ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಅಮೃತ ಪಾನಕ

ಬೇಕಾಗುವ ಸಾಮಗ್ರಿಗಳು

  • ಕಳತಾದ ಹುಣಸೇ ಹಣ್ಣು ಒಂದು ನಿಂಬೇ ಗಾತ್ರ
  • ಕರಿ ಮೆಣಸಿನ ಪುಡಿ ಚಿಟಿಕೆ
  • ಬೆಲ್ಲ (ಸಿಹಿಗೆ) ನಾಲ್ಕು ಚಮಚ
  • ಉಪ್ಪು ಚಿಟಿಕೆ

ಮಾಡುವ ವಿಧಾನ

  • ಹುಣಸೇಹಣ್ಣನ್ನು ಐದು ನಿಮಿಷ ನೀರಿನಲ್ಲಿಟ್ಟು ಅನಂತರ ಕಿವುಚಿ ಚರಟ ಎಸೆಯಿರಿ.
  • ಎರಡು ಮೂರು ಲೋಟ ಪ್ರಮಾಣದಷ್ಟು ನೀರಿಗೆ ಹುಳಿ ಸೇರಿಸಿ
  • ಬೆಲ್ಲ,ಉಪ್ಪು ಸೇರಿಸಿ ಕದಡಿರಿ.

**ಶೀತ ಪ್ರಕೃತಿಯ ಖಾರ ಪ್ರಿಯರಿಗೆ ತುಸು ಕರಿಮೆಣಸಿನ ಪುಡಿ ಬೆರೆಸಿ ಕೊಡಿ.

**ಪಿತ್ತಹರವಾದ ಈ ಪಾನಕ,ಪಿತ್ತದ ವಾತಿಗೂ ಉಪಶಮನ ಕೊಡುತ್ತದೆ.

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ಪಾನಕ ವಿಭಾಗದ ಮತ್ತಷ್ಟು ಪಾಕವಿಧಾನಗಳು

ಸೌತೇಕಾಯಿ ತಿರುಳಿನ ಪಾನಕ
ಶುಂಠಿಯ ಗರಂ ಪಾನಕ
ಹೆಸರು ಬೇಳೆ ಪಾನಕ
ಹೆಸರು ಕಾಳು ಪಾನಕ
ಗಸಗಸೆ ಪಾನಕ
 
 

© ಹಕ್ಕುಸ್ವಾಮ್ಯ 2008 - 2023