ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಬಾಳೆ ಬಿಸ್ಕತ್ತು

ಬೇಕಾಗುವ ಸಾಮಗ್ರಿಗಳು

  • ಸಕ್ಕರೆ ಪುಡಿ 175 ಗ್ರಾಂ
  • ಗೋಡಂಬಿ 25 ಗ್ರಾಂ
  • ಮೈದಾ ಹಿಟ್ಟು 250 ಗ್ರಾಂ
  • ಬೆಣ್ಣೆ 150 ಗ್ರಾಂ
  • ಹಾಲಿನ ಪುಡಿ 40 ಗ್ರಾಂ
  • ಒಂದು ದೊಡ್ಡ ಬಾಳೆಹಣ್ಣು 50 ಗ್ರಾಂ
  • ಬೇಕಿಂಗ್ ಪುಡಿ ಅರ್ಧ ಚಮಚ
  • ಚಿಟಿಕೆ ನಿಂಬೆ ಹಳದಿ ಬಣ್ಣ
  • ಕಲೆಸಲು ಸ್ವಲ್ಪ ಹಾಲು

ಮಾಡುವ ವಿಧಾನ

  • ಗೋಡಂಬಿ ಅರ್ಧ ಹೋಳು ಮಾಡಿ ಒಂದು ಘಂಟೆ ನೀರಿನಲ್ಲಿ ನೆನೆಸಿ,ನೀರು ಸೋಸಿಡಿ
  • ಸಕ್ಕರೆಪುಡಿ, ಬೆಣ್ಣೆ ಹಗುರವಾಗಿ ಕಲಸಿ
  • ಮೈದಾ, ಹಾಲಿನ ಪುಡಿ, ಹಾಲು, ಬಾಳೆ ಹಣ್ಣು, ಮತ್ತು ಬೇಕಿಂಗ್ ಪೌಡರ್ ಚೆನ್ನಾಗಿ ಕಲಸಿ
  • ಆ ಹಿಟ್ಟನ್ನು ಬೆರಳು ಗಾತ್ರ ಅಥವಾ ತೆಳ್ಳಗೆ ಒತ್ತಿ, ಬಿಸ್ಕತ್ ಆಕಾರಕ್ಕೆ ಬಿಲ್ಲೆಗಳಾಗಿ ಕತ್ತರಿಸಿ
  • ಎಣ್ಣೆ ಸವರಿದ ಬೇಕಿಂಗ್ ಕಾಗದದ ಮೇಲೆ ಅಂತರದಲ್ಲಿ ಪಕ್ಕ ಪಕ್ಕ ಇಡಿ
  • ಅವುಗಳ ಮಧ್ಯಕ್ಕೆ ಒಂದೊಂದು ತುಂಡು ಗೋಡಂಬಿ ಒತ್ತಿಡಿ
  • ಓವನ್ ನಲ್ಲಿ 10 ನಿಮಿಷ 160 ಡಿಗ್ರಿ ಶಾಖದಲ್ಲಿ ಬೇಯಿಸಿ

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ಗಾರಿಗೆ ವಿಭಾಗದ ಮತ್ತಷ್ಟು ಪಾಕವಿಧಾನಗಳು

ಗೋಡಂಬಿ ಬಿಸ್ಕತ್ತು
ಹಣ್ಣಿನ ಬಿಸ್ಕತ್ತು
ಮಸಾಲೆ ಬಿಸ್ಕತ್ತು
ಉಪ್ಪಿನ ಬಿಸ್ಕತ್ತು
ಕೊಬ್ಬರಿ ಕುಕ್ಕೀಸ್
 
 

© ಹಕ್ಕುಸ್ವಾಮ್ಯ 2008 - 2025