ಯಾರು ಮೊದಲು

ಮನೆಯೊಡತಿ ಬಾಗಿಲು ತೆರೆದು ಹೊರಗೆ ಬರಲು ಅಂಗಳದಲ್ಲಿ ಬಿಳಿಕೂದಲು ಬೆಳೆಸಿಕೊಂಡಿದ್ದ 3 ಬಡ ಮುದುಕರು ಕುಳಿತಿದ್ದರು.ಅವರನ್ನು ಕಂಡು ಮರುಕದಿಂದ "ತಾವು ಯಾರೋ ನನಗೆ ತಿಳಿಯದು,ಹಸಿದಂತೆ ಕಾಣುತ್ತೀರಿ,ಒಳಗೆ ಬನ್ನಿ ತಿನ್ನಲು ಏನಾದರು ಕೊಡುವೆ ಎಂದಳು.ಅದಕ್ಕೆ ಅವರಲ್ಲೊಬ್ಬನು "ನಿಮ್ಮ ಮನೆಯ ಯಜಮನ ಮನೆಯಲ್ಲಿರುವನೋ?ಆತನನ್ನು ಕೇಳು ನಂತರ ಬರುವೆವು"ಎಂದ.ಮನೆಯ ಯಜಮಾನ ಇಲ್ಲವೆಂದು ಕೇಳಿ, ಆತನು ಬಂದಮೇಲೆ ಒಳಕ್ಕೆ ಬರುತ್ತೇವೆ ಎಂದರು.ಯಜಮಾನ ಬಂದಾಗ ಅವರನ್ನು ಕಂಡು, ಹೆಂಡತಿಯನ್ನು ವಿಚಾರಿಸಿ ವಿವರವಾಗಿ ವಿಷಯವೇನೆಂದು ತಿಳಿದ,ಒಳಗೆ ಕರೆಯಲು ಒಪ್ಪಿಗೆ ಕೊಟ್ಟ.ಆದರೆ ಆ ಮೂವರೂ ಒಟ್ಟಿಗೆ ಒಳಗೆ ಬರಲು ಸಿದ್ಧವಿರಲಿಲ್ಲ.ಅವರಲ್ಲಿ ಒಬ್ಬ "ನನ್ನ ಹೆಸರು ಸಂಪತ್ತು, ಈತನ ಹೆಸರು ಯಸಸ್ಸು, ಆತನ ಹೆಸರು ಪ್ರೀತಿ" ಎಂದು ಹೇಳಿದ."ನಮ್ಮಲ್ಲಿ ಯಾವನೋ ಒಬ್ಬನನ್ನು ಮಾತ್ರ ಒಳಗೆ ಕರೆಯಬಹುದು.ನೀವು ಯಾರನ್ನು ಆರಿಸುವಿರೋ ಯೋಚಿಸಿ ಬನ್ನಿ" ಎಂದ.ಒಳಗೆ ಹೊರಟ ಯಜಮಾನಿ ಗಂಡನ ಜೊತೆ ತುಸುಹೊತ್ತು ವಿಚಾರಣೆ ಮಾಡಿ "ಪ್ರೀತಿಯನ್ನು ಒಳಗೆ ಕರೆದರು.ಆಗ ಉಳಿದ ಇನ್ನಿಬ್ಬರೂ ಅವನ ಜೊತೆ ಒಳಗೆ ಬಂದರು.ಬೇರೆ ಆಯ್ಕೆ ಮಾಡಿದ್ದರೆ ಏನಾಗುತ್ತಿತ್ತೆಂದು ನೀವೇ ಯೋಚಿಸಿ....