಿದು ರುಬ್ಬಿ ಹಾಲನ್ನು ತೆಗೆದುಕೊಳ್ಳಿ
  • ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ಒಗ್ಗರಣೆ ಮಾಡಿಕೊಳ್ಳಿ
  • ನಂತರ ಅದಕ್ಕೆ ಗೋಡಂಬಿ ದ್ರಾಕ್ಷಿ ಹಾಲು ಹಾಕಿ ಎರಡು ನಿಮಿಷ ಕುದಿಸಿ
  • ಅನ್ನವನ್ನು ಬಾಣಲೆಗೆ ಹಾಕಿ,ಮೆಣಸಿನಪುಡಿ ಬೆರೆಸಿ, ಮೊಗಚುವ ಕೈಯಿಂದ ಐದು ನಿಮಿಷ ಬಾಡಿಸಿ ಒಲೆ ಆರಿಸಿ ಮುಚ್ಚಿಡಿ
  • ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸಿಂಪಡಿಸಿ ಉಣಬಡಿಸಿ

ಮತ್ತಷ್ಟು ಪಾಕವಿಧಾನಗಳು


ಪಲಾವ್ ಮತ್ತು ಭಾತ್ ಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ಮಸಾಲೆ ಮಾವಿನ ಭಾತ್
ಗಾರ್ಡನ್ ರೈಸ್ ಭಾತ್
ರಾಜ್ಮಾ ರೈಸ್ ಭಾತ್
ಹಾಗಲ ಕಾಯಿ ಭಾತ್
ಖಾಂದಾ ಭಾತ್
 
 

© ಹಕ್ಕುಸ್ವಾಮ್ಯ 2008 - 2025