ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಗಾರ್ಡನ್ ರೈಸ್ ಭಾತ್
ಬೇಕಾಗುವ ಸಾಮಗ್ರಿಗಳು
ಎಣ್ಣೆ ಒಂದು ಸೌಟು
ಶುಂಟಿ ಬೆಳ್ಳುಳ್ಳಿ(ಪೇಸ್ಟ್) 1 ಚಮಚ
ಚಿಲ್ಲಿ ಸಾಸ್/ಹ.ಮೆಣಸಿನ ಕಾಯಿ ಪೇಸ್ಟ್ 3 ಚಮಚ
ದೊ.ಮೆಣಸಿನಕಾಯಿ,ಈರುಳ್ಳಿ,ಎಲೆಕೋಸು,ಆಲೂಗಡ್ಡೆ,ಕ್ಯಾರೆಟ್,ಹುರಳೀಕಾಯಿ (ಪ್ರತಿಯೊಂದೂ ತೆಳ್ಳಗೆ ಉದ್ದಕ್ಕೆ ಸೀಳಿದ್ದು ಕಾಲು ಲೋಟಗಳು)
ಹಸಿಬಟಾಣಿ ಕಾಲು ಲೋಟ
ಸೋಯಾ ಮತ್ತು ಟೊಮಾಟೋ ಸಾಸ್ ಎರಡು ಚಮಚ
ಬಾಸುಮತಿಅನ್ನ ಒಂದು ಲೋಟ ಅಕ್ಕಿಯದು
ಉಪ್ಪು ನಿಂಬೆರಸ ಕೊತ್ತಂಬರಿ ರುಚಿಗೆತಕ್ಕಷ್ಟು
ಮಾಡುವ ವಿಧಾನ
ಬಾಣಲೆಯಲ್ಲಿ ಕಾದ ಎಣ್ಣೆಗೆ ಶುಂಟಿ ಬೆಳ್ಳುಳ್ಳಿ,ಹ.ಮೆಣಸಿನ ಕಾಯಿ ಪೇಸ್ಟ್ ಹಾಕಿ ಒಂದು ನಿಮಿಷ ಬಾಡಿಸಿ
ದೊ.ಮೆಣಸಿನಕಾಯಿ,ಈರುಳ್ಳಿ,ಎಲೆಕೋಸು,ಆಲೂಗಡ್ಡೆ,ಕ್ಯಾರೆಟ್,ಹುರಳೀಕಾಯಿ,ಹಸಿಬಟಾಣಿ,ಸೋಯಾ ಮತ್ತು ಟೊಮಾಟೋ ಸಾಸ್ ಹಾಕಿ ಮೂರು ನಾಲ್ಕು ನಿಮಿಷ ಬಾಡಿಸಿ
ಹರವಿದ ಬಾಸುಮತಿ ಅನ್ನಕ್ಕೆ ಕಲಸಿ, ತಿನ್ನಲು ಬಡಿಸಿ
ಮತ್ತಷ್ಟು ಪಾಕವಿಧಾನಗಳು
ಪಲಾವ್ ಮತ್ತು ಭಾತ್ ಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಚಿಸ್ ಪಲಾವ್
ವೆಜಿಟೆಬಲ್ ಬಿರಿಯಾನಿ
ದಿಲ್ ಕುಶ್ ಪಲಾವ್
ತೆಂಗಿನ ಕಾಯಿ ಹಾಲಿನ ಭಾತ್
ಧಿಡೀರ್ ರೈಸ್ ಭಾತ್