ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಧೂಮಪಾನ

picture

 ಜಾನ್ ಮತ್ತು ಪೀಟರ್ ಒಮ್ಮೆ ಪ್ರಾರ್ಥನೆಗೆಂದು ಚರ್ಚಿಗೆ ಹೋದರು.ಅಷ್ಟೇನೂ ಜನರಿಲ್ಲದ ಆದಿನ ಚರ್ಚಿನಲ್ಲಿ ಪ್ರಾರ್ಥನೆ ಪೀಟರನಿಗೆ ಬೋರ್ ಎನಿಸಿ ಸಿಗರೇಟ್ ಸೇದಲು ಮನಸ್ಸು ಮಾಡಿದ.ಆದರೆ ಚರ್ಚ್ ಒಳಗೆ  ಸೇದಲು ಅನುಮತಿ ಇರಲಿಲ್ಲ.ಅದಕ್ಕೆ ಪೀಟರ್ ಫಾದರ್ ನನ್ನು "ಸ್ವಾಮೀ ಪ್ರಾರ್ಥನೆ ಮಾಡುತ್ತಾ ಸಿಗರೇಟ್ ಸೇದಬಹುದಾ?"ಎಂದು ಕೇಳಿದ.ಅದಕ್ಕೆ ಪಾದ್ರಿ ಒಪ್ಪಲಿಲ್ಲ.ಜಾನ್ ಗೊಳ್ಳನೆ ನಕ್ಕು,"ನೋಡು ಫೀಟರ್ ಅದೇ ಪ್ರಶ್ನೆಯನ್ನು ನಾನು ಕೇಳ್ತೀನಿ ಏನು ಉತ್ತರ ಬರುತ್ತೋ ನೋಡ್ತಿರು" ಎಂದು ಪಾದ್ರಿಯ ಬಳಿ ಹೋಗಿ" ಫಾದರ್ ನಾವು ಯಾವ ಯಾವ ಹೊತ್ತಿನಲ್ಲಿ ಪ್ರಾರ್ಥನೆ ಮಾಡಬಹುದು?"ಎಂದ. ಅದಕ್ಕೆ ಪಾದ್ರಿಯು"ಮಗೂ ನೀವು ಯಾವಾಗ ಬೇಕಾದರೂ ಪ್ರಾರ್ಥನೆ ಮಾಡಬಹುದು. ಕುಳಿತಲ್ಲಿ,ನಿಂತಲ್ಲಿ.ಮಲಗಿದಾಗ, ಊಟ ಮಾಡುವಾಗ,ಪ್ರಯಾಣ ಮಾಡುವಾಗ,ಯಾವುದೇ ಕೆಲಸಮಾಡುವಾಗ,ಇನ್ನೂ ಯಾವಾಗ ಬೇಕಾದರೂ" ಎಂದ. ತಕ್ಷಣ ಜಾನ್ "ಅಂದರೆ ಸಿಗರೇಟು ಸೇದುತ್ತಿರುವಾಗಲೂ ಮಾಡಬಹುದು ಎಂದಾಯ್ತು"ಫಾದರ್ ಗೆ ಕೂಡಲೇ ಉತ್ತರ ಕೊಡಲಾಗಲಿಲ್ಲ,ಜಾನ್ ಪೀಟರ್ ಕಡೆ ಹೆಬ್ಬೆಟ್ಟು ತೋರಿಸಿ "ಎಸ್" ಅಂದ.


 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023