ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ತೆಂಗಿನ ಕಾಯಿ ಹೋಳಿಗೆ
ಬೇಕಾಗುವ ಸಾಮಗ್ರಿಗಳು
ಒಂದು ತೆಂಗಿನ ಕಾಯಿ
ಒಣ ಕೊಬ್ಬರಿ ಒಂದು ಲೋಟ
ಗೋಧಿ ಹಿಟ್ಟು ಅರ್ಧ ಲೋಟ
ಮೈದಾ ಹಿಟ್ಟು ಅರ್ಧ ಕಿಲೋ
ಯಾಲಕ್ಕಿ 8
ಗಸಗಸೆ 50 ಗ್ರಾಂ
ಎಣ್ಣೆ/ತುಪ್ಪ ಕಾಲು ಕಿಲೋ
ಮಾಡುವ ವಿಧಾನ
ಕಾಯಿ ತುರಿಯನ್ನು ನೀರಿಲ್ಲದೇ ರುಬ್ಬಿ ಬೆಲ್ಲ ಸೇರಿಸಿ ಬಾಣಲೆಯಲ್ಲಿ ಬಾಡಿಸಿ
ಏಲಕ್ಕಿ ಪುಡಿ, ಒಣಕೊಬ್ಬರಿ ಬೆರೆಸಿ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ
ಮೈದಾ ಮತ್ತು ಗೋಧಿ ಹಿಟ್ಟನ್ನು 4/6 ಚಮಚ ಎಣ್ಣೆ ಹಾಕಿ ಹದವಾಗಿ ಕಲಸಿಕೊಳ್ಳಿ
ಹಿಟ್ಟನ್ನು ನಿಂಬೆ ಗಾತ್ರದಲ್ಲಿ ತೆಗೆದು ಬಟ್ಟಲಿನಂತೆ ಹಳ್ಳಮಾಡಿ ಹೂರಣ ತುಂಬಿ ಅದೇ ಹಿಟ್ಟಿನಿಂದ ಮುಚ್ಚಿ ಲಟ್ಟಿಸಿ
ಕಾದ ಕಾವಲಿಯ ಮೇಲೆ ತುಪ್ಪ ಬಳಸಿ ಸುಡುವುದು
ಬಿಸಿಬಿಸಿ ಇದ್ದಾಗಲೇ ಹಾಲು ತುಪ್ಪದೊಡನೆ ತಿನ್ನಲು ಕೊಡಿ
ಮತ್ತಷ್ಟು ಪಾಕವಿಧಾನಗಳು
ಸಿಹಿತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಬೂದಕುಂಬಳಕಾಯಿ ಹಲ್ವ(ಮೊರಬ್ಬ)
ಗೋಡಂಬಿ ಟಾಫಿ
ರವೆ ಬರ್ಫಿ
ಪಂಚಕಜ್ಜಾಯ
ಶ್ರೀಖಂಡ