ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಕುರುಡ-ರಾಜ

picture

ರಾಜನೊಬ್ಬ ಬೇಟೆಗೆ ಹೋಗಿ ಹಿಂತಿರುಗುವಾಗ ಒಂದು ತೋಟದ ಹಾದಿಯಲ್ಲಿ ಹಾದು ಹೋಗುತ್ತಿರಲು ಅಲ್ಲಿ ಮಾವಿನ ತೋಪೊಂದು ಕಂಡಿತು.ತನ್ನ ಸೇವಕರಿಗೆ ಒಂದಷ್ಟು ಹಣ್ಣುಗಳನ್ನು ಕಿತ್ತು ತರಲು ಆಜ್ಞೆ ಮಾಡಿದ. ಅಲ್ಲೇ ದಾರಿಯಲ್ಲು ಸಾಗುತ್ತಿದ್ದ ಒಬ್ಬ ಕುರುಡ ಅಯ್ಯೋ ಎಲ್ಲಿ ಬಂತು ಮಾವಿನ ಹಣ್ಣು? ಏನೂ ಇಲ್ಲ ಅಲ್ಲಿ ಅಂದನು.ಅವನ ಮಾತಿಗೆ ಬೆಲೆ ಕೊಡದೆ ಸೇವಕರು ತೋಟಕ್ಕೆ ನುಗ್ಗಿ ಬರಿಗೈಯಲ್ಲಿ ತಿರುಗಿ ಬಂದರು.ರಾಜನಿಗೆ ಕುತೂಹಲವಾಗಿ ಆ ಕುರುಡನನ್ನು ಕೂಗಿ "ಅಯ್ಯಾ ನಿನಗೆ ಹೇಗೆ ಗೊತ್ತು ಅಲ್ಲಿ ಮಾವಿನ ಹಣ್ಣು ಇಲ್ಲ ಅಂತಾ/" ಅಂದ.ಅದಕ್ಕೆ ಆತ "ಸ್ವಾಮೀ ಮಾವಿನ ಕಾಲ ಮುಗಿದು ಎರಡುತಿಂಗಳಾಯ್ತು,ನಿಮಗೆ ಕಾಣುವುವು ಬರೀ ಕೊಳೆತು ಕೆಟ್ಟ ಹಣ್ಣುಗಳು". ಕುರುಡನಾದರೂ ಆತನ ಜಾಣ್ಮೆಯನ್ನು ಮೆಚ್ಚಿ ರಾಜ ಆತನನ್ನು ತನ್ನ ರಾಜ್ಯಕ್ಕೆ ಕರೆತಂದ.ಊರ ಹೊರಗೆ ಒಂದು ಗುಡಿಸಿಲು ಕಟ್ಟಿಸಿಕೊಟ್ಟು.ದಿನಕ್ಕೆ ಎರಡುಹೊತ್ತು ಊಟದ ವ್ಯವಸ್ತೆ ಮಾಡಿಕೊಟ್ಟ.
ಒಮ್ಮೆ ರಾಜ್ಯಕ್ಕೆ ಬೇರೆ ದೇಶದ ವ್ಯಾಪಾರಿ ಬಂದು ವಜ್ರವನ್ನು ರಾಜನಿಗೆ ಮಾರಲು ಅರಮನೆಗೆ ನಡೆದ.ಎಲ್ಲರಿಗೂ ಅವನಲ್ಲಿದ್ದ ವಜ್ರದ ಸಂಗ್ರಹ ನೋಡಿ ಕೊಳ್ಳುವ ಆಸೆಯಾಯಿತು.ರಾಜನಿಗೆ ಅನುಮಾನ ವಾಯಿತು, "ಎಲೈ ವ್ಯಾಪಾರಿಯೇ ಇವು ಅಸಲೀ ವಜ್ರಗಳು ಎನ್ನುವುದನ್ನು ಹೇಗೆ ನಂಬುವುದು?" ಎಂದನು. ವ್ಯಾಪಾರಿ "ಬೇಕಿದ್ದರೆ ನಿಮ್ಮಲ್ಲೇ ಇರುವ ಪರಿಣಿತರನ್ನು ಕೇಳಿ ಪರೀಕ್ಷಿಸಿ ನೋಡಿ" ಎಂದನು. ಆಗ ರಾಜನಿಗೆ ಆ ಕುರುಡನ ನೆನಪಾಯಿತು,ಅವನನ್ನು ಅರಮನೆಗೆ ಕರೆತಂದರು.ವಿಷಯ ತಿಳಿಸಿದರು.ಸಭೆಯಲ್ಲಿದ್ದವರಿಗೆ ನಗು “ಈ ಕುರುಡ ಹೇಗೆ ತಾನೇ ಹೇಳಿಯಾನು?” ಅವನು ರಾಜನ ಬಳಿ ಇದ್ದ ಒಂದು ಹಳೆಯ ವಜ್ರವನ್ನು ಕೇಳಿ ಪಡೆದನು.ನಂತರ ವ್ಯಾಪಾರಿಯ ಬಳಿ ಒಂದನ್ನು ಕೇಳಿ ಪಡೆದು ಅಲ್ಲೇ ಕಿಟಕಿಯ ಬಳಿ ಹೋಗಿ ನಿಂತನು. ಕೆಲವು ನಿಮಿಷಗಳ ಕಾಲ ಅಲ್ಲೇ ನಿಂತು ನಂತರ ಹಿಂತಿರುಗಿ ಬಂದು ವ್ಯಾಪಾರಿ ವಜ್ರ ಎಂದು ಹೇಳಿ ಕೊಟ್ಟದ್ದನ್ನು ಅವನ ಕೈಗೇ ಇಟ್ಟನು.
ಸ್ವಲ್ಪ ಹೊತ್ತಿನ ಬಳಿಕ ರಾಜನ ಬಳಿ ಬಂದು ವ್ಯಾಪಾರಿ ಕೊಟ್ಟ ವಜ್ರ ನಿಜವಾದ ವಜ್ರವಲ್ಲ ಬರೀ ಗಾಜಿನ ತುಂಡು ಎಂದನು.ವ್ಯಾಪಾರಿ ತಲೆ ತಗ್ಗಿಸಿದನು. ಎಲ್ಲರಿಗೂ ಆಶ್ಚರ್ಯ, ಸೇವಕರು ಮೋಸದ ವ್ಯಾಪಾರಿಯನ್ನು ಹೊಡೆದೋಡಿಸಿದರು. ನಂತರ "ನಕಲಿ ವಜ್ರವನ್ನು ಹೇಗೆ ಕಂಡು ಹಿಡಿದೆ" ಎಂದು ರಾಜನು ಕೇಳಿದನು. ಅದಕ್ಕೆ ಆ ಕುರುಡನು "ಅಯ್ಯಾ ರಾಜ, ಗಾಜು ಬಿಸಿಲಿಗೆ ಹಿಡಿದಾಗ ಬಿಸಿಯಾಗುತ್ತದೆ ಆದರೆ ವಜ್ರ ಆಗದು" ಎಂದ. ಅವನ ಜಾಣ್ಮೆ ಮೆಚ್ಚಿ ರಾಜ ಅವನಿಗೆ ಬಹುಮಾನವಿತ್ತ. ಹೀಗೇ ಆ ಕುರುಡ ರಾಜನಿಗೆ ತುಂಬಾ ಉಪಕಾರಿಯಾಗಿ ಇದ್ದ. ಹೀಗೇ ಹಲವಾರು ಸಂದರ್ಭಗಳು ಬಂದಾಗ ಯಾರಿಂದಲೂ ಆಗದ ಕೆಲಸ ಕುರುಡ ತನ್ನ ಬುದ್ಧಿವಂತಿಕೆಯಿಂದ ರಾಜನಿಗೆ ಸಹಕಾರಿಯಾಗುತ್ತಾ ಬಂದ.
ಕೆಲವು ವರ್ಷಗಳು ಕಳೆದವು. ರಾಜ ಒಮ್ಮೆ ಒಂಟಿಯಾಗಿದ್ದಾಗ ಕುರುಡನನ್ನು ಕರೆದು “ ನಾನು ಬಹಳ ದಿನಗಳಿಂದ ಒಂದು ವಿಷಯ ನಿನ್ನಲ್ಲಿ ಹೇಳಿಕೊಳ್ಳಬೇಕು ಅನ್ನಿಸುತ್ತಿದೆ,ಇದು ತೀರಾ ಸ್ವಂತ ವಿಷಯ, ಅದೇನೆಂದರೆ ನಾನು ಈ ರಾಜ್ಯವನ್ನು ಅನ್ಯಾಯವಾಗಿ ಅಕಿದುಕೊಂಡು ರಾಜನಾದೆ” ಅಂದ. ಅದಕ್ಕೆ ಆ ಕುರುಡ “ಅದು ನನಗೆ ಎಂದೋ ತಿಳಿದಿತ್ತು ಸ್ವಾಮಿ” ಎಂದು ಸುಲಭವಾಗಿ ಉತ್ತರಿಸಿದ. ರಾಜನಿಗೆ ಅಚ್ಚರಿಯಾಯಿತು. “ಹಾ! ನಿನಗೆ ಮೊದಲೇ ತಿಳಿದಿತ್ತಾ? ಯಾರು ನಿನಗೆ ಹೇಳಿದ್ದು? “ ಎಂದು ಕುತೂಹಲದಿಂದ ಕೇಳಿದ. ಅದಕ್ಕೆ ಆ ಜಾಣನ ಉತ್ತರ ಹೀಗಿತ್ತು. “ಸ್ವಾಮೀ ನನ್ನನ್ನು ಉಪಯೋಗಿಸಿಕೊಳ್ಳಲು ನಿಮ್ಮೂರಿಗೆ ಕರೆತಂದು ಊರ ಹೊರಗೆ ಗುಡಿಸಿಲಿನಲ್ಲಿರಿಸಿ ಎರಡೇ ಎರಡು ಹೊತ್ತು ಊಟ ಬಿಟ್ಟು ಬೇರೇನೂ ವಿಚಾರಿಸಿಕೊಳ್ಳದಿದ್ದಾಗಲೇ ಅರಿವಾಗಿತ್ತು” ಎಂದು ಸಮಾಧಾನವಾಗಿ ಹೇಳಿದ. ರಾಜನಿಗೆ ತಲೆ ತಗ್ಗಿಸಿ ನಿಂತ. ತಾನೂ ಮುಂದೆ ಭೋಗ ಭಾಗ್ಯ ಅನುಭವಿಸುದನ್ನು ಕಡಿಮೆ ಮಾಡಿ ಜ್ಞಾನಕ್ಕಾಗಿ ಹಿರಿಯರ ಸಂಗ ಬೆಳೆಸಿ ಸ್ವಂತ ಬುದ್ಧಿಯಿಂದ ರಾಜ್ಯಭಾರ ನಡೆಸಿದ.


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  à²¬à²¿à²¡à³à²µà²¿à²¨à²²à³à²²à²¿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ à²Žà²‚ಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025