ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಮಸಾಲೆ ಮಾವಿನ ಭಾತ್

ಬೇಕಾಗುವ ಸಾಮಗ್ರಿಗಳು

  • ರುಬ್ಬಲಿಕ್ಕೆ-ಸಾಸಿವೆ 1 ಚಮಚ,ಜೀರಿಗೆ 1 ಚಮಚ,ಕಾಯಿತುರಿ ಅರ್ಧ ಲೋಟ,ಒನ ಮೆಣಸಿನಕಾಯಿ 8-10,ಉಪ್ಪು ರುಚಿಗೆ,ಅರಿಸಿನ ಅರ್ಧ ಚಮಚ,ಮಾವಿನತುರಿ ಮುಕ್ಕಾಲು ಲೋಟ,ಇಂಗು 1 ಚಿಟಿಕೆ
  • ಇತರೆ:ಎಣ್ಣೆ ಅರ್ಧ ಸೌಟು,ಜೀರಿಗೆ, ಮೆಂತ್ಯಕಾಳು, ಅರಿಸಿನ ಪ್ರತಿಯೊಂದೂ ಅರ್ಧ ಚಮಚ,ಕಡ್ಲೇ ಬೇಳೆ ಉದ್ದು ಎರಡು ಚಮಚ, ಕರಿಬೇವು ಸ್ವಲ್ಪ ಒಣಮೆಣಸಿನ ಕಾಯಿ ಎರಡು, ಕೊತ್ತಂಬರಿ ಅರ್ಧಕಂತೆ,ಅನ್ನ ಒಂದು ಲೋಟ ಅಕ್ಕಿಯದು

ಮಾಡುವ ವಿಧಾನ

  • ರುಬ್ಬಲು ಹೇಳಿರುವ ಪದಾರ್ಥಗಳನ್ನು ಸೇರಿಸಿ ತರಿತರಿಯಾಗಿ ಪುಡಿಮಾಡಿ ಅಥವಾ ಗಟ್ಟಿಯಾಗಿ ರುಬ್ಬಿಕೊಳ್ಳಿ
  • ಬಾಣಲೆಯಲ್ಲಿ ಎಣ್ಣೆಗೆ, ಜೀರಿಗೆ,ಮೆಂತ್ಯಕಾಳು,ಕಡ್ಲೇ ಬೇಳೆ ಉದ್ದು ಹಾಕಿ ಬಾಡಿಸಿ
  • ಕೆಂಪಗಾದ ಮೇಲೆ ಅರಿಸಿನ,ಕರಿಬೇವು,ಒಣಮೆಣಸಿನ ಕಾಯಿ ಚೂರು, ನಂತರ ರುಬ್ಬಿದ ಮಿಶ್ರಣ ಹಾಕಿ ಬಾಡಿಸಿ,ಇಳಿಸಿ
  • ಅದನ್ನು ಅನ್ನಕ್ಕೆ ಕೊತ್ತಂಬರಿ ಚೂರುಮಾಡಿ ಸೇರಿಸಿ ಕಲಸಿ

ಮತ್ತಷ್ಟು ಪಾಕವಿಧಾನಗಳು


ಪಲಾವ್ ಮತ್ತು ಭಾತ್ ಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ಗಾರ್ಡನ್ ರೈಸ್ ಭಾತ್
ರಾಜ್ಮಾ ರೈಸ್ ಭಾತ್
ಹಾಗಲ ಕಾಯಿ ಭಾತ್
ಖಾಂದಾ ಭಾತ್
ಟೊಮೊಟೋ ಬೆಳ್ಳುಳ್ಳಿ ಭಾತ್
 
 

© ಹಕ್ಕುಸ್ವಾಮ್ಯ 2008 - 2026