ಆನೆಯ ತೂಕ

ಹಿಂದೆ ಲಂಡನ್ನಿನಲ್ಲಿ ಪೀಟರ್ ಎಂಬುವವನಿದ್ದ. ಆತ ಮಹಾ ಬುದ್ಧಿವಂತ. ಆದರೆ ಆ ಬುದ್ಧಿ ತುಂಬಾ ವಿಚಿತ್ರವಾಗಿತ್ತು. ಚಿಟ್ಟೆಗಳನ್ನು ಹಿಡಿಯುವುದು, ಅವುಗಳ ರೆಕ್ಕೆ ಪುಕ್ಕಗಳನ್ನು ಕೀಳುವುದು ಎಂದರೆ ಅವನಿಗೆ ಬಹಳ ಇಷ್ಟ. ಗಿಡಗಳನ್ನು ಕಿತ್ತುನೋಡುವುದು, ಮುರಿಯುವುದು, ಇತ್ಯಾದಿ ಅವನಿಗೆ ಹವ್ಯಾಸಗಳು.
ಅದೇ ಲಂಡನ್ನಿನ ಒಂದು ಚಿಕ್ಕ ತೋಟದಲ್ಲಿ ಒಬ್ಬ ಕವಿ ಇದ್ದನು. ಅವನಿಗೆ ಚಿಟ್ಟೆ, ಗಿಡ, ಮರ ಎಂದರೆ ತುಂಬಾ ಪ್ರೀತಿ. ಒಂದು ದಿನ ಪೀಟರ್ ಕವಿಯ ಹತ್ತಿರ ಬಂದು, "ಆನೆಯನ್ನು ತೂಕ ಮಾಡಿ ನೋಡೋಣವಾ?" ಎಂದು ಕೇಳಿದ. ಮಾಡೋಣ ಆದರೆ ಆನೆ ತೂಕ ಮಾಡುವಷ್ಟು ದೊಡ್ಡ ತಕ್ಕಡಿ ಬೇಕಲ್ಲಾ" ಎಂದನು ಕವಿ. ಸುಲಭ ಆನೆಯನ್ನು ಕುಯ್ದು ಚೂರು ಚೂರು ಮಾಡಿ ಆ ಚೂರುಗಳನ್ನೆಲ್ಲಾ ತಕ್ಕಡಿಯಲ್ಲಿ ತೂಗಿ, ಕೊನೆಗೆ ಎಲ್ಲವನ್ನೂ ಕೂಡಿದರೆ ಆನೆ ತೂಕ ಸಿಗುತ್ತೆ" ಎಂದ ಬೇಕನ್.ಆನೆ ಕುಯ್ಯುವುದು ನನಗೆ ಇಷ್ಟವಿಲ್ಲ ಆದರೆ ಆನೆಯನ್ನು ಒಂದು ಮಾತು ಕೇಳೋಣ ಎಂದನು ಕವಿ. ಇಬ್ಬರೂ ಆನೆಯ ಹತ್ತಿರ ಬಂದರು. ಪೀಟರ್ ತನ್ನ ತೂಕ ಮಾಡುವ ರೀತಿಯ ಬಗ್ಗೆ ಆನೆಗೆ ತಿಳಿಸಿದ. ಇದರಿಂದ ಆನೆಗೆ ಸಿಟ್ಟು ಬಂದಿತು. ಕವಿ ಆನೆ ಹತ್ತಿರ ಹೋಗಿ ಅದರ ಕಿವಿಯಲ್ಲಿ ಏನೋ ಹೇಳಿದ. ಆನೆ ಖುಷಿಯಿಂದ ತಲೆಯಾಡಿಸಿ ಒಪ್ಪಿಗೆ ನೀಡಿತು.ಕವಿ ಆನೆಯನ್ನು ನೀರಮೇಲೆ ತೇಲುವ ದೋಣಿಯಲ್ಲಿ ನಿಲ್ಲಿಸಿದ. ದೋಣಿ ನೀರಿನಲ್ಲಿ ಮುಳುಗಿದ ಮಟ್ಟವನ್ನು ಗುರುತು ಮಾಡಿಕೊಂಡ. ಅನಂತರ ಆನೆಯನ್ನು ಇಳಿಸಿ ಆ ಗುರುತಿನ ತನಕ ಮುಳುಗುವ ಹಾಗೆ ದೋಣಿಗೆ ಕಲ್ಲು ತುಂಬಿಸಿದ. ಆಮೇಲೆ ಆಕಲ್ಲುಗಳನ್ನು ತೆಗೆದು ಪೀಟರನ ಮುಂದೆ ಸುರಿದು "ಈ ಕಲ್ಲುಗಳನ್ನು ತೂಕ ಮಾಡು,ಆನೆಯ ತೂಕ ಸಿಗುತ್ತೆ" ಅಂದ. ಆನೆ ಕವಿಯ ಕಡೆಗೆ ಅಕ್ಕರೆಯಿಂದ ನೋಡಿತು.