ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಬೆಲೆ

picture

 à²¤à²°à²—ತಿಯಲ್ಲಿ ಮಕ್ಕಳಿಗೆ ಪಾಠ ಹೇಳುವಾಗ ಗುರುಗಳು ಮಕ್ಕಳಿಗೆ ಸಾಮಾನ್ಯ ತಿಳುವಳಿಕೆಯ ನೀತಿ ಕಥೆಗಳನ್ನೂ ಹೇಳುತ್ತಿದ್ದರು.ಒಂದು ದಿನ ಐವತ್ತು ಡಾಲರ್ ನೋಟನ್ನು ಹಿಡಿದು ತಂದು ಯಾರಿಗೆ ಬೇಕು ಈ ನೋಟು ಅಂದರು.ಮಕ್ಕಳು ಒಕ್ಕೊರಲಿನಲ್ಲಿ"ನನಗೆ" ಎಂದು ಕೂಗಿದರು.ನಂತರ ಗುರುಗಳು ಅದನ್ನು ಬೆರಳಿನಲ್ಲಿ ವರಟಾಗಿ ಕಿವುಚಿ "ಈಗ ಯಾರಿಗೆ ಬೇಕು" ಎಂದರು.ಎಲ್ಲರೂ "ನನಗೆ ನನಗೆ"ಎಂದು ಕೂಗಿದರು.ಅದಾದ ನಂತರ ನೋಟನ್ನು ನೆಲದಲ್ಲಿ ಹಾಕಿ ಕಾಲಿನಿಂದ ನೆಲದಲ್ಲಿದ್ದ ಮಣ್ಣಿನ ಜೊತೆ ಒಸಗಿ ಹಾಕಿದರು.ಮತ್ತದೇ ಪ್ರಶ್ನೆ, ಮಕ್ಕಳು ಆಗಲೂ "ನನಗೆ " ಎನ್ನಲು, ಗುರುಗಳು "ಮಕ್ಕಳೇ ಇದೇ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ವಿಷಯ, ನೋಟಿಗೆ ಏನಾದರೂ ಆಗಲಿ ಅದರ ಬೆಲೆ ಮಾತ್ರ ಕಡಿಮೆ ಆಗಲಿಲ್ಲ, ನಾವು ನಮ್ಮ ನಿರ್ಧಾರಗಳಿಂದ ಒಮ್ಮೆ ಕೆಳಕ್ಕೆ ಬೀಳಬಹುದು,ಕೆಟ್ಟವರ ಜೊತೆ ಬೆರೆತು ಕೊಳೆತು ತಪ್ಪು ಮಾಡಬಹುದು ಆದರೆ ನಮ್ಮನ್ನು ಇಷ್ಟ ಪಡುವವರಿಗೆ ಮಾತ್ರ ನಮ್ಮ ಮೇಲೆ ಅಷ್ಟೇ ಬೆಲೆ ಇರುತ್ತದೆ"

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  à²¬à²¿à²¡à³à²µà²¿à²¨à²²à³à²²à²¿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ à²Žà²‚ಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2026