ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ವೆಜಿಟೆಬಲ್ ಬಿರಿಯಾನಿ
ಬೇಕಾಗುವ ಸಾಮಗ್ರಿಗಳು
ಅಕ್ಕಿ2ಪಾವು
ಈರುಳ್ಳಿ4
ಆಲೂಗಡ್ಡೆ 3
ಹಸಿ ಬಟಾಣಿ 1 ಬಟ್ಟಲು
ಕ್ಯಾರೆಟ್ 100ಗ್ರಾಂ
ಹುರಳಿ ಕಾಯಿ100 ಗ್ರಾಂ
ಹೂಕೋಸು 100ಗ್ರಾಂ
ಟೊಮೋಟೊ 3
ಒಣ ದ್ರಾಕ್ಷಿ ಹತ್ತು
ಗೋಡಂಬಿ ಹತ್ತು
ಜೀರಿಗೆ 1ಚಮಚ
ಲವಂಗ 2
ಏಲಕ್ಕಿ 4
ತುಪ್ಪ 100 ಗ್ರಾಂ
ಉಪ್ಪು 2ಚಮಚ
ಮೆಣಸು ಕಾಳು ಅರ್ಧ ಚಮಚ
ಮಸಾಲೆಗೆ:ಬೆಳ್ಳುಳ್ಳಿ4ಎಳಸು,ಈರುಳ್ಳಿ1,ಶುಂಟಿ 2ಗೋಲಿ ಗಾತ್ರ,ಜೀರಿಗೆ 2 ಚಮಚ,ಒಣ ಮೆಣಸಿನ ಕಾಯಿ 4,ಕೊತ್ತಂಬರಿ ಸೊಪ್ಪು ಅರ್ಧ ಕಂತೆ
ಮಾಡುವ ವಿಧಾನ
ಮೊದಲುಮಸಾಲೆ ಸಾಮಗ್ರಿಗಳನ್ನು ರುಬ್ಬಿಕೊಳ್ಳಿ
ಈರುಳ್ಳೀಯನ್ನು ಸಣ್ಣದಾಗಿ,ತೆಳ್ಳಗೆ ಸೀಳಿಡಿ, ಆಲೂಗಡ್ಡೇಯನ್ನು ಹೋಳು ಮಾಡಿಡಿ
ತುಪ್ಪವನ್ನು ದಪ್ಪ ತಳದ ಪಾತ್ರೆಗೆ ಹಾಕಿ,ತುಪ್ಪ ಕಾದ ಮೇಲೆ ಲವಂಗ,ಏಲಕ್ಕಿ,ಮೆಣಸು ಕಾಳು ಸೇರಿಸಿ ಒಗ್ಗರಣೆ ಹಾಕಿ
ನಂತರ ಹೆಚ್ಚಿದ ಈರುಳ್ಳಿಯನ್ನು ಹಾಕಿ ಕೆಂಪಗೆ ಹುರಿಯಿರಿ
ಐದು ನಿಮಿಷದ ನಂತರ ಹೆಚ್ಚಿದ ಟೊಮೋಟೊ,ತೊಳೆದ ಅಕ್ಕಿ,ಎರಡು ಲೋಟ ನೀರು,ರುಬ್ಬಿದ ಮಸಾಲೆ,ತರಕಾರಿಗಳನ್ನು ಹಾಕಿ ಬೇಯಿಸಿ
ಅನ್ನ ಬೆಂದ ತಕ್ಷಣ ಗೋಡಂಬಿ ದ್ರಾಕ್ಷಿ ಸ್ವಲ್ಪ ತುಪ್ಪದಲ್ಲಿ ಹುರಿದು ಅಲಂಕರಿಸಿ ಬಿಸಿಯಲ್ಲೇ ಬಡಿಸಿ
ಮತ್ತಷ್ಟು ಪಾಕವಿಧಾನಗಳು
ಪಲಾವ್ ಮತ್ತು ಭಾತ್ ಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಚಿಸ್ ಪಲಾವ್
ದಿಲ್ ಕುಶ್ ಪಲಾವ್
ತೆಂಗಿನ ಕಾಯಿ ಹಾಲಿನ ಭಾತ್
ಧಿಡೀರ್ ರೈಸ್ ಭಾತ್
ಮೊಳಕೆ ಮೆಂತ್ಯದ ಭಾತ್